ದೇಶ

ತೆಲಂಗಾಣ: ದೈವಿಕ ಕರೆ ಬಂದಿದೆ ಎಂದು ದೇಗುಲದೊಳಗೆ ಕತ್ತು ಸೀಳಿಕೊಂಡ ವ್ಯಕ್ತಿ!

ದೇವರು ಕೂಗುತ್ತಿದ್ದಾರೆಂದು ಹೇಳಿ ವ್ಯಕ್ತಿಯೊಬ್ಬ ದೇಗುಲದೊಳಗೆ ಕತ್ತು ಸೀಳಿಕೊಂಡಿರುವ ಘಟನೆ ತೆಲಂಗಾಣ ರಾಜ್ಯದ ಬಸಾರಾದಲ್ಲಿರುವ ಜ್ಞಾನ ಸರಸ್ವತಿ ದೇವಾಲಯದಲ್ಲಿ ಗುರುವಾರ ನಡೆದಿದೆ...

ತೆಲಂಗಾಣ: ದೈವಿಕ ಕರೆ ಬಂದಿದೆ ಎಂದು ದೇಗುಲದೊಳಗೆ ಕತ್ತು ಸೀಳಿಕೊಂಡ ವ್ಯಕ್ತಿ!
ಸಾಂದರ್ಭಿಕ ಚಿತ್ರ
Published On :
ನಿರ್ಮಲ್; ದೇವರು ಕೂಗುತ್ತಿದ್ದಾರೆಂದು ಹೇಳಿ ವ್ಯಕ್ತಿಯೊಬ್ಬ ದೇಗುಲದೊಳಗೆ ಕತ್ತು ಸೀಳಿಕೊಂಡಿರುವ ಘಟನೆ ತೆಲಂಗಾಣ ರಾಜ್ಯದ ಬಸಾರಾದಲ್ಲಿರುವ ಜ್ಞಾನ ಸರಸ್ವತಿ ದೇವಾಲಯದಲ್ಲಿ ಗುರುವಾರ ನಡೆದಿದೆ. 
ಪ್ರಸಾ ಗೌಡ್ ಕತ್ತು ಸೀಳಿಕೊಕಂಡ ವ್ಯಕ್ತಿಯಾಗಿದ್ದಾರೆ. ಎಂದಿನಿಂದೆ ನಿನ್ನೆ ಬೆಳಿಗ್ಗೆ ದೇಗುಲದ ಪೂಜಾರಿ ದೇವರಿಗೆ ಅಭಿಷೇಕ ಮಾಡಿ, ಅಲಂಕಾರ ಮಾಡಿದ್ದಾರೆ. ಈ ವೇಳೆ ದೇಗುಲಕ್ಕೆ ಬಂದ ಪ್ರಸಾದ್ ನೇರವಾಗಿ ಗರ್ಭಗುಡಿ ಪ್ರವೇಶಿಸಿದ್ದಾನೆ. ಈ ವೇಳೆ ಪೂಜಾರಿ ಹಾಗೂ ಪ್ರಸಾದ್ ನಡುವೆ ಮಾತಿನ ಚಕಮಕಿ ನಡೆದಿದೆ. 
ನನ್ನನ್ನು ದೇವರು ಕೂಗುತ್ತಿದ್ದು, ನನ್ನ ಪ್ರಾಣವನ್ನು ದೇವರಿಗೆ ಅರ್ಪಿಸುತ್ತೇನೆಂದು ಹೇಳಿದ ಪ್ರಸಾದ್, ಇದ್ದಕ್ಕಿದ್ದಂತೆಯೇ ಕೈ ಹಾಗೂ ಕುತ್ತಿಗೆ ಕೊಯ್ದುಕೊಂಡಿದ್ದಾನೆ. ಈ ವೇಳೆ ಆಘಾತಗೊಂಡ ಪೂಜಾರಿ ಜೋರಾಗಿ ಕೂಗಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಭದ್ರತಾ ಸಿಬ್ಬಂದಿಗಳೂ ಕೂಡಲೇ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ತಿಳಿದುಬಂದಿದೆ. 
ದೇಗುಲದೊಳಗೆ ಘಟನೆ ನಡೆದಿರುವ ಹಿನ್ನಲೆಯಲ್ಲಿ ಶುದ್ಧತೆಯ ಪ್ರಕ್ರಿಯೆ ಎಂಬಂತೆ ದೇಗುಲ ಸಮಿತಿ ಇಂದು ದೇಗುಲದಲ್ಲಿ ವಿಶೇಷ ಪೂಜೆ, ಅಭಿಷೇಕ, ಆರತಿ ಹಾಗೂ ಗಣಪತಿ ಪೂಜೆ ನಡೆಸಲು ತೀರ್ಮಾನಿಸಿದೆ. 
ದೇಗುಲದ ಇನ್ಸ್ ಪೆಕ್ಟರ್ ಸಂಜೀವ್ ರಾವ್ ಅವರು, ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಭದ್ರತಾ ಲೋಪ ಕುರಿತಂತೆ ಅಧಿಕಾರಿಗಳು ತಪ್ಪೊಪ್ಪಿಕೊಕಂಡಿದ್ದಾರೆ. 
ಘಟನೆ ನಡೆದ ಸಂದರ್ಭದಲ್ಲಿ ದೇಗುಲದಲ್ಲಿ 10 ಮಂದಿ ಭದ್ರತಾ ಸಿಬ್ಬಂದಿಗಳಿದ್ದರು. ಆದರೂ, ಭದ್ರತಾ ಸಿಬ್ಬಂದಿಗಳ ಕಣ್ಣು ತಪ್ಪಿಸಿ ಪ್ರಸಾದ್ ದೇಗುಲ ಪ್ರವೇಶಿಸಿದ್ದಾನೆ. ಈ ಹಿಂದೆ ಕೂಡ ಇದೇ ವ್ಯಕ್ತಿ ದೀಪಾವಳಿ ಹಬ್ಬದಲ್ಲೂ ಇದೇ ರೀತಿಯ ಯತ್ನಗಳನ್ನು ನಡೆಸಿದ್ದ. ಆದರೆ, ಗರ್ಭಗುಡಿ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.