ಕೇರಳ ಐಎಸ್ ಪ್ರಕರಣ: ಯಾಸ್ಮೀನ್ ಅಹ್ಮದ್ ಗೆ 7 ವರ್ಷಗಳ ಕಠಿಣ ಸೆರೆವಾಸ
17 ಮಂದಿ ಸದಸ್ಯರೊಡನೆ ಕಾಸರಗೋಡಿನಿಂದ ಅಪ್ಘಾನಿಸ್ತಾನಕ್ಕೆ ವಲಸೆ ಹೋಗಲು ಸಂಚು ರೂಪಿಸಿದ್ದ ಬಿಹಾರ ಮೂಲದ ಯಾಸ್ಮೀನ್ ಅಹಮದ್ ಗೆ ಎನ್ಐಎ ...

Published On :
ಕೊಚ್ಚಿ: 17 ಮಂದಿ ಸದಸ್ಯರೊಡನೆ ಕಾಸರಗೋಡಿನಿಂದ ಅಪ್ಘಾನಿಸ್ತಾನಕ್ಕೆ ವಲಸೆ ಹೋಗಲು ಸಂಚು ರೂಪಿಸಿದ್ದ ಬಿಹಾರ ಮೂಲದ ಯಾಸ್ಮೀನ್ ಅಹಮದ್ ಗೆ ಎನ್ಐಎ ಕೋರ್ಟ್ 7 ವರ್ಷಗಳ ಕಠಿಣ ಸೆರೆವಾಸ ವಿಧಿಸಿದೆ.
ವಿವಿಧ ದಂಡ ಸಂಹಿತೆಗಳಡಿ ಪ್ರಕರಣ ದಾಖಲಿಸಿಕೊಂಡಿದ್ದ ರಾಷ್ಟ್ರೀಯ ತನಿಖಾ ದಳ 25 ಸಾವಿರ ರು, ದಂಡದ ಜೊತೆಗೆ 7 ವರ್ಷ ಸೆರೆಮನೆ ವಾಸ ವಿಧಿಸಿದೆ. ಒಂದು ವೇಳೆ ದಂಡ ಕಟ್ಟಲು ವಿಫಲವಾದರೇ ಮೂರು ತಿಂಗಳ ಹೆಚ್ಚುವರಿ ಶಿಕ್ಷೆ ಅನುಭವಿಸುವಂತೆ ಸೂಚಿಸಿದೆ.
ಐಎಸ್ ಸೇರಲು ತೆರಳುತ್ತಿದ್ದ ಯಾಸ್ಮಿನ್ ಮತ್ತು 17 ಮಂದಿಯನ್ನು 2016 ರ ಜುಲೈ ತಿಂಗಳಿನಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಎನ್ ಐ ಎ ತಂಡ ವಶಕ್ಕೆ ತೆಗೆದುಕೊಂಡಿತ್ತು. ನಂತರ ತನಿಖೆ ಆರಂಭಿಸಿತ್ತು. ಅಬ್ದುಲ್ ರಶೀದ್ ಮತ್ತು ಯಾಸ್ಮೀನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


