ದೇಶ

ಅಮಿತ್ ಶಾ ಆಂಧ್ರಪ್ರದೇಶದ ಜನತೆಯನ್ನು ಅವಮಾನಿಸಿದ್ದಾರೆ : ಬಿಜೆಪಿ ವಿರುದ್ಧ ಚಂದ್ರಬಾಬುನಾಯ್ಡು ವಾಗ್ದಾಳಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬರೆದಿರುವ ಪತ್ರದಲ್ಲಿ ಆಂಧ್ರಪ್ರದೇಶದ ಜನತೆಯನ್ನು ಅವಮಾನಿಸಿದ್ದಾರೆ ಎಂದು ಮುಖ್ಯಮಂತ್ರಿ ಎಂ. ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.

ಅಮಿತ್ ಶಾ ಆಂಧ್ರಪ್ರದೇಶದ ಜನತೆಯನ್ನು ಅವಮಾನಿಸಿದ್ದಾರೆ : ಬಿಜೆಪಿ ವಿರುದ್ಧ ಚಂದ್ರಬಾಬುನಾಯ್ಡು ವಾಗ್ದಾಳಿ
ಚಂದ್ರಬಾಬು ನಾಯ್ಡು, ಅಮಿತ್ ಶಾ
Published On :

ಅಮರಾವತಿ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬರೆದಿರುವ ಪತ್ರದಲ್ಲಿ ಆಂಧ್ರಪ್ರದೇಶದ ಜನತೆಯನ್ನು ಅವಮಾನಿಸಿದ್ದಾರೆ ಎಂದು ಮುಖ್ಯಮಂತ್ರಿ ಎಂ. ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.

 ಆಂಧ್ರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ವಾಸ್ತವ ಅಂಶಗಳನ್ನು ಮರೆಮಾಚಿಸಲು ಬಿಜೆಪಿ ಮುಖ್ಯಸ್ಥರು ಪ್ರಯತ್ನಿಸಿದ್ದಾರೆ. ತೆಲುಗು ಜನರ ಭಾವನೆಗಳಿಗೆ ಅಪಮಾನ ಮಾಡಿದ್ದಾರೆ ಎಂದು ಅಪಾದಿಸಿದರು.

ಜನರ ಮೇಲಿನ ಗೌರವಕ್ಕಾಗಿ ಪಕ್ಷದ ನಿರ್ಧಾರದ ಮೇಲೆ ಬಿಜೆಪಿ ಜೊತೆಗಿನ ಮೈತ್ರಿ ಕಡಿತಗೊಳಿಸಲಾಗಿದೆ. ಬಿಜೆಪಿ  ಮೈತ್ರಿ ಹಾಗೂ ರಾಜ್ಯದ ವಿಷಯದಲ್ಲಿ  ಜವಾಬ್ದಾರಿಯಿಂದ ನಡೆದುಕೊಳ್ಳಲಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ ನಿಂದ ಆದ ಅನ್ಯಾಯದಂತೆ ಬಿಜೆಪಿ ಕೂಡಾ ಆಂಧ್ರಪ್ರದೇಶಕ್ಕೆ ಅನ್ಯಾಯ ಮಾಡಲಾಗಿದೆ.  ಕಾಂಗ್ರೆಸ್ ಅನ್ಯಾಯಯುತವಾಗಿ ರಾಜ್ಯ ವಿಭಜನೆ ಮಾಡಿದ್ದರೆ. ಆಂಧ್ರ ಪ್ರದೇಶ ಪುನರ್ ವಿಂಗಡಣೆ ಕಾಯ್ದೆಯಲ್ಲಿನ ಬದ್ಧತೆಯನ್ನು ಪೂರ್ಣಗೊಳಿಸುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಚಂದ್ರಬಾಬು ನಾಯ್ಡು ವಾಗ್ದಾಳಿ ನಡೆಸಿದರು.

ಅಮಿತ್ ಶಾ ಬರೆದಿರುವ ಪತ್ರ ಬಂದ ಕೆಲ ತಾಸುಗಳೇ  ಚಂದ್ರಬಾಬು ನಾಯ್ಡು ಈ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ವಿರುದ್ಧ ಚಂದ್ರಬಾಬು ನಾಯ್ಡು ಮಾಡುತ್ತಿರುವ ಆರೋಪಗಳು ಅಸತ್ಯವಾದದ್ದು ಎಂದು ಅಮಿತ್ ಶಾ ನಿನ್ನೆ ದಿನ ಪತ್ರ ಬರೆದಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.