ಬಿಹಾರ: ಭೀಕರ ಅಪಘಾತದಲ್ಲಿ ಇಬ್ಬರು ಪತ್ರಕರ್ತರ ಸಾವು, ಇದು ಕೊಲೆ ಎಂದ ಕುಟುಂಬಸ್ಥರು!
ಸ್ಥಳೀಯ ರಾಜಕೀಯ ಪ್ರಭಾವಿ ಮುಖಂಡನ ಎಸ್ ಯುವಿ ಕಾರೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಪತ್ರಕರ್ತರು ಸಾವನ್ನಪ್ಪಿರುವ ಘಟನೆ ಬಿಹಾರದ ಬೋಜ್ ಪುರದಲ್ಲಿ ನಡೆದಿದೆ.

Published On :
ಭೋಜ್ ಪುರ: ಸ್ಥಳೀಯ ರಾಜಕೀಯ ಪ್ರಭಾವಿ ಮುಖಂಡನ ಎಸ್ ಯುವಿ ಕಾರೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಪತ್ರಕರ್ತರು ಸಾವನ್ನಪ್ಪಿರುವ ಘಟನೆ ಬಿಹಾರದ ಬೋಜ್ ಪುರದಲ್ಲಿ ನಡೆದಿದೆ.
ಮೃತ ಪತ್ರಪರ್ತರನ್ನು ನವೀನ್ ನಿಶ್ಚಲ್ ಮತ್ತು ವಿಜಯ್ ಸಿಂಗ್ ಎಂದು ಗುರುತಿಸಲಾಗಿದ್ದು, ಈ ಪೈಕಿ ನವೀನ್ ನಿಶ್ಚಲ್ ಎಂಬಾತ ಹಿಂದೂ ದಿನಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದನು ಎಂದು ತಿಳಿದುಬಂದಿದೆ.
ಇನ್ನು ಇದು ಅಪಘಾತವಲ್ಲ. ಸ್ಥಳೀಯ ಪ್ರಭಾವಿ ಮುಖಂಡ ತನ್ನ ಬೆಂಬಲಿಗರ ಮೂಲಕ ಮಾಡಿಸಿರುವ ಕೊಲೆಯಾಗಿದೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಅಂತೆಯೇ ಬಿಹಾರದಲ್ಲಿ ಈ ಸಂಬಂಧ ವ್ಯಾಪಕ ಪ್ರತಿಭಟನೆ ಭುಗಿಲೆದ್ದಿದ್ದು, ಅಪಘಾತಕ್ಕೆ ಕಾರಣವಾದ ಎಸ್ ಯುವಿ ಕಾರನ್ನು ಆಕ್ರೋಶ ಭರಿತ ಸಾರ್ವಜನಿಕರು ಬೆಂಕಿ ಇಟ್ಟು ಸುಟ್ಟು ಹಾಕಿದ್ದಾರೆ. ಅಲ್ಲದೆ ಬೋಜ್ ಪುರದಲ್ಲಿರುವ ರಾಜಕೀಯ ಮುಖಂಡನ ಮನೆಗೂ ಬೆಂಕಿ ಇಟ್ಟಿದ್ದಾರೆ. ಈ ಸಂಬಂಧ ನವೀನ್ ನಿಶ್ಚಲ್ ಸಹೋದರ ರಾಜೇಶ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾಜೇಶ್ ನೀಡಿರುವ ದೂರಿನಲ್ಲಿರುವಂತೆ ತನ್ನ ಸಹೋದರನ ಸಾವಿಗೆ ಸ್ಥಳೀಯ ಪಂಚಾಯತ್ ಮುಖ್ಯಸ್ಥ ಅಹ್ಮದ್ ಅಲಿ ಅಲಿಯಾಸ್ ಹರ್ಸು ಮತ್ತು ಆತನ ಪುತ್ರ ದಬ್ಲೂ ಅವರೇ ಕಾರಣ ಎಂದು ಆರೋಪಿಸಲಾಗಿದ್ದು, ಅಪಘಾತ ಮಾಡಿದ ಎಸ್ ಯುವಿ ಇದೇ ಹರ್ಸುಗೆ ಸೇರಿದ್ದಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಬೋಜ್ ಪುರ ಜಿಲ್ಲಾ ಎಸ್ ಪಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


