ಖ್ಯಾತ ಸೂಫಿ ಗಾಯಕ ಉಸ್ತಾದ್ ಪ್ಯಾರೆ ಲಾಲ್ ವಡಾಲಿ ನಿಧನ
ಖ್ಯಾತ ಸೂಫಿ ಗಾಯಕ ಉಸ್ತಾದ್ ಪ್ಯಾರೇ ಲಾಲ್ ವಡಾಲಿ ಅವರು ನಿಧನರಾಗಿದ್ದು, ಅವರಿಗೆ 75 ವರ್ಷ ವಯಸ್ಸಾಗಿತ್ತು.

Published On :
ಅಮೃತ್ ಸರ: ಖ್ಯಾತ ಸೂಫಿ ಗಾಯಕ ಉಸ್ತಾದ್ ಪ್ಯಾರೇ ಲಾಲ್ ವಡಾಲಿ ಅವರು ನಿಧನರಾಗಿದ್ದು, ಅವರಿಗೆ 75 ವರ್ಷ ವಯಸ್ಸಾಗಿತ್ತು.
ಖ್ಯಾತ ಗಾಯಕ ಪೂರಣ್ ಚಂದ್ ವಡಾಲಿ ಅವರ ಕಿರಿಯ ಸಹೋದರರಾಗಿರುವ ಪ್ಯಾರೇಲಾಲ್ ವಡಾಲಿ ಅವರು ಹೃದಯಸ್ಥಂಭನಕ್ಕೊಳಗಾಗಿ ಶುಕ್ರವಾರ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಅನಾರೋಗ್ಯದ ಕಾರಣದಿಂದಾಗಿ ಇತ್ತೀಚೆಗಷ್ಟೇ ಪ್ಯಾರೇಲಾಲ್ ವಡಾಲಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆಸ್ಪತ್ರೆಯಲ್ಲಿಯೇ ಪ್ಯಾರೇಲಾಲ್ ಅವರು ಹೃದಯಸ್ಥಂಭನದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸೂಫಿ ಗಾಯನದಲ್ಲಿ ವಡಾಲಿ ಬ್ರದರ್ಸ್ ಎಂದೇ ಖ್ಯಾತಿ ಗಳಿಸಿದ್ದ ಪ್ಯಾರೇಲಾಲ್ ವಡಾಲಿ ಹಾಗೂ ಪೂರಣ್ ಚಂದ್ ವಡಾಲಿ ಅವರು, ನೂರಾರು ಸೂಫಿ ಗಾಯನಗಳನ್ನು ಹಾಡಿದ್ದಾರೆ. ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ತಮ್ಮ ಗಾಯನಸುಧೆ ಹರಿಸುವ ಮೂಲಕ ವಡಾಲಿ ಸಹೋದರರು ಖ್ಯಾತಿ ಗಳಿಸಿದ್ದರು. ಬಾಲಿವುಡ್ ಪಿಂಜರ್ ಚಿತ್ರಕ್ಕೂ ವಡಾಲಿ ಸಹೋದರರು ಹಿನ್ನಲೆ ಗಾಯನ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


