ದೇಶ

ಗೂಗಲ್ ಡೂಡಲ್ ಮೂಲಕ ಶಹನಾಯಿ ಮಾಂತ್ರಿಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಗೆ ಗೌರವ

ಶಹನಾಯಿ ಮಾಂತ್ರಿಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ 102ನೇ ಜನ್ಮ ದಿನಾಚರಣೆ ಅಂಗವಾಗಿ ಗೂಗಲ್ ...

ಗೂಗಲ್ ಡೂಡಲ್ ಮೂಲಕ ಶಹನಾಯಿ ಮಾಂತ್ರಿಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಗೆ ಗೌರವ
ಗೂಗಲ್ ಡೂಡಲ್
Published On :

ನವದೆಹಲಿ: ಶಹನಾಯಿ ಮಾಂತ್ರಿಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ 102ನೇ ಜನ್ಮ ದಿನಾಚರಣೆ ಅಂಗವಾಗಿ ಗೂಗಲ್ ಡೂಡಲ್ ಮೂಲಕ ಗೌರವ ನಮನ ಸಲ್ಲಿಸಿದೆ.

ಗೂಗಲ್ ಡೂಡಲ್ ನಲ್ಲಿ ಪಂಡಿತ್ ಉಸ್ತಾದ್ ಬಿಸ್ಮಿಲ್ಲಾ ಖಾನ್ ಶಹನಾಯಿ ನುಡಿಸುತ್ತಿರುವ ರೀತಿಯಲ್ಲಿ ಚಿತ್ರಿಸಲಾಗಿದೆ. ಈ ಡೂಡಲ್ ನ್ನು ಚೆನ್ನೈ ಮೂಲದ ವಿನ್ಯಾಸಕಾರ ವಿಜಯ್ ಕ್ರಿಶ್ ಚಿತ್ರಿಸಿದ್ದಾರೆ.

ಪಂಡಿತ್ ಉಸ್ತಾದ್ ಬಿಸ್ಮಿಲ್ಲಾ ಖಾನ್ 1916ರಲ್ಲಿ ಬಿಹಾರದ ಬುಕ್ಸರ್ ಜಿಲ್ಲೆಯ ಡುಮರಾನ್ ನಲ್ಲಿ ಸಂಗೀತಗಾರರ ಕುಟುಂಬದಲ್ಲಿ ಜನಿಸಿದರು. ನಂತರ 6 ವರ್ಷದವರಾಗಿದ್ದಾಗ ವಾರಣಾಸಿಗೆ ವಲಸೆ ಹೋದರು. ಅಲ್ಲಿಂದ ಅವರು ಶಹನಾಯಿಯಲ್ಲಿ ಔಪಚಾರಿಕ ಶಿಕ್ಷಣ ಪಡೆದರು.

ಅವರ ಶಹನಾಯ್ ನುಡಿಸುವಿಕೆ ಎಷ್ಟು ಅದ್ಭುತ ಮತ್ತು ಸುಮಧುರವಾಗಿತ್ತೆಂದರೆ ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನ ಮತ್ತು ಮೊದಲ ಗಣರಾಜ್ಯೋತ್ಸವದ ದಿನ ಶಹನಾಯಿ ನುಡಿಸಲು ಬಿಸ್ಮಿಲ್ಲಾ ಖಾನ್ ಅವರಿಗೆ ಆಹ್ವಾನ ನೀಡಲಾಗಿತ್ತು. ಅದರಂತೆ ಅವರು ದೆಹಲಿಯ ಕೆಂಪು ಕೋಟೆಯಲ್ಲಿ ಶಹನಾಯಿ ನುಡಿಸಿದ್ದರು.

ಆ ಬಳಿಕ ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆ ದಿನ ಅವರು ಶಹನಾಯಿ ನುಡಿಸುತ್ತಿದ್ದು ಪ್ರಧಾನಿಯವರ ಭಾಷಣದ ನಂತರ ಅದು ಪ್ರಸಾರವಾಗುತ್ತಿತ್ತು.

ಪಂಡಿತ್ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರಿಗೆ ಭಾರತ ರತ್ನ, ಪದ್ಮ ವಿಭೂಷಣ, ಪದ್ಮ ಭೂಷಣ, ಪದ್ಮ ಶ್ರೀ ಮತ್ತು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳು ಬಂದಿವೆ. 2006ರ ಆಗಸ್ಟ್ 21ರಂದು ತಮ್ಮ 90ನೇ ವಯಸ್ಸಿನಲ್ಲಿ ನಿಧನರಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.