ವಿಶ್ವ ವಿದ್ಯಾಲಯಗಳಲ್ಲಿ 'ರಾಷ್ಟ್ರ ವಿರೋಧಿ' ಪಟ್ಟ ಸಲ್ಲದು: ರಘುರಾಮ್ ರಾಜನ್
ವಿಶ್ವ ವಿದ್ಯಾಲಯಗಳಲ್ಲಿ 'ರಾಷ್ಟ್ರ ವಿರೋಧಿ' ಪಟ್ಟ ಸಲ್ಲದು ಎಂದು ಮಾಜಿ ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಶನಿವಾರ ಹೇಳಿದ್ದಾರೆ.

Published On :
ನವದೆಹಲಿ: ವಿಶ್ವ ವಿದ್ಯಾಲಯಗಳಲ್ಲಿ 'ರಾಷ್ಟ್ರ ವಿರೋಧಿ' ಪಟ್ಟ ಸಲ್ಲದು ಎಂದು ಮಾಜಿ ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಶನಿವಾರ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಘುರಾಮ್ ರಾಜನ್ ಅವರು, ಅತ್ಯುತ್ತಮ ಆರೋಗ್ಯಕರ ಚರ್ಚೆಗಳಿಗೆ ವಿಶ್ವವಿದ್ಯಾಲಯಗಳು ಅತ್ಯುತ್ತಮ ವೇದಿಕೆಗಳಾಗಿವೆ. ಹೀಗಾಗಿ ವಿಶ್ವ ವಿದ್ಯಾಲಯಗಳನ್ನು ಗೌರವಿಸಬೇಕು. ಎಲ್ಲರೂ ಮತ್ತೊಬ್ಬರ ಚಿಂತನೆಗಳನ್ನು ಆಲಿಸಬೇಕು ಮತ್ತು ಗೌರವಿಸಬೇಕು. ಆಗ ಮಾತ್ರ ಉತ್ತಮ ತಯಾರಿಕೆ ಹೊರಬರುತ್ತದೆ. ಹೀಗಾಗಿ ಯಾರಿಗೂ ಯಾರೂ 'ರಾಷ್ಟ್ರ ವಿರೋಧಿ' ಪಟ್ಟ ನೀಡಬಾರದು ಎಂದು ಹೇಳಿದರು.
ಇದೇ ವೇಳೆ ಚಿಕಾಗೋ ವಿವಿ ಘಟನೆಯೊಂದನ್ನು ನೆನಪಿಸಿಕೊಂಡ ರಾಜನ್, ಅಂದಿನ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಜಿ ಮುಖ್ಯ ಕಾರ್ಯತಂತ್ರಜ್ಞ ಸ್ಟೀವ್ ಬ್ಯಾನನ್ ಪಾಲ್ಗೊಂಡಿದ್ದರು. ಅಂದು ಅವರ ವಿಚಾರಧಾರೆಗಳು ಇಷ್ಟವಿರದೇ ಇದ್ದರೂ ಅಲ್ಲಿ ನೆರೆದಿದ್ದವರು ಅವರ ಭಾಷಣ ಆಲಿಸಿದ್ದರು. ನಾವು ಮೊದಲು ಅಂತಹ ಗೌರವವನ್ನು ಕಲಿಯಬೇಕಿದೆ. ನಿಮಗೆ ಒಬ್ಬರ ವಿಚಾರಧಾರೆ ಇಷ್ಟವಿಲ್ಲ ಎಂದಾದರೇ ಅವರ ಸಿದ್ಧಾಂತಗಳನ್ನು ಪಾಲಿಸಬೇಡಿ. ಅದನ್ನು ಬಿಟ್ಟು ಅವರ ಭಾಷಣಕ್ಕೆ ಅಡ್ಡಿ ಪಡಿಸಬೇಡಿ. ಚರ್ಚೆಗೆ ಅಡ್ಡಿ ಪಡಿಸದೇ ಆರೋಗ್ಯಕರ ಚರ್ಚೆಗೆ ಅವಕಾಶ ಮಾಡಿಕೊಡಿ. ನಿಮಗಿಷ್ಟವಿಲ್ಲ ಎಂದ ಮಾತ್ರಕ್ಕೇ ರಾಷ್ಟ್ರ ವಿರೋಧಿ ಪಟ್ಟ ಕಟ್ಟುವುದು ಸರಿಯಲ್ಲ ಎಂದು ರಘುರಾಮ್ ರಾಜನ್ ಕಿವಿಮಾತು ಹೇಳಿದರು.
ನಾವು ಮುಂದಿನ ಪೀಳಿಗೆಗೆ ಒಂದು ಅತ್ಯುತ್ತಮ ಚರ್ಚೇ ವೇದಿಕೆ ಸೃಷ್ಟಿಸಬೇಕಿದೆ. ಅಲ್ಲಿ ಯಾವುದೇ ವಿಚಾರ ನಿರ್ಭೀತಿಯಿಂದ, ಆರೋಗ್ಯಕರ ಚರ್ಚೆಗೆ ಒಳಗಾಗಬೇಕು. ಅಲ್ಲಿನವರು ಸ್ವತಂತ್ರ್ಯವನ್ನು ಬಳಕೆ ಮಾಡಬೇಕೇ ಹೊರತು ಪರವಾನಗಿಯನ್ನಲ್ಲ. ಸಾಮಾಜದ ಬೆಳವಣಿಗೆ ಅನುಕೂಲವಾಗುವಂತಹ ಚರ್ಚೆಗಳಿಗೆ ಅವಕಾಶ ನೀಡಿ ಎಂದು ರಘುರಾಮ್ ರಾಜನ್ ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew DelhiuniversityRBIRaghuram Rajanವಿಶ್ವವಿದ್ಯಾಲಯಆರ್ ಬಿಐರಘುರಾಮ್ ರಾಜನ್anti-nationalರಾಷ್ಟ್ರ ವಿರೋಧಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


