ಇರಾಕ್ ನಲ್ಲಿ ಹತ್ಯೆಯಾದ ಭಾರತೀಯ ಕುಟುಂಬದಿಂದ ಶಾಂತಿಯುತ ಪ್ರತಿಭಟನೆ ಕರೆ
ಇರಾಕ್ ನ ಮೋಸುಲ್ ನಲ್ಲಿ ಐಎಸ್ ಐಎಸ್ ಉಗ್ರರಿಂದ ಹತ್ಯೆಯಾದ 39 ಭಾರತೀಯರಲ್ಲಿ ಒಬ್ಬರಾದ ಮಂಜಿಂದರ್ ಸಿಂಗ್ ತಂಗಿ ಗುರುಪಿಂದರ್ ಕೌರ್ ಸರ್ಕಾರದ ವಿರುದ್ಧ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿದ್ದಾರೆ

ಅಮೃತಸರ : ಇರಾಕ್ ನ ಮೋಸುಲ್ ನಲ್ಲಿ ಐಎಸ್ ಐಎಸ್ ಉಗ್ರರಿಂದ ಹತ್ಯೆಯಾದ 39 ಭಾರತೀಯರಲ್ಲಿ ಒಬ್ಬರಾದ ಮಂಜಿಂದರ್ ಸಿಂಗ್ ತಂಗಿ ಗುರುಪಿಂದರ್ ಕೌರ್ ಸರ್ಕಾರದ ವಿರುದ್ಧ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಕೇಂದ್ರಸರ್ಕಾರ ಈವರೆಗೂ ತಮ್ಮನ್ನೂ ಭೇಟಿಯಾಗಿಲ್ಲ. ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಹಲವು ಬಾರಿ ಭೇಟಿಯಾಗಿದ್ದರೂ ನಮಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಹಿಂಸಾತ್ಮಕ ಪ್ರತಿಭಟನೆ ಮಾಡಲ್ಲ, ಶಾಂತಿಯುತವಾಗಿ ಪ್ರತಿಭಟನೆ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಇರಾಕ್ ನಲ್ಲಿ ಹತ್ಯೆಯಾದವರ ಕುಟುಂಬಗಳಿಗೆ ನಾಳೆಯೊಳಗೆ ಪರಿಹಾರ ಘೋಷಿಸುವಂತೆ ಸೂಚಿಸಲಾಗಿದೆ. ಅಷ್ಟರೊಳಗೆ ಸರ್ಕಾರ ಮಾಡದಿದ್ದರೆ ಜಂಥರ್ ಮಂಥರ್ ಮುಂಭಾಗ ನಾಳೆಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಮಂಜಿಂದರ್ ಸಿಂಗ್ ಅಳಿಯ ವಿಜಯ್ ಕುಮಾರ್ ಹೇಳಿದ್ದಾರೆ.
2014ರಲ್ಲಿ ಮೋಸುಲ್ ನಲ್ಲಿ ನಾಪತ್ತೆಯಾಗಿದ್ದ 39 ಭಾರತೀಯರು ಐಎಸ್ ಉಗ್ರರ ಗುಂಪಿನಿಂದ ಹತ್ಯೆಯಾಗಿದ್ದಾರೆ ಎಂದು ಮಾರ್ಚ್ 20 ರಂದು ರಾಜ್ಯಸಭೆಯಲ್ಲಿ ಸುಷ್ಮಾ ಸ್ವರಾಜ್ ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


