ಭಾರತೀಯರಿಗಿಂತ ಪಾಕಿಸ್ತಾನಿಯರು ಹೆಚ್ಚು ಸಂತೋಷಿಗಳು: ವಿಶ್ವಸಂಸ್ಥೆ ವರದಿ
ಜಗತ್ತಿನ ಅತ್ಯಂತ ಸಂತೋಷವಾಗಿರುವ ದೇಶಗಳ ಪಟ್ಟಿಯಲ್ಲಿ ಭಾರತ ಪಾಕಿಸ್ತಾನಕ್ಕಿಂತಲೂ ಹಿಂದಿದೆ...

Published On :
ನವದೆಹಲಿ: ಜಗತ್ತಿನ ಅತ್ಯಂತ ಸಂತೋಷವಾಗಿರುವ ದೇಶಗಳ ಪಟ್ಟಿಯಲ್ಲಿ ಭಾರತ ಪಾಕಿಸ್ತಾನಕ್ಕಿಂತಲೂ ಹಿಂದಿದೆ.
ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಜಗತ್ತಿನ ಸಂತುಷ್ಟ ದೇಶಗಳ ವರದಿಯಲ್ಲಿ ಈ ವಿಷಯ ಬಹಿರಂಗಗೊಂಡಿದೆ. ಪಾಕಿಸ್ತಾನಿಯರು ಭಾರತೀಯರಿಗಿಂತ ತುಂಬಾ ಖುಷಿಯಾಗಿರುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಒಟ್ಟು 156 ದೇಶಗಳ ಮೇಲೆ ಅಧ್ಯಾಯನ ನಡೆಸಿ ಈ ವರದಿಯನ್ನು ಸಿದ್ಧಪಡಿಸಿದ್ದು ಭಾರತ 2017ರಲ್ಲಿ ನಾಲ್ಕು ಸ್ಥಾನಗಳಲ್ಲಿ ಕುಸಿತ ಕಂಡಿದ್ದರೆ 2018ರಲ್ಲಿ 11 ಸ್ಥಾನಗಳಲ್ಲಿ ಕುಸಿತ ಕಂಡು 133ನೇ ಸ್ಥಾನದಲ್ಲಿದೆ.
ಇನ್ನು 2017ರ ರ್ಯಾಂಕಿಂಗ್ ನಲ್ಲೂ ಪಾಕಿಸ್ತಾನ ಭಾರತಕ್ಕಿಂತಲೂ ಖುಷಿಯಾಗಿರುವ ದೇಶಗಳ ಪಟ್ಟಿಯಲ್ಲಿ ಮುಂದಿತ್ತು. 2018ರಲ್ಲಿ ಪಾಕಿಸ್ತಾನದ ಶ್ರೇಯಾಂಕ ಇನ್ನಷ್ಟು ಹೆಚ್ಚಿರುವುದು ಗಮನಾರ್ಹ ವಿಷಯವಾಗಿದೆ.
ಈ ವರದಿಯಲ್ಲಿ ಪಾಕಿಸ್ತಾನ ಅಷ್ಟೇ ಅಲ್ಲ. ಭಾರತದ ನೆರೆ ರಾಷ್ಟಗಳ ಸಾಮಾಜಿಕ ಮತ್ತು ಆರ್ಥಿಕವಾಗಿ ಚೆನ್ನಾಗಿಲ್ಲದಿದ್ದರೂ ತುಂಬಾ ಸಂತೋಷವಾಗಿರುವುದು ವಿಶೇಷ. ಚೀನಾ, ಬಾಂಗ್ಲಾದೇಶ, ಭೂತಾನ್, ನೇಪಾಳ ಮತ್ತು ಶ್ರೀಲಂಕಾ ಎಲ್ಲವೂ ಭಾರತಕ್ಕಿಂತ ಸಂತೋಷವಾಗಿದೆ.
ಈ ಪೈಕಿ ಅತ್ಯಂತ ಸಂತುಷ್ಟ ರಾಷ್ಟ್ರಗಳಲ್ಲಿ ಫಿನ್ ಲ್ಯಾಂಡ್ ಮೊದಲ ಸ್ಥಾನದಲ್ಲಿದೆ. ಅಲ್ಲಿನ ಜನರ ಆಯಸ್ಸು, ಸಾಮಾಜಿಕ ಬೆಂಬಲ ಮತ್ತು ಭ್ರಷ್ಟಾಚಾರದಂತಹ ಅಂಶಗಳ ಆಧಾರದ ಮೇಲೆ ಈ ವರದಿ ಸಿದ್ಧಪಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


