ರಾಷ್ಟ್ರಗೀತೆಯಲ್ಲಿ 'ಸಿಂಧು' ತೆಗೆದು 'ಈಶಾನ್ಯ' ಸೇರಿಸುವಂತೆ ರಾಜ್ಯಸಭೆಯಲ್ಲಿ ನಿರ್ಣಯ ಮಂಡನೆ
ರಾಷ್ಟ್ರಗೀತೆಯಲ್ಲಿ ಸಿಂಧು ಪದವನ್ನು ತೆಗೆದು ಈಶಾನ್ಯ ವಲಯದ ಪದ ಬಳಸುವಂತೆ ತಿದ್ದುಪಡಿ ತರಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಸಂಸದ ರಿಪುನ್ ಬೊರಾ ರಾಜ್ಯಸಭೆಯಲ್ಲಿ ಖಾಸಗಿ ನಿರ್ಣಯ ಮಂಡಿಸಿದ್ದಾರೆ.

ನವದೆಹಲಿ: ರಾಷ್ಟ್ರಗೀತೆಯಲ್ಲಿ ಸಿಂಧು ಪದವನ್ನು ತೆಗೆದು ಈಶಾನ್ಯ ವಲಯದ ಪದ ಬಳಸುವಂತೆ ತಿದ್ದುಪಡಿ ತರಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಸಂಸದ ರಿಪುನ್ ಬೊರಾ ರಾಜ್ಯಸಭೆಯಲ್ಲಿ ಖಾಸಗಿ ನಿರ್ಣಯ ಮಂಡಿಸಿದ್ದಾರೆ.
ಸಿಂಧು ಪದ ಸಿಂಧು ಪ್ರಾಂತ್ಯವನ್ನು ಪ್ರತಿನಿಧಿಸುತ್ತದೆ. ಆದರೆ, ಅದು ಬಹಳ ಕಾಲದಿಂದಲೂ ಭಾರತದ ಭಾಗವಾಗಿದ್ದರೂ ಪಾಕಿಸ್ತಾನದಲ್ಲಿದೆ. ಆದ್ದರಿಂದ ಅದನ್ನು ತೆಗೆದುಹಾಕಿ, ಈಶಾನ್ಯ ವಲಯ ಪ್ರತಿನಿಧಿಸುವ ಪದ ಸೇರಿಸಬೇಕು, ಇದಕ್ಕಾಗಿ ರಾಷ್ಟ್ರ ಗೀತೆಗೆ ತಿದ್ದುಪಡಿ ಮಾಡಿ ಪದ ಬದಲಾಯಿಸಬೇಕೆಂದು ಒತ್ತಾಯಿಸಿದ್ದಾರೆ.
ಈಶಾನ್ಯ ಭಾರತದ ಪ್ರಮುಖ ಭಾಗವಾಗಿದ್ದರೂ ರಾಷ್ಟ್ರಗೀತೆಯಲ್ಲಿ ಸೇರದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಆದರೆ, ಪಾಕಿಸ್ತಾನದಲ್ಲಿರುವ ಸಿಂಧುವನ್ನು ಉಲ್ಲೇಖಿಸಿರುವುದು ದೇಶಕ್ಕೆ ಪ್ರತಿಕೂಲವಾಗಲಿದೆ ಎಂದು ಹೇಳಿದ್ದಾರೆ.
ರಾಷ್ಟ್ರಗೀತೆ ಜನಗಣ ಮನದಲ್ಲಿನ ತಿದ್ದುಪಡಿ ಮಾಡುವ ಸಂಬಂಧ ಭಾರತ ಸರ್ಕಾರ ಕ್ರಮ ಕೈಗೊಳ್ಳಬಹುದೆಂದು ಸ್ವಾತಂತ್ರ್ಯ ಭಾರತದ ಮೊದಲ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ ಹೇಳಿಕೆ ನೀಡಿದ್ದಾರೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


