ದೇಶ

ನಿತೀಶ್ ಕುಮಾರ್ ಎಂಎಲ್ಸಿ ಸ್ಥಾನವನ್ನು ಅನರ್ಹಗೊಳಿಸುವ ಪಿಐಎಲ್ ಮನವಿ ಸುಪ್ರೀಂ ನಿಂದ ವಜಾ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಎಂಎಲ್ಸಿ ಸ್ಥಾನವನ್ನು ಅನೂರ್ಜಿತಗೊಳಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ...............

ನಿತೀಶ್ ಕುಮಾರ್ ಎಂಎಲ್ಸಿ  ಸ್ಥಾನವನ್ನು ಅನರ್ಹಗೊಳಿಸುವ  ಪಿಐಎಲ್ ಮನವಿ ಸುಪ್ರೀಂ ನಿಂದ ವಜಾ
ನಿತೀಶ್ ಕುಮಾರ್
Published On :
ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಎಂಎಲ್ಸಿ ಸ್ಥಾನವನ್ನು  ಅನೂರ್ಜಿತಗೊಳಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ನಿತೀಶ್ ಕುಮಾರ್ 2012 ರಲ್ಲಿ  ತನ್ನ ಮೇಲಿದ್ದ ಕ್ರಿಮಿನಲ್ ಮೊಕದ್ದಮೆ ಸಂಬಂಧ  ವಾಸ್ತವಾಂಶವನ್ನು ಚುನಾವಣಾ ಆಯೋಗಕ್ಕೆ ತಿಳಿಸಿದ್ದಾರೆ. ಎಂದು ಮುಖ್ಯಮಂತ್ರಿಗಳು ನ್ಯಾಯಾಲಯಕ್ಕೆ ಮಾಹಿತಿ ನಿಡಿದ್ದಾರೆ. ಅವರ ಮಾಹಿತಿ ಆಧರಿಸಿ ಈ ಪಿಐಎಲ್ ನ್ನು  ತಿರಸ್ಕರಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ಹೇಳಿದೆ.
"ವಿಚಾರಣಾ ನ್ಯಾಯಾಲಯವು ಪ್ರಕರಣವನ್ನು ಪರಿಗಣಿಸಿದ ಬಳಿಕ ನಿತೀಶ್ ತಮ್ಮ ವಿರುದ್ಧದ ಆರೋಪದ ಸಂಬಂಧ ಸೂಕ್ತ ವಿವರಣೆ ನಿಡಬೇಕೆಂದು ಚುನಾವಣಾ ನಿಯಮಾವಳಿಯಲ್ಲಿದೆ. ಅವರು ಹಾಗೆಯೇ ಮಾಡಿದ್ದಾರೆ" ನ್ಯಾಯಪೀಠ ಹೇಳಿದೆ.
ಪಾಟ್ನಾ ಹೈಕೋರ್ಟ್ ಈಪ್ರಕರಣದ ವಿಚಾರಣೆಗೆ ತಡೆ ನೀಡಿದೆ ಎಂಡು ಮುಖ್ಯಮಂತ್ರಿಗಳ ಪರ ವಕೀಲರು ಇದೇ ವೇಳೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ನಿತೀಶ್ ಕುಮಾರ್ 1991 ರಲ್ಲಿ ಬಿಹಾರದ ಬರ್ಹ್ ಕ್ಷೇತ್ರದ ಲೋಕಸಭಾ ಉಪಚುನಾವಣೆ ಸಮಯದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕ ಸೀತಾರಾಂ ಸಿಂಗ್ ಅವರನ್ನು ಹತ್ಯೆ ಮಾಡಿದ್ದಾರೆ, ಅಲ್ಲದೆ ನಾಲ್ವರನ್ನು ಗಾಯಗೊಳಿಸಿದ್ದಾರೆ ಎಂದು ಆರೋಪಿಸಿ ವಕೀಲರಾದ ಎಂ. ಎಲ್. ಶರ್ಮಾ ಪಿಐಎಲ್ ಸಲ್ಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.