ರಾಜ್ಯಸಭೆ ಚುನಾವಣೆ: ಬಿಜೆಪಿಗೆ ಮತಹಾಕಿದ ಬಿಎಸ್ ಪಿ ಶಾಸಕ ಅನಿಲ್ ಕುಮಾರ್ ಸಿಂಗ್ ಪಕ್ಷದಿಂದ ಅಮಾನತು
ಉತ್ತರ ಪ್ರದೇಶ ರಾಜ್ಯಸಭೆ ಚುನಾವಣೆಯಲ್ಲಿಅಡ್ಡಮತದಾನ ಮಾಡಿದ ಬಿಎಸ್ ಪಿ ಶಾಸಕ ಅನಿಲ್ ಕುಮಾರ್ ಸಿಂಗ್ ರನ್ನು ಪಕ್ಷದ ಮುಖ್ಯಸ್ಥೆ ಮಾಯಾವತಿ ಅಮಾನತು ಮಾಡಿದ್ದಾರೆ.
.jpg?w=1200&q=68&auto=format,compress)
Published On :
ಲಖನೌ: ಉತ್ತರ ಪ್ರದೇಶ ರಾಜ್ಯಸಭೆ ಚುನಾವಣೆಯಲ್ಲಿಅಡ್ಡಮತದಾನ ಮಾಡಿದ ಬಿಎಸ್ ಪಿ ಶಾಸಕ ಅನಿಲ್ ಕುಮಾರ್ ಸಿಂಗ್ ರನ್ನು ಪಕ್ಷದ ಮುಖ್ಯಸ್ಥೆ ಮಾಯಾವತಿ ಅಮಾನತು ಮಾಡಿದ್ದಾರೆ.
ರಾಜ್ಯಸಭೆಯಲ್ಲಿ ಪಕ್ಷದ ಆದೇಶ ಉಲ್ಲಂಘಿಸಿ ಬಿಜೆಪಿ ಪರ ಅಡ್ಡಮತದಾನ ಮಾಡಿದ ಹಿನ್ನಲೆಯಲ್ಲಿ ಶಾಸಕ ಅನಿಲ್ ಕುಮಾರ್ ಸಿಂಗ್ ವಿರುದ್ದ ಬಿಎಸ್ ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಶಿಸ್ತು ಕ್ರಮ ಕೈಗೊಂಡಿದ್ದಾರೆ. ಶಿಸ್ತು ಉಲ್ಲಂಘನೆ ಮಾಡಿದ ಆರೋಪದ ಮೇರೆಗೆ ಶಾಸಕ ಅನಿಲ್ ಕುಮಾರ್ ಸಿಂಗ್ ರನ್ನು ಪಕ್ಷದಿಂದ ಅಮಾನತು ಮಾಡಿದ್ದಾರೆ.
ನಿನ್ನೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಬಿಎಸ್ ಪಿ ಶಾಸಕ ಅನಿಲ್ ಕುಮಾರ್ ಸಿಂಗ್ ಬ್ಯಾಲೆಟ್ ಪೇಪರ್ ನಲ್ಲಿ ಬಿಜೆಪಿ ಗುರುತಿಗೆ ಟಿಕ್ ಮಾಡಿ ಮತ ಹಾಕಿದ್ದರು. ಈ ವೇಳೆ ಮಾತನಾಡಿದ ಅವರು ಪ್ರಸ್ತುತ ನಾನು ಮಾತ್ರ ಬಿಜೆಪಿ ಮತ ನೀಡಿದ್ದು, ಇತರರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಲಖನೌLucknowBSPಬಿಎಸ್ ಪಿRajya Sabha electionರಾಜ್ಯಸಭೆ ಚುನಾವಣೆಅಡ್ಡಮತದಾನCross-VoteAnil kumar Singhಅನಿಲ್ ಕುಮಾರ್ ಸಿಂಗ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


.jpg?w=64&q=30&auto=format,compress)