ತಂದೆಯೊಂದಿಗೆ ಲೈಂಗಿಕ ಸಂಬಂಧ ಶಂಕೆ: ಕತ್ತು ಹಿಸುಕಿ ಮಗಳನ್ನೇ ಕೊಂದ ತಾಯಿ
ತಂದೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆ ಹಿನ್ನಲೆ ತನ್ನ 16 ವರ್ಷದ ಮಗಳ ಕತ್ತು ಹಿಸುಕಿ ತಾಯಿ ಹತ್ಯೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ...

Published On :
ನವಿಮುಂಬೈ: ತಂದೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆ ಹಿನ್ನಲೆ ತನ್ನ 16 ವರ್ಷದ ಮಗಳ ಕತ್ತು ಹಿಸುಕಿ ತಾಯಿ ಹತ್ಯೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಮಾರ್ಚ್ 4ರಂದು ಈ ಹತ್ಯೆ ನಡೆದಿದ್ದು ಮರಣೋತ್ತರ ಪರೀಕ್ಷೆಯಲ್ಲಿ ಮೃತಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದ್ದು ಈ ಸಂಬಂಧ ವಿಚಾರಣೆ ನಡೆಸಿದ ಖರ್ಗರ್ ಪೊಲೀಸರು 36 ವರ್ಷದ ಮಹಿಳೆ ಮೃತಳ ತಾಯಿಯನ್ನು ಬಂಧಿಸಿದ್ದಾರೆ.
ಈ ಕುಟುಂಬ ರಾಜಸ್ಥಾನದ ಮೂಲದವರಾಗಿದ್ದು ತಾಯಿ ಗೃಹಿಣಿಯಾಗಿದ್ದು ಆಕೆಯ ಪತಿ ಸಿವಿಲ್ ಕಂಟ್ರಾಕ್ಟರ್ ಆಗಿದ್ದರು. ಘಟನೆ ನಡೆದ ದಿನ ಮಧ್ಯಾಹ್ನನ ಸಂತ್ರಸ್ತೆಯ ತಂದೆ ಮನೆಗೆ ಬಂದಾಗ ಆಕೆ ಮಲಗಿದ್ದಳು. ಆರೋಪಿ ತಾಯಿ ಮಗಳು ಉಪವಾಸ ಮಲಗಿದ್ದಾಳೆ ಎಂದು ಪತಿಗೆ ತಿಳಿಸಿದ್ದು ಸಂಜೆ ವೇಳೆಗೆ ಮಗಳು ಎದ್ದೇಳುತ್ತಿಲ್ಲ ಎಂದು ಕರೆ ಮಾಡಿ ತಿಳಿಸಿದ್ದಳು.
ಸಂಜೆ ತಂದೆ ಮನೆಗೆ ಬಂದು ನೋಡಿದಾಗ ಮಗಳು ಮೃತಪಟ್ಟಿದ್ದು ರಾಜಸ್ಥಾನದಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಮರಣೋತ್ತರ ಪರೀಕ್ಷಾ ವರದಿ ಆಧಾರದಲ್ಲಿ ಪೊಲೀಸರು ಸಂತ್ರಸ್ಥೆಯ ಸಹಪಾಠಿಗಳ ಹೇಳಿಕೆ ಪಡೆದುಕೊಂಡಿದ್ದರು. ತಾಯಿ ಕಳೆದ ಆರು ತಿಂಗಳಿನಿಂದ ಮಗಳಿಗೆ ಥಳಿಸುತ್ತಿದ್ದ ಮತ್ತು ತಂದೆಯ ಜತೆ ಸಂಬಂಧ ಹೊಂದಿರುವ ಶಂಕೆ ವ್ಯಕ್ತಪಡಿಸುತ್ತಿದ್ದ ವಿಷಯ ತಿಳಿದು ಬಂದಿದೆ.
ನಂತರ ಆರೋಪಿ ಮಹಿಳೆಯನ್ನು ವಿಚಾರಿಸಿದಾಗ ಆಕೆ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


