'ಡಿಲೀಟ್ ನಮೋ ಆ್ಯಪ್' ಅಭಿಯಾನದ ಬಳಿಕ ಆ್ಯಪ್ ಜನಪ್ರಿಯತೆ ಹೆಚ್ಚಾಯ್ತು!
ಅಮೆರಿಕಕ್ಕೆ ದತ್ತಾಂಶ ಸೋರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರಂಭಿಸಿದ್ದ ಡಿಲೀಟ್ ನಮೋ ಆ್ಯಪ್ ಅಭಿಯಾನದ ಬಳಿಕ ನಮೋ ಆ್ಯಪ್ ಜನಪ್ರಿಯತೆ ಹಚ್ಚಾಗಿದೆ ಎಂದು ಬಿಜೆಪಿ ಹೇಳಿದೆ.

Published On :
ನವದೆಹಲಿ: ಅಮೆರಿಕಕ್ಕೆ ದತ್ತಾಂಶ ಸೋರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರಂಭಿಸಿದ್ದ ಡಿಲೀಟ್ ನಮೋ ಆ್ಯಪ್ ಅಭಿಯಾನದ ಬಳಿಕ ನಮೋ ಆ್ಯಪ್ ಜನಪ್ರಿಯತೆ ಹಚ್ಚಾಗಿದೆ ಎಂದು ಬಿಜೆಪಿ ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ನಮೋ ಆ್ಯಪ್ ಬಗ್ಗೆ ಭಯ ನೋಡಿದರೆ ತಮಾಷೆ ಅನಿಸುತ್ತದೆ. ರಾಹುಲ್ ಬಾಟ್‌ಗಳು (ರೊಬೋಟ್) #ಡಿಲೀಟ್ ನಮೋಆ್ಯಪ್ ಅಭಿಯಾನ ಮಾಡಿದ ಬಳಿಕ ಆ್ಯಪ್‌ನ ಜನಪ್ರಿಯತೆ ಹೆಚ್ಚಾಗಿದೆ ಎಂದು ಬಿಜೆಪಿ ರಾಹುಲ್ ಗಾಂಧಿ ಕಾಲೆಳೆದಿದೆ.
ನಮಗೆಲ್ಲರಿಗೂ ತಿಳಿದೇ ಇದೆ.. ಯಾವುದೇ ವಿಚಾರದಲ್ಲೂ ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರಿಗೆ ಸರಿಸಮವಲ್ಲ. ನಮೋ ಆ್ಯಪ್ ಕುರಿತಂತೆ ಅವರು ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ. ನಿಜ ಹೇಳಬೇಕು ಎಂದರೆ ಈ ಆರೋಪದ ಮೂಲಕ ರಾಹುಲ್ ತಂತ್ರಜ್ಞಾನದ ಕುರಿತು ತಮಗೆ ಯಾವುದೇ ರೀತಿಯ ಜ್ಞಾನವಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಆದರೆ ರಾಹುಲ್ ಗಾಂಧಿ #ಡಿಲೀಟ್ ನಮೋ ಆ್ಯಪ್ ಅಭಿಯಾನ ಆರಂಭಿಸುವ ಮೂಲಕ ಆ್ಯಪ್ ನ ಜನಪ್ರಿಯತೆ ಹೆಚ್ಚಿಸಿದ್ದು, ಕೇವಲ 24 ಗಂಟೆಗಳಲ್ಲಿ ಲಕ್ಷಾಂತರ ಹೊಸ ಬಳಕೆದಾರರು ಆ್ಯಪ್ ಡೌನ್ಲೋಡ್ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿCongressಕಾಂಗ್ರೆಸ್New DelhibjpಬಿಜೆಪಿRahul Gandhiರಾಹುಲ್ ಗಾಂಧಿದತ್ತಾಂಶ ಸೋರಿಕೆData Leak RowNaMo appನಮೋ ಆ್ಯಪ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


