ದೇಶ

ಕುಣಿಯುವ ಮಹಿಳೆ ಏನನ್ನೋ ಹೇಳಿದ್ದಾರೆ: ಖಿಲ್ಜಿಗೆ ಹೋಲಿಕೆ ಮಾಡಿದ್ದ ನಟಿ ಜಯಪ್ರದಾಗೆ ಅಜಂಕಾನ್ ತಿರುಗೇಟು

ಬಾಲಿವುಡ್'ನ ಪದ್ಮಾವತ್ ಚಿತ್ರದ ಖಿಲ್ಜಿಗೆ ತಮ್ಮನ್ನು ಹೋಲಿಕೆ ಮಾಡಿದ್ದ ನಟಿ ಜಯಪ್ರದಾ ಅವರಿಗೆ ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಅಜಂಖಾನ್ ಅವರು ಭಾನುವಾರ ತಿರುಗೇಟು ನೀಡಿದ್ದಾರೆ...

ಕುಣಿಯುವ ಮಹಿಳೆ ಏನನ್ನೋ ಹೇಳಿದ್ದಾರೆ: ಖಿಲ್ಜಿಗೆ ಹೋಲಿಕೆ ಮಾಡಿದ್ದ ನಟಿ ಜಯಪ್ರದಾಗೆ ಅಜಂಕಾನ್ ತಿರುಗೇಟು
ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಅಜಂಖಾನ್ ಹಾಗೂ ನಟಿ ಜಯ ಪ್ರದಾ
Published On :
ಲಖನೌ: ಬಾಲಿವುಡ್'ನ ಪದ್ಮಾವತ್ ಚಿತ್ರದ ಖಿಲ್ಜಿಗೆ ತಮ್ಮನ್ನು ಹೋಲಿಕೆ ಮಾಡಿದ್ದ ನಟಿ ಜಯಪ್ರದಾ ಅವರಿಗೆ ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಅಜಂಖಾನ್ ಅವರು ಭಾನುವಾರ ತಿರುಗೇಟು ನೀಡಿದ್ದಾರೆ. 
ಜಯಪ್ರದಾ ಅವರ ಹೇಳಿಕೆ ಕುರಿತು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅಜಂಖಾನ್, ಪದ್ಮಾವತ್ ಚಿತ್ರ ನಿರ್ಮಾಣಗೊಂಡಿದೆ. ಚಿತ್ರದಲ್ಲಿ ಖಿಲ್ಜಿ ಪಾತ್ರ ಅತ್ಯಂತ ಕೆಟ್ಟದಾಗಿದೆ ಎಂದು ಕೇಳಿದೆ. ಖಿಲ್ಜಿ ಬರುವುದಕ್ಕೂ ಮುನ್ನವೇ ಪದ್ಮಾವತಿಯವರು ಇಹಲೋಕ ತ್ಯಜಿಸಿದ್ದರು ಎಂಬುದನ್ನು ಕೇಳಿದ್ದೇನೆ. ಆದರೆ, ಕುಣಿಯುವ ಮಹಿಳೆಯೊಬ್ಬರು ಸೇವಕನ ಕುರಿತಂತೆ ಏನನ್ನೋ ಹೇಳಿದ್ದಾರೆ. ಈಗ ಹೇಳಿ ಇಂತಹ ಕುಣಿಯುವವರು ಮತ್ತು ಸಂಗೀತಗಾರರು ನನ್ನ ಮುಂದೆ ಬಂದಾಗ ನಾನು ಯಾವಾಗ ರಾಜಕೀಯ ಮಾಡಲಿ? ಎಂದು ಪ್ರಶ್ನಿಸಿದ್ದಾರೆ. 
ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಜಯಪ್ರದಾ ಅವರು, 2009ರಲ್ಲಿ ಉತ್ತರಪ್ರದೇದ ರಾಂಪುರ ವಿಧಾನಸಭಾ ಕ್ಷೇತ್ರದಿಂದ ಮರುಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಅಂಜಖಾನ್ ನನ್ನ ಹೆಸರನ್ನು ಹಾಳು ಮಾಡಲು ಇಲ್ಲ ಸಲ್ಲದ ಕುತಂತ್ರಗಳನ್ನು ನಡೆಸಿದ್ದರು, ಪದ್ಮಾವತ್ ಸಿನಿಮಾ ವೀಕ್ಷಣೆಯ ವೇಳೆ ಸಿನಿಮಾದಲ್ಲಿ ಖಿಲ್ಜಿ ಪಾತ್ರ, ಅಂದು ಚುನಾವಣೆಯ ವೇಳೆ ಅಜಂಖಾನ್ ನನಗೆ ಕಿರುಕುಳ ನೀಡಿದ್ದನ್ನು ನೆನಪಿಸಿತು ಎಂದು ಹೇಳಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.