ದೇಶ

ಕಾಶ್ಮೀರ ರಕ್ಷಣೆಗಾಗಿ ಗಡಿ ದಾಟಲೂ ಸಿದ್ಧ: ರಾಜನಾಥ್ ಸಿಂಗ್

ಜಗತ್ತಿನ ಯಾವ ಶಕ್ತಿಯೂ ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ

ಕಾಶ್ಮೀರ ರಕ್ಷಣೆಗಾಗಿ ಗಡಿ ದಾಟಲೂ ಸಿದ್ಧ: ರಾಜನಾಥ್ ಸಿಂಗ್
ರಾಜನಾಥ್ ಸಿಂಗ್
Published On :
ನವದೆಹಲಿ: ಜಗತ್ತಿನ ಯಾವ ಶಕ್ತಿಯೂ ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. ಹಾಗೆಯೇ ದೇಶದ ಪ್ರಾದೇಶಿಕ ಸಮಗ್ರತೆಯ ರಕ್ಷಣೆಗಾಗಿ ನಮ್ಮ ಸೇನಾಪಡೆಗಳು ಗಡಿದಾಟಲು ಹಿಂಜರಿಯುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಸಿಎನ್ಎನ್ ನ್ಯೂಸ್ 18 ರೈಸಿಂಗ್ ಇಂಡಿಯಾ ಶೃಂಗಸಭೆಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್ :ಕಾಶ್ಮೀರ ಎಂದೆಂದಿಗೂ ನಮ್ಮದೆ, ಯಾರೂ ಅದನ್ನು ನಮ್ಮಿಂದ ಕಸಿದುಕೊಲ್ಳಲಾಗದು" ಎಂದಿದ್ದಾರೆ. ದೇಶ ಕಾಯುವ ಯೋಧರನ್ನು ಶ್ಲಾಘಿಸಿದ ಸಚಿವರು ಪಾಕಿಸ್ತಾನಕ್ಕೆ ಎಚ್ಚರಿಕೆಯನ್ನೂ ನೀಡಿದ್ದಾರೆ "ನಾವು ದೇಶದ ಆಂತರಿಕ ಭದ್ರತೆಯನ್ನು ಮಾತ್ರವೇ ಪರಿಗಣಿಸುವುದಿಲ್ಲ, ದೇಶದ ಪ್ರಾದೇಶಿಕ ಸಮಗ್ರತೆ ರಕ್ಷಣೆಗಾಗಿ ಅಗತ್ಯ ಬಿದ್ದರೆ ಗಡಿ ದಾಟಿಯೂ ಯುದ್ಧ ಹೂಡುತ್ತೇವೆ: ಎಂದರು.
"ಪಾಕಿಸ್ತಾನವು ಭಯೋತ್ಪಾದಕರಿಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು, ಭಾರತ ಪಾಕ್ ನೊಡನೆ ಉತ್ತಮ ಸ್ನೇಹವನ್ನು ಬಯಸುತ್ತದೆ. ಅಮೆರಿಕಾ ಇದೀಗ ಪಾಕಿಸ್ತಾನದ ನಡೆಯನ್ನು ಖಂಡಿಸುತ್ತಿದೆ, ಪಾಕ್ ಗೆ ಏನಾಗಿದೆ ಎನ್ನುವುದು ನನಗೆ ತಿಳಿದಿ;ಲ್ಲ. ಆದರೆ ನಾವು ಪಾಕ್ ನೊಡನೆ ಉತ್ತಮ ಬಾಂಧವ್ಯ ಬಯಸುತ್ತೇವೆ. ಆದರೆ ಆ ರಾಷ್ಟ್ರವು ನಮ್ಮ ಸ್ನೇಹಹಸ್ತವನ್ನು ನಿರಾಕರಿಸಿದೆ.
"ವಿಶ್ವಸಂಥೆ ಉಗ್ರನೆಂದು ಹೆಸರಿಸಿರುವ ಭಯೋತ್ಪಾದಕ ಹಫೀಜ್ ಸಯೀದ್ ಗೆ ಫಾಕ್ ಸ್ವಾಯತ್ತತೆ ನೀಡಿದೆ. ಆತ ಅಲ್ಲಿ ತನ್ನದೇ ರಾಜಕೀಯ ಪಕ್ಷವನ್ನು ಸ್ಥಾಪಿಸಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾನೆ." ಸಚಿವರು ಹೇಳಿದ್ದಾರೆ.
ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಉತ್ಸುಕವಾಗಿದೆ, ಇದಕ್ಕಾಗಿ ಯಾರೊಂದಿಗೂ ಮಾತನಾಡಲು ನಾವು ಸಿದ್ದರಿದ್ದೇವೆ ಎಂದ ರಾಜನಾಥ್ ಸಿಂಗ್ ಹೇಳಿದ್ದಾರೆ. ಗುಪ್ತಚರ ಇಲಾಖೆ ಮಾಜಿ ಮುಖ್ಯಸ್ಥರಾದ ದಿನೇಶ್ವರ್ ಶರ್ಮ ಅವರ ಮುಖಂಡತ್ವದಲ್ಲಿ ಕಾಶ್ಮೀರ ಸಮಸ್ಯೆ ಕುರಿತಂತೆ ಎಲ್ಲ ವಿಭಾಗಗಳಿಂದ ಜನರೊಡನೆ ಮುಕ್ತವಾಗಿ ಚರ್ಚೆ ನಡೆಸಲಾಗುತ್ತದೆ. ಕಾಶ್ಮೀರದ ಮಕ್ಕಳು ನಮ್ಮ ಮಕ್ಕಳಂತೆಯೇ ಭಾವಿಸಿದ್ದೇವೆ. ಯಾರೇ ಆಗಲಿ ಅವರನ್ನು ಉಗ್ರಗಾಮಿ ಕಾರ್ಯಾಚರಣೆಗೆ ತೊಡಗಿಸಿಕೊಳ್ಳುವುದನ್ನು ನಾವು ಸಹಿಸಲಾರೆವು  ಎಂದು ಸಚಿವರು ಹೇಳಿದರು.
"ಕಾಶ್ಮೀರಿ ಯುವಕರಿಗೆ ಉಗ್ರವಾದ, ಜಿಹಾದ್ ತರಬೇತಿಗಳನ್ನು ನೀಡುವ ಯಾರೇ ಆದರೂ ಇಸ್ಲಾಂನಲ್ಲಿನ ಜಿಹಾದ್ ಪರಿಕಲ್ಪನೆಗಳ ಬಗೆಗೆ ಮೊದಲು ಅರಿತುಕೊಳ್ಳಬೇಕಿದೆ. ಕಾಶ್ಮೀರದಲ್ಲಿ ಪ್ರಥಮ ಬಾರಿಗೆ ಕಲ್ಲು ತೂರಾಟ ನಡೆಸುವ ಯುವಕರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದಂತೆ ನಾನು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರಿಗೆ ಕೇಳಿದ್ದೇನೆ ಎಂದು ಸಚಿವರು ಹೇಳಿದ್ದಾರೆ.
2018 ರಲ್ಲಿ ಜಮ್ಮು ಮತ್ತು ಕಾಶ್ಮೀರ ಸರಕಾರವು ಕಲ್ಲು ತೂರಾಟದಲ್ಲಿ ಭಾಗವಹಿಸಿದ್ದ 9,730 ಜನರ ವಿರುದ್ಧ ಪ್ರಕರಣಗಳನ್ನು ವಜಾಗೊಳಿಸಿತ್ತು. ಇಅದರಲ್ಲಿ ಪ್ರಥಮ ಬಾರಿಗೆ ಕಲ್ಲು ತೂರಾಟ ನಡೆಸಿದವರೂ ಸೇರಿದ್ದರು.
ನಾವು ಮೊದಲ ಬಾರಿಗೆಕಲ್ಲು ತೂರಾಟ ನಡೆಸಿದವರನ್ನು ಕ್ಷಮಿಸಿದ್ದೇವೆ. ಅವರಿನ್ನೂ ಚಿಕ್ಕವರಾಗಿದ್ದು ಅವರು ಇತರರಿಂದ ಪ್ರಭಾವಿತರಾಗಿರಬಹುದು. ನಾವು ಅವರಿಗೆ ಎರಡನೇ ಅವಕಾಶ ನೀಡಿದ್ದೇವೆ" ಸಚಿವರು ಹೇಳಿದರು.
ಕಾಶ್ಮೀರ ಹಾಗೂ ದೇಶದ ಇತರೆ ಭಾಗದ ಮಕ್ಕಳ ನಡುವೆ ನಮ್ಮಸರ್ಕಾರ ಎಂದಿಗೂ ವ್ಯತ್ಯಾಸ ಮಾಡುವುದಿಲ್ಲ ಎಂದ ರಾಜನಾಥ್ ಭಯೋತ್ಪಾದನೆ ವಿಚಾರದಲ್ಲಿ ಪ್ರಧಾನಿ ಮೋದಿ ಜಾಗತಿಕ ಒಮ್ಮತವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಂದು ಸಚಿವರು ಹೇಳಿದ್ದು ಮಾವೋವಾದಿಗಳೊಡನೆ ವ್ಯವಹರಿಸುವ ಸಮಯದಲ್ಲಿ ಸರ್ಕಾರದ ಕ್ರಮವನ್ನು ಅವರು ಸಮರ್ಥಿಸಿದ್ದಾರೆ.
"ಬುಲೆಟ್ ಗಳ ಮೂಲಕ ನಕ್ಸಲ್ ಚಳವಳಿ ನಿಲ್ಲಿಸಲು ಸಾಧ್ಯವಿಲ್ಲ. ಇದಕ್ಕಾಗಿ ನಾವು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಸ್ವಾತಂತ್ರ್ಯದ ನಂತರ ತಲುಪಲಾಗದ ಪ್ರದೇಶಗಳನ್ನು ನಾವು ತಲುಪಲು ಪ್ರಯತ್ನಿಸುತ್ತಿದ್ದೇವೆ. ನಕ್ಸಲೀಯ ಭಾರತಕ್ಕೆ ದೊಡ್ಡ ಸಮಸ್ಯೆಯಾಗಿದ್ದಾರೆ. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ನಾವು ನಕ್ಸಲ್ ವಿರುದ್ಧ ಮಹತ್ತರವಾದ ಯಶಸ್ಸನ್ನು ದಾಖಲಿಸಿದ್ದೇವೆ" ರಾಜನಾಥ್ ಸಿಂಗ್ ಹೇಳಿದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.