ಇಂದು ಮಹಿಳೆಯರನ್ನು ಕಾಣುತ್ತಿರುವ ರೀತಿ ನಾಚಿಕೆ ಹುಟ್ಟಿಸುತ್ತದೆ: ಕಮಲ್ ಹಾಸನ್
ತಮಿಳುನಾಡಿನಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ನಟ ಹಾಗೂ ರಾಜಕಾರಣಿ ...

ಚೆನ್ನೈ: ತಮಿಳುನಾಡಿನಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್, ಮಹಿಳೆಯರನ್ನು ಇಲ್ಲಿ ಕಾಣುತ್ತಿರುವ ರೀತಿ ನಾಚಿಕೆ ಹುಟ್ಟಿಸುತ್ತಿದೆ ಎಂದು ಹೇಳಿದ್ದಾರೆ.
ಇರೋದ್ ನಲ್ಲಿ ಮಾತನಾಡಿದ ಅವರು, ತಮ್ಮ ಮಕ್ಕಳ್ ನಿದಿ ಮೈಯಮ್ ಪಕ್ಷಕ್ಕೆ ಕ್ರಿಸ್ತಿಯನ್ ಮಿಷನರಿಗಳು ಹಣ ಒದಗಿಸಿವೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ.
ಕ್ರಿಸ್ತಿಯನ್ ಮಿಷನರಿಗಳಿಂದ ಹಣ ಸಂಗ್ರಹಿಸಿದ್ದೇನೆ ಎಂದು ಆರೋಪಿಸುತ್ತಾರೆ. ಇದು ಸತ್ಯಕ್ಕೆ ದೂರವಾದ ಆರೋಪವಾಗಿರುವುದರಿಂದ ನಾನು ಈ ವಿಷಯಕ್ಕೆ ನಗುತ್ತೇನೆ ಎಂದು ಹೇಳಿದ್ದಾರೆ.
ನಟರು ರಾಜಕಾರಣಿಗಳಾಗುವುದು ಎಂಬ ವಿಷಯ ಅಲ್ಲ ಇಲ್ಲಿ ಮುಖ್ಯ, ಸಂಬಂಧಪಟ್ಟ ನಾಗರಿಕರು ಇಲ್ಲಿ ಒಳಗೊಳ್ಳುವುದು ಇಲ್ಲಿ ಮುಖ್ಯವಾಗುತ್ತದೆ, ಇಂದು ಮಹಿಳೆಯರನ್ನು ಕಾಣುತ್ತಿರುವ ರೀತಿ ನಾಚಿಕೆ ಹುಟ್ಟಿಸುತ್ತದೆ ಎಂದರು.
ತಾವು ತಮಿಳಿನಾಡಿನಲ್ಲಿ ಸಂಪೂರ್ಣವಾಗಿ ಮದ್ಯ ನಿಷೇಧಿಸಬೇಕೆಂದು ಹೇಳಿರಲಿಲ್ಲ. ಮದ್ಯದಂಗಡಿಗಳು ಹೆಚ್ಚುತ್ತಿರುವ ಬಗ್ಗೆ ಪರೀಕ್ಷೆ ನಡೆಸಬೇಕು. ಈ ಪ್ರಮಾಣದಲ್ಲಿ ಮದ್ಯದಂಗಡಿ ಹರಡಬೇಕೆ, ಬೇಡವೇ ಎಂಬುದು ಇಲ್ಲಿರುವ ಪ್ರಶ್ನೆ. ತಮಿಳಿನಾಡಿನಲ್ಲಿ ಅಂಚೆ ಕಚೇರಿ ಬೇಕೆಂದರೆ ಹುಡುಕಬೇಕು, ಅದೇ ಮದ್ಯದಂಗಡಿ ಬೇಕೆಂದರೆ ಹುಡುಕಬೇಕಾಗಿಲ್ಲ. ಈ ಪರಿಸ್ಥಿತಿ ಬದಲಾಗಬೇಕಿದೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.
ರಾಜ್ಯದಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಪ್ರಮುಖ ವಿರೋಧ ಪಕ್ಷಗಳು ಒತ್ತಾಯಿಸುತ್ತಿರುವ ಸಂದರ್ಭದಲ್ಲಿ ಕಮಲ್ ಹಾಸನ್ ಈ ಹೇಳಿಕೆ ನೀಡಿದ್ದಾರೆ. ತಮಿಳು ಮ್ಯಾಗಜಿನ್ ಆನಂದ್ ವಿಕಟನ್ ನಲ್ಲಿ ಕಮಲ್ ಹಾಸನ್ ತಮ್ಮ ಈ ಅಭಿಪ್ರಾಯವನ್ನು ಹೇಳಿದ್ದಾರೆ. ಎಲ್ಲಾ ವರ್ಗದ ಜನರಿಗೆ ಮದ್ಯ ಬೇಡವೆಂದು ಸಂಪೂರ್ಣವಾಗಿ ನಿಷೇಧಿಸುವುದು ಅಸಾಧ್ಯ ಎಂದು ಕೂಡ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


