ಜಾರ್ಖಂಡ್ ಅಲಿಮುದ್ದೀನ್ ಹತ್ಯೆ ಪ್ರಕರಣ: 11 ಗೋರಕ್ಷಕರು ತಪ್ಪಿತಸ್ಥರು
ಜಾರ್ಖಂಡ್ ನ ರಾಮಗರ್ ದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಹತ್ಯೆ ಮಾಡಿದ್ದ 11 ಆರೋಪಿಗಳು ತಪ್ಪಿತಸ್ಥರು ಎಂದು ವಿಚಾರಣಾ....

Published On :
ರಾಮಗರ್: ಜಾರ್ಖಂಡ್ ನ ರಾಮಗರ್ ದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಹತ್ಯೆ ಮಾಡಿದ್ದ 11 ಆರೋಪಿಗಳು ತಪ್ಪಿತಸ್ಥರು ಎಂದು ವಿಚಾರಣಾ ಕೋರ್ಟ್ ಶುಕ್ರವಾರ ತಿರ್ಪು ನೀಡಿದೆ.
ಜೂನ್ 2017ರಲ್ಲಿ ವಾಹನದಲ್ಲಿ ಗೋ ಮಾಂಸ ಸಾಗಣೆ ಮಾಡುತ್ತಿದ್ದಾರೆ ಎಂಬ ಸಂಶಯದ ಮೇಲೆ ಈ 11 ಗೋ ರಕ್ಷಕರು ಅಲಿಮುದ್ದೀನ್ ಅಲಿಯಾಸ್ ಅಸ್ಗರ್ ಅನ್ಸಾರಿಯನ್ನು ಬರ್ಬರವಾಗಿ ಹತ್ಯೆ ಮಾಡಿ, ಆತನ ಮಾರುತಿ ವ್ಯಾನ್ ಅನ್ನು ಸುಟ್ಟು ಹಾಕಿದ್ದರು.
ರಾಮಗರ್ ಠಾಣೆ ವ್ಯಾಪ್ತಿಯ ಜಬಾರ್ ಟಾಂಡ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪಶ್ಚಿಮ ಬಂಗಾಳದ ನೋಂದಣಿ ಸಂಖ್ಯೆ ಹೊಂದಿದ್ದ ವ್ಯಾನ್ ಅನ್ನು ಜನರ ಗುಂಪು ಸುಟ್ಟು ಹಾಕಿತ್ತು.
ಘಟನೆಗೆ ಸಂಬಂಧಿಸಿದಂತೆ ವೀಡಿಯೊ ತುಣುಕನ್ನು ಆಧರಿಸಿ 11 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಗೋಭಕ್ತಿಯ ನೆಪದಲ್ಲಿ ಜನರನ್ನು ಕೊಲ್ಲುವುದನ್ನು ಸಹಿಸಲಾಗದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಚರಿಕೆ ನೀಡಿದ ದಿನವೇ ಈ ಘಟನೆ ನಡೆದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Jharkhandಜಾರ್ಖಂಡ್Alimuddin lynching case11 cow vigilantes convictedಅಲಿಮುದ್ದೀನ್ ಹತ್ಯೆ ಪ್ರಕರಣ11 ಗೋರಕ್ಷಕರು ತಪ್ಪಿತಸ್ಥರು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


