ದೇಶ

ಮರ್ಕೆಲ್ ಗೆ ಮೋದಿ ಅಭಿನಂದನೆ, ಭಾರತ-ಜರ್ಮನಿ ಸಂಬಂಧ ಬಲಿಷ್ಠವಾಗಲಿ ಎಂದ ಪ್ರಧಾನಿ

ಸತತ ನಾಲ್ಕನೆ ಅವಧಿಗೆ ಜರ್ಮನಿಯ ಚಾನ್ಸಲರ್ ಆಗಿ ಅಧಿಕಾರ ವಹಿಸಿಕೊಂಡ ಆ್ಯಂಜೆಲಾ ಮರ್ಕೆಲ್‌ ಅವರನ್ನು...

ಮರ್ಕೆಲ್ ಗೆ ಮೋದಿ ಅಭಿನಂದನೆ, ಭಾರತ-ಜರ್ಮನಿ ಸಂಬಂಧ ಬಲಿಷ್ಠವಾಗಲಿ ಎಂದ ಪ್ರಧಾನಿ
ನರೇಂದ್ರ ಮೋದಿ - ಆ್ಯಂಜೆಲಾ ಮರ್ಕೆಲ್
Published On :
ನವದೆಹಲಿ: ಸತತ ನಾಲ್ಕನೆ ಅವಧಿಗೆ ಜರ್ಮನಿಯ ಚಾನ್ಸಲರ್ ಆಗಿ ಅಧಿಕಾರ ವಹಿಸಿಕೊಂಡ ಆ್ಯಂಜೆಲಾ ಮರ್ಕೆಲ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಅಭಿನಂದಿಸಿದ್ದಾರೆ.
ಇಂದು ಮರ್ಕೆಲ್ ಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ, ಭಾರತ-ಜರ್ಮನಿ ಸಂಬಂಧ ಮತ್ತಷ್ಟು ಬಲಿಷ್ಠವಾಗಲು ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ.
ಮಾರ್ಚ್ 14ರಂದು ಮರ್ಕೆಲ್ ಅವರು ದಾಖಲೆಯ ನಾಲ್ಕನೆ ಬಾರಿಗೆ ಜರ್ಮನ್ ಸಂಸತ್ತಿಗೆ ಆಯ್ಕೆಯಾಗಿದ್ದರು. ಈ ಮೂಲಕ ಮರ್ಕೆಲ್‌ರನ್ನು ಮುಂದುವರಿಸಬೇಕೋ ಬೇಡವೋ ಎಂಬ ಬಗ್ಗೆ ಆರು ತಿಂಗಳಿಂದ ನಡೆಯುತ್ತಿದ್ದ ಚರ್ಚೆಗಳಿಗೆ ತೆರೆ ಎಳೆಯಲಾಗಿತ್ತು. 
ಜರ್ಮನಿ ಸಂಸತ್ತು ಒಟ್ಟು 709 ಸದಸ್ಯರನ್ನು ಹೊಂದಿದ್ದು, ಮರ್ಕೆಲ್‌ ಅವರ ಪರವಾಗಿ 364 ಮತಗಳು ಬಂದಿದ್ದವು. ಚಾನ್ಸಲರ್ ಆಗಲು ಶೇ.50ರಷ್ಟು ಮತಗಳು ಬಂದರೆ ಸಾಕು. ಆದರೆ ಮರ್ಕೆಲ್ ಶೇ.50ಕ್ಕೂ ಹೆಚ್ಚು ಮತಗಳನ್ನು ಪಡೆದು ನಾಲ್ಕನೆ ಬಾರಿಗೆ ಜರ್ಮನಿ ಚಾನ್ಸಲರ್ ಆಗಿ ಆಯ್ಕೆಯಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.