ಸಂಸತ್ತು ಗದ್ದಲದ ಹಿಂದಿನ ಕಾರಣಗಳನ್ನು ಸಂಸದರು ವಿವರಿಸುತ್ತಾರೆ; ಪ್ರಕಾಶ್ ಜವಡೇಕರ್
ಸಂಸತ್ತು ಗದ್ದಲ ಕುರಿತ ಹಿಂದಿನ ಕಾರಣಗಳನ್ನು ಆಯಾ ಕ್ಷೇತ್ರಗಳಿಗೆ ಭೇಟಿ ನೀಡಿ ಸಂಸದರೇ ಜನರಿಗೆ ವಿವರಣೆ ನೀಡುತ್ತಾರೆಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜವಡೇಕರ್ ಅವರು ಶುಕ್ರವಾರ ಹೇಳಿದ್ದಾರೆ...

Published On :
ನವದೆಹಲಿ: ಸಂಸತ್ತು ಗದ್ದಲ ಕುರಿತ ಹಿಂದಿನ ಕಾರಣಗಳನ್ನು ಆಯಾ ಕ್ಷೇತ್ರಗಳಿಗೆ ಭೇಟಿ ನೀಡಿ ಸಂಸದರೇ ಜನರಿಗೆ ವಿವರಣೆ ನೀಡುತ್ತಾರೆಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜವಡೇಕರ್ ಅವರು ಶುಕ್ರವಾರ ಹೇಳಿದ್ದಾರೆ.
ಸಂಸತ್ತು ಕಲಾಪಕ್ಕೆ ವಿರೋಧ ಪಕ್ಷಗಳು ಅಡ್ಡಿಯುಡ್ಡು ಮಾಡುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಅವರ ಸೂಚನೆ ಮೇರೆಗೆ ಸಂಸತ್ತಿನಲ್ಲಿರುವ ಬಿಜೆಪಿ ಸಂದಸರು ತಮ್ಮ ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿ ಸಂಸತ್ತು ಗದ್ದಲ ಕುರಿತ ಹಿಂದಿನ ಕಾರಣಗಳನ್ನು ಜನರಿಗೆ ವಿವರಿಸುತ್ತಾರೆಂದು ಹೇಳಿದ್ದಾರೆ.
ಸಂಸತ್ತು ಗದ್ದಲ ಕುರಿತಂತೆ ಈಗಾಗಲೇ ಪಕ್ಷದ ಸಂಸದರೊಂದಿಗೆ ಮಾತುಕತೆ ನಡೆಸಿರುವ ಅಮಿತ್ ಶಾ ಅವರು, ವಾರಾಂತ್ಯ ಸಂದರ್ಭಗಳಲ್ಲಿ ತಮ್ಮ ತಮ್ಮ ಕ್ಷೇತ್ರಗಳಿಗೆ ಆಯಾ ಸಂಸದರು ಭೇಟಿ ನೀಡಬೇಕು. ಭೇಟಿ ಸಂದರ್ಭದಲ್ಲಿ ಸಂಸತ್ತಿನಲ್ಲಿ ಉಂಟುಮಾಡಿದ ಗದ್ದಲದ ಹಿಂದಿನ ಕಾರಣಗಳನ್ನು ಕಾರ್ಯಕ್ರಮಗಳು ಹಾಗೂ ಪತ್ರಿಕಾಗೋಷ್ಠಿಯಲ್ಲಿ ಜನರಿಗೆ ವಿವರಿಸಬೇಕೆಂದು ತಿಳಿಸಿದ್ದರೆಂದು ಜವಡೇಕರ್ ಅವಹು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


