ಪ್ರಧಾನಿ ಮೋದಿ 'ರಾಖಿ ಸಹೋದರಿ' 103 ವರ್ಷದ ಶರ್ಬತಿ ದೇವಿ ನಿಧನ
ಪ್ರಧಾನಿ ನರೇಂದ್ರ ಮೋದಿ ಅವರ ರಾಖಿ ಸಹೋದರಿ 103 ವರ್ಷದ ಶರ್ಬತಿ ದೇವಿ ಅವರು ನಿಧನರಾಗಿದ್ದಾರೆ...

Published On :
ಧನ್ಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ರಾಖಿ ಸಹೋದರಿ 103 ವರ್ಷದ ಶರ್ಬತಿ ದೇವಿ ಅವರು ನಿಧನರಾಗಿದ್ದಾರೆ.
ಶನಿವಾರ ರಾತ್ರಿ ಜಾರ್ಖಂಡ್ ನ ಧನ್ಬಾದ್ ನಲ್ಲಿ ಶರ್ಬತಿ ದೇವಿ ಅವರು ವಿಧಿವಶರಾಗಿದ್ದಾರೆ. ಕಳೆದ ವರ್ಷ ರಾಖಿ ಹಬ್ಬದಂದು ದೆಹಲಿಯ ಲೋಕ್ ಕಲ್ಯಾಣ್ ಮಾರ್ಗ್ ನಲ್ಲಿರುವ ಪ್ರಧಾನಿ ಮೋದಿ ಅವರು ಅಧಿಕೃತ ನಿವಾಸದಲ್ಲಿ ಶರ್ಬತಿ ದೇವಿ ಅವರನ್ನು ಭೇಟಿ ಮಾಡುವ ಮೂಲಕ ಸುದ್ದಿಯಾಗಿದ್ದರು.
ಪ್ರಧಾನಿ ಮೋದಿ ಅವರ ಆಹ್ವಾನದಿಂದಲೇ ಶರ್ಬತಿ ದೇವಿ ಮೋದಿ ನಿವಾಸಕ್ಕೆ ಬಂದು ರಾಖಿ ಕಟ್ಟಿದ್ದರು. ಕೆಲ ವರ್ಷಗಳ ಹಿಂದೆ ತನ್ನ ಸಹೋದರ ನನ್ನು ಕಳೆದುಕೊಂಡಿದ್ದ ಶರ್ಬತಿ ದೇವಿ ಮೋದಿ ಅವರೊಂದಿಗೆ ರಾಖಿ ಹಬ್ಬ ಆಚರಿಸುವ ಬಯಕೆ ಹೊಂದಿದ್ದರು. ಈ ಬಗ್ಗೆ ದೇವಿ ಅವರ ಮಗ ಪತ್ರದ ಮೂಲಕ ಪ್ರಧಾನಿಗಳ ಗಮನಕ್ಕೆ ತಂದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿpassed awayವಿಧಿವಶDhanbadಧನ್ಬಾದ್Rakhi SisterSharbati Deviರಾಖಿ ಸಹೋದರಿಶರ್ಬತಿ ದೇವಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


