ದೇಶ

ರಾಜಸ್ಥಾನ: 40ರ ಮಹಿಳೆ ಮೇಲೆ ಆರು ಕಾಮುಕರಿಂದ ಅತ್ಯಾಚಾರ, ವೀಡಿಯೋ ಹರಿಬಿಟ್ಟ ದುಷ್ಕರ್ಮಿಗಳು

40 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಆರು ಮಂದಿ ಕಾಮುಕರು ಅತ್ಯಾಚಾರದ ವೀಡಿಯೋವನ್ನು ಸಾಮಾಜಿಕ ತಾಣದಲ್ಲಿ ಹರಿಬಿಟ್ಟ ಘಟನೆ ರಾಜಸ್ಥಾನದ ಬರಾನ್ ಜಿಲ್ಲೆಯಲ್ಲಿ ನಡೆದಿದೆ.

ರಾಜಸ್ಥಾನ: 40ರ ಮಹಿಳೆ ಮೇಲೆ ಆರು ಕಾಮುಕರಿಂದ ಅತ್ಯಾಚಾರ, ವೀಡಿಯೋ ಹರಿಬಿಟ್ಟ ದುಷ್ಕರ್ಮಿಗಳು
ಸಾಂದರ್ಭಿಕ ಚಿತ್ರ
Published On :
ಕೋಟಾ(ರಾಜಸ್ಥಾನ): 40 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಆರು ಮಂದಿ ಕಾಮುಕರು ಅತ್ಯಾಚಾರದ ವೀಡಿಯೋವನ್ನು ಸಾಮಾಜಿಕ ತಾಣದಲ್ಲಿ ಹರಿಬಿಟ್ಟ ಘಟನೆ ರಾಜಸ್ಥಾನದ ಬರಾನ್ ಜಿಲ್ಲೆಯಲ್ಲಿ ನಡೆದಿದೆ.
ಒಂದು ತಿಂಗಳ ಹಿಂದೆಯೇ ಈ ಅಪರಾಧ ಕೃತ್ಯ ನಡೆದಿತ್ತಾದರೂ ಸಾಮಾಜಿಕ ತಾಣದಲ್ಲಿ ವೀಡಿಯೋ ದೃಶ್ಯ ಕಂಡ ಸಂತ್ರಸ್ತ ಮಹಿಳೆ ಇತ್ತೀಚೆಗೆ  ಬರಾನ್ ಮಹಿಳಾ ಪೋಲೀಸ್ ಠಾಣೆಗೆ ದೂರಿತ್ತಿದ್ದಾರೆ.
ಐಪಿಸಿ ಸೆಕ್ಷನ್ 376, ಐಟಿ ಕಾಯ್ದೆ ಸೇರಿ ವಿವಿಧ ವಿಭಾಗಗಳಡಿಯಲ್ಲಿ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಆರು ಮಂದಿಯಲ್ಲಿ ಯಾರನ್ನೂ ಬಂಧಿಸಲಾಗಿಲ್ಲ ಎಂದು ತಿಳಿದು ಬಂದಿದೆ.
ಕೋಟಾದ ರಸ್ತೆ ಬದಿಯ ಡಾಬಾದಲ್ಲಿ ಕೆಲಸ ಮಾಡುವ ಮಹಿಳೆ ಮಾರ್ಚ್ 5ರಂದು ಪೋಲೀಸರಿಗೆ ದೂರಿತ್ತಿದ್ದು ತನ್ನ ಅಳಿಯನ ಕುಟುಂಬವನ್ನು ಕಾಣಲು ತಿಂಗಳ ಹಿಂದೆ ಬರಾನ್ ಗೆ ತೆರಳಿದ್ದಾಗ ಈ ಘಟನೆ ನಡೆದಿದೆ ಎಂದು ದಾಖಲಿಸಿದ್ದಾರೆ.
ತಾನು ಬರಾನ್ ಗೆ ತೆರಳಿದ್ದಾಗ ನನ್ನ ಪರಿಚಯವಿದ್ದ ಚೇತನ್ ಮೀನಾ (21) ಎನ್ನುವ ವ್ಯಕ್ತಿ ನನ್ನನ್ನು ನಿಗದಿತ ಸ್ಥಳಕ್ಕೆ ತಲುಪಿಸುವುದಾಗಿ ಹೇಳಿ ಮೋಟಾರ್ ಬೈಕ್ ನಲ್ಲಿ ಕೂರಿಸಿಕೊಂಡ. ಆತ ನನ್ನನ್ನು ಸಾಮಸ್ಪುರ ಹಳ್ಳಿಯ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ಅಲ್ಲಿ ಇನ್ನೂ ಐದು ಮಂದಿ, ಆರೋಪಿ ಮೀನಾ ಜತೆ ಸೇರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಆ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.
ಹೀಗೆ ದುಷ್ಕೃತ್ಯ ಎಸಗಿದ ಬಳಿಕ ಆಕೆಯನ್ನು ಅಳಿಯನ ಮನೆ ಬಳಿ ಬಿಟ್ಟ ಆರೋಪಿಗಳು ಈ ವಿಚಾರವನ್ನು ಹೊರಗೆ ಹೇಳಿದ್ದರೆ ನಾವು ಆಕೆಯ ಸಂಬಂಧಿಕರ ಪ್ರಾಣವನ್ನು ತೆಗೆಯುವುದಾಗಿ ಬೆದರಿಸಿದ್ದರು. ಆದರೆ ಸಾಮಾಜಿಕ ತಾಣದಲ್ಲಿ ವೀಡಿಯೋ ಅಪ್ ಲೋಡ್ ಆದ ಬಳಿಕ ಧೈರ್ಯ ತಂದುಕೊಂಡ ಸಂಸ್ತ್ರಸ್ತ ಮಹಿಳೆ ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ.
ಪ್ರಕರಣ ಸಂಬಂಧ ಸಂತ್ರಸ್ತೆಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಎದುರಿಗೆ ಇದಾಗಲೇ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೋಲೀಸರು ಮಾಹಿತಿ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.