ಪ.ಬಂಗಾಳ ಸಿಎಂ ಮಮತಾ ನೆರವು ಕೋರಿದ ಶಮಿ ಪತ್ನಿ ಹಸಿನ್ ಜಹಾನ್!
ಸತ್ಯಕ್ಕಾಗಿ ಅಸಹಾಯಕ ಮಹಿಳೆ ಮಾಡುತ್ತಿರುವ ಹೋರಾಟಕ್ಕೆ ನೆರವು ನೀಡಿ ಎಂದು ಹೇಳುವ ಮೂಲಕ ಕ್ರಿಕೆಟಿಗ ಮಹಮದ್ ಶಮಿ ಪತ್ನಿ ತಮ್ಮ ಹೋರಾಟಕ್ಕೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ನೆರವು ಕೋರಿದ್ದಾರೆ.

Published On :
ಕೋಲ್ಕತಾ: ಸತ್ಯಕ್ಕಾಗಿ ಅಸಹಾಯಕ ಮಹಿಳೆ ಮಾಡುತ್ತಿರುವ ಹೋರಾಟಕ್ಕೆ ನೆರವು ನೀಡಿ ಎಂದು ಹೇಳುವ ಮೂಲಕ ಕ್ರಿಕೆಟಿಗ ಮಹಮದ್ ಶಮಿ ಪತ್ನಿ ತಮ್ಮ ಹೋರಾಟಕ್ಕೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ನೆರವು ಕೋರಿದ್ದಾರೆ.
ಇಂದು ರಾತ್ರಿ ಕೋಲ್ಕತಾದಲ್ಲಿ ಮತ್ತೆ ಸುದ್ದಿಗಾರರೊಂದಿಗೆ ಮಾತನಾಡಿದ ಶಮಿ ಪತ್ಮಿ ಹಸೀನ್ ಜಹಾನ್, ತಮ್ಮ ಹೋರಾಟಕ್ಕೆ ಸಿಎಂ ಮಮತಾ ಬ್ಯಾನರ್ಜಿ ಅವರು ಸಹಾಯ ಮಾಡಬೇಕು ಎಂದು ಹೇಳಿದರು. ಹಣ, ಪ್ರತಿಷ್ಠೆ, ರಾಜಕೀಯ ಬಲ ಹೊಂದಿರುವ ಪ್ರಭಾವಿ ಕ್ರಿಕೆಟಿಗನ ವಿರುದ್ಧ ಓರ್ವ ಅಸಹಾಯಕ ಹೆಣ್ಣು ಮಾಡುತ್ತಿರುವ ಹೋರಾಟ ಇದಾಗಿದ್ದು, ಸತ್ಯಕ್ಕಾಗಿ ನಾನು ಹೋರಾಡುತ್ತಿದ್ದೇನೆ. ಹೀಗಾಗಿ ತಮಗೆ ಸಿಎಂ ಮಮತಾ ಬ್ಯಾನರ್ಜಿ ಅವರು ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಮಮತಾ ಅವರು ನನ್ನ ಪರವಾಗಲಿ ಅಥವಾ ಶಮಿ ಪರವಾಗಲಿ ನಿಲ್ಲಲಿ ಎಂದು ಹೇಳುತ್ತಿಲ್ಲ. ಆದರೆ ಅವರು ಯಾರ ಪರವಾಗಿ ಸತ್ಯವಿದೆಯೋ ಅವರಿಗೆ ಸಹಾಯ ಮಾಡಲಿ ಎಂದು ಹೇಳಿದ್ದಾರೆ.
ನನ್ನ ಹೋರಾಟ ಈಗಾಗಲೇ ನಿರ್ಣಾಯಕ ಹಂತ ತಲುಪಿದ್ದು, ಇಲ್ಲಿಂದ ಮತ್ತೆ ಹಿಂದುರುಗುವ ಪ್ರಶ್ನೆಯೇ ಇಲ್ಲ. ಈಗ ನಾನು ಸತ್ಯಕ್ಕಾಗಿ ಹೋರಾಡುತ್ತೇನೆ. ಈ ಪರಿಸ್ಥಿತಿಯಲ್ಲಿ ನಾನು ನನ್ನ ಹೋರಾಟ ಕೈ ಬಿಟ್ಟರೆ ಪುರುಷರ ಅಟ್ಟಹಾಸದ ವಿರುದ್ಧ ಧನಿ ಎತ್ತಿರುವ ಮಹಿಳಾ ಸಮುದಾಯಕ್ಕೆ ಹಿನ್ನಡೆಯಾಗುತ್ತದೆ. ನನ್ನ ಬಳಿ ಎಲ್ಲ ದಾಖಲೆಗಳಿದ್ದು, ಯಾವುದೇ ಕಾರಣಕ್ಕೂ ನಾನು ನನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಈಗಲೂ ಶಮಿ ನನ್ನ ಮಗಳನ್ನು ಮುಂದಿಟ್ಟುಕೊಂಡು ಪ್ರಕರಣವನ್ನು ವಾಪಸ್ ಪಡೆಯುವಂತೆ ಒತ್ತಡ ಹೇರುತ್ತಿದ್ದಾರೆ. ನನಗೆ ಕರೆ ಮಾಡಿ ನಿನಗೆ ನಾಚಿಕೆಯಾಗುವುದಿಲ್ಲವೇ, ಸ್ವಂತ ಗಂಡನ ವಿರುದ್ದವೇ ಆಪಾದನೆ ಮಾಡುತ್ತಿದ್ದೀಯಾ?, ಮಗಳ ಜೀವನಕ್ಕಾಗಿ ನೀನು ಮಾಡಿದ ಎಲ್ಲ ಆರೋಪಗಳನ್ನೂ ಹಿಂದಕ್ಕೆ ಪಡೆಯಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ನನ್ನ ಜೀವಕ್ಕೆ ಬೆದರಿಕೆ ಇದ್ದು, ನನಗೆ ರಕ್ಷಣೆ ಬೇಕು ಎಂದು ಹಸೀನ್ ಜಹಾನ್ ಹೇಳಿದ್ದಾರೆ.
ಮಾಧ್ಯಮಗಳ ಕ್ಷಮೆ ಕೋರಿದ ಹಸೀನ್ ಜಹಾನ್
ಅಂತೆಯೇ ಸುದ್ದಿಗೋಷ್ಠಿ ವೇಳೆ ಪತ್ರಕರ್ತರೊಬ್ಬರ ಕ್ಯಾಮೆರಾ ಬಿಸಾಡಿ ಆಕ್ರೋಶ ವ್ಯಕ್ತಪಡಿಸಿದ್ದ ಹಸೀನ್ ಜಹಾನ್ ತಮ್ಮ ಕೃತ್ಯಕ್ಕೆ ಕ್ಷಮೆ ಕೇಳಿದ್ದಾರೆ. ಅಂತೆಯೇ ನನ್ನ ವೈಯುಕ್ತಿಕ ಜೀವನದ ಪ್ರಶ್ನೆಗಳನ್ನು ಕೇಳದಂತೆ ಮನವಿ ಮಾಡಿದ್ದಾರೆ. ಅಲ್ಲದೆ ತಾನು ಆಗ ಭಾವೋದ್ವೇಗಕ್ಕೆ ಒಳಗಾಗಿ ಮಾಧ್ಯಮಗಳ ವಿರುದ್ಧ ನಿಯಂತ್ರಣ ಕಳೆದುಕೊಂಡೆ.. ಹೀಗಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್ಪಶ್ಚಿಮ ಬಂಗಾಳWest BengalKolkataMohammed ShamiMamata Banerjeeಮಮತಾ ಬ್ಯಾನರ್ಜಿಕೋಲ್ಕತಾಮಹಮದ್ ಶಮಿHasin jahanಹಸೀನ್ ಜಹಾನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


