ದೇಶ

ಚೆನ್ನೈ: ಹಾಡಹಗಲೇ ಕಾಲೇಜು ಬಳಿ ಹುಡುಗಿಯ ಕತ್ತು ಸೀಳಿ ಕೊಲೆ

ಕಾಲೇಜಿನಿಂದ ಮರಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ನಡುರಸ್ತೆಯಲ್ಲಿಯೇ ಕೊಲೆ ಮಾಡಿರುವ ದುರಂತ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.

ಚೆನ್ನೈ: ಹಾಡಹಗಲೇ ಕಾಲೇಜು ಬಳಿ ಹುಡುಗಿಯ ಕತ್ತು ಸೀಳಿ ಕೊಲೆ
ಚೆನ್ನೈ: ಹಾಡಹಗಲೇ ಕಾಲೇಜು ಬಳಿ ಹುಡುಗಿಯ ಕತ್ತು ಸೀಳಿ ಕೊಲೆ
Published On :
ಚೆನ್ನೈ: ಕಾಲೇಜಿನಿಂದ ಮರಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ನಡುರಸ್ತೆಯಲ್ಲಿಯೇ ಕೊಲೆ ಮಾಡಿರುವ ದುರಂತ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.
ಚೆನ್ನೈನ ಪಶ್ಚಿಮ ಕೆಕೆ ನಗರದ ಮೀನಾಕ್ಷಿ ಅಕಾಡೆಮಿ ಹೈಯರ್ ಎಜುಕೇಷನ್ ಕಾಲೇಜಿನ ಸಮೀಪ ಈ ದುರಂತ ಘಟಿಸಿದ್ದು ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ಎಂ. ಅಶ್ವಿನಿ (19) ಮೃತ ದುರ್ದೈವಿಯಾಗಿದ್ದಾರೆ.
ಇಂದು (ಶುಕ್ರವಾರ) ಮಧ್ಯಾಹ್ನ 2.45ರ ಸುಮಾರಿಗೆ ಅಶ್ವಿನಿ ಕಾಲೇಜು ಮುಗಿಸಿ ಮನೆಗೆ ತೆರಳಲು ಬಸ್ ನಿಲ್ದಾಣದತ್ತ ಬರುತ್ತಿದ್ದಳು. ಆವೇಳೆ ಅಲಗೇಶನ್  ಎನ್ನುವಾತ ಸಹ ಬರುತ್ತಿದ್ದ. ಕೈಯಲ್ಲಿ ಸೀಮ ಎಣ್ಣೆ ಬಾತಲಿ  ಹಿಡಿದಿದ್ದ ಆತ ಅಶ್ವಿನಿಯ ಕತ್ತನ್ನು ಚಾಕುವಿನಿಂದ ಸೀಳುವ ಮೂಲಕ ಬರ್ಬರವಾಗಿ ಹತ್ಯೆಗೈದಿದ್ದಾನೆ.
ಘತನೆ ವಿವರ
ತಂದೆಯನ್ನು ಕಳೆದುಕೊಂಡಿದ್ದ ಅಶ್ವಿನಿ ಚೆನ್ನೈನ ಮಧುರವೋಯಲ್ ಎನ್ನುವಲ್ಲಿ ತನ್ನ ತಾಯಿಯ ಜತೆ ವಾಸವಾಗಿದ್ದಳು ಅದೇ ಪ್ರದೇಶದಲ್ಲಿ ಅಲಗೇಶನ್ ಸಹ ವಾಸ್ತವ್ಯವಿದ್ದನು. ಈತನು ನೀರಿನ ಕ್ಯಾನ್ ಗಳನ್ನು ಪೂರೈಕೆ ಮಾಡುವ ಉದ್ಯೋಗಿಯಾಗಿದ್ದು ಸ್ಥಳೀಯ ನಿವಾಸಿಯಾಗಿದ್ದ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ಅಷ್ಟೇ ಅಲ್ಲದೆ ಅಲಗೇಶನ್ ತಾನು ಈ ಮೊದಲೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಈತ ಜಾಮೀನಿನ ಮೇಲೆ ಹೊರಬಂದಿದ್ದ ಎಂದು ಪೋಲೀಸರು ಹೇಳಿದರು.
ಅಶ್ವಿನಿಯನ್ನು ಇರಿದು ಹತ್ಯೆ ಮಾಡಿದ ಆರೋಪಿ ಅಲಗೇಶನ್ ನ್ನು ಸ್ಥಳೀಯರು ಪೊಳಿಸರಿಗೆ ಒಪ್ಪಿಸಿದ್ದಾರೆ.
Story image
ಇದೇ ವೇಳೆ ಅಶ್ವಿನಿ ಕುಟುಂಬವು ಅಲಗೇಶನ್  ವಿರುದ್ಧ ಈ ಹಿಂದೆಯೇ ದೂರು ಸಲ್ಲಿಸಿತ್ತು,  ಪೋಲೀಸ್ ದೂರು ಸಲ್ಲಿಸಿದ್ದ ದಿನದಿಂಡಲೂ ಅಶ್ವಿನಿ ಕಾಲೇಜಿಗೆ ತೆರಳುತ್ತಿರಲಿಲ್ಲ. ಇದೇ ಕೆಲವು ದಿನಗಳ ಹಿಂದಷ್ಟೇ ಅವಳು ಪುನಃ ತರಗತಿಗಳಿಗೆ ಹಾಜರಾಗಲು ಪ್ರಾರಂಭಿಸಿದ್ದಳು. ಆದರೆ ಆಕೆ ಜಾಫರ್ ಖಾನ್ ಪೇಟ್ ನಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ನೆಲೆಯಾಗಿದ್ದಳೆಂದು ಮೂಲಗಳು ಹೇಳಿದೆ.
ಚೆನ್ನೈ ನಲ್ಲಿ ಕಾಲೇಜು ವಿದ್ಯಾರ್ಥಿನಿಯರ ಮೇಲೆ ಹಲ್ಲೆ, ನಡೆಸಿ ಹತ್ಯೆ ಮಾಡುವ ಘಟನೆಗಳು ಇತ್ತೀಚೆಗೆ ಹೆಚ್ಚುತ್ತಿದೆ. ಫ್. 20ರಂದು ಚೆನ್ನೈ ಅಣ್ಣಾ ನಗರ್ ಟವರ್ ಪಾರ್ಕ್ ನಲ್ಲಿ ತನ್ನ ಭಗ್ನ ಪ್ರೇಮಿಯೊಬ್ಬನಿಂದ ಸ್ನಾತಕ ವಿದ್ಯಾರ್ಥಿನಿಯೊಬ್ಬಳು ಆರು ಬಾರಿ ಚಾಕುವಿನಿಂದ ಇರಿತಕ್ಕೊಳಪಟ್ಟು ಹತ್ಯೆಯಾಗಿದ್ದಳು.  ಹೀಗೆ ಹತ್ಯೆ ನಡೆಸಿದ್ದ ಆರೋಪಿ ಎಲೆಕ್ಚ್ತಿಕಲ್ ಇಂಜಿನಿಯರ್ ಆಗಿದ್ದು ಆತ ವಿದ್ಯಾರ್ಥಿನಿಯನ್ನು ಹತ್ಯೆ ಮಾಡಿದ ಬಳಿಕ ಅದೇ ಚಾಕುವಿನಿಂದ ತನ್ನನ್ನು ಸಹ ಇರಿದುಕೊಂಡು ಸಾಯಲು ಮುಂದಾಗಿದ್ದ.
ಇನ್ನೊಂದು ಪ್ರಕರಣದಲ್ಲಿ ಕಳೆದ ವರ್ಷ ಏಪ್ರಿಲ್ ನಲ್ಲಿ ಜಾನ್ ಮ್ಯಾಥ್ಯೂ ಎನ್ನುವ ಇಪ್ಪತ್ತೆರಡರ ಯುವಕ ಯುವತಿಯೊಬ್ಬಳನ್ನು ಬರ್ಬರವಾಗಿ ಕೊಂದು ತಾನು ಸಹ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಎನ್ನುವುದನ್ನು ನಾವಿಲ್ಲಿ ಸ್ಮರಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.