ದೇಶ

ಬಿಜೆಪಿಗೆ ಬೆಂಬಲ ನೀಡಿದ್ದರಿಂದ ನಮ್ಮಲ್ಲೇನೂ ವ್ಯತ್ಯಾಸವಾಗಿಲ್ಲ: ಚಂದ್ರಬಾಬು ನಾಯ್ಡು

2014ರ ಚುನಾವಣೆಯಲ್ಲಿ ಬಿಜೆಪಿಯೊಡನೆ ಕೈಜೋಡಿಸಿದ್ದರಿಂದ ಟಿಡಿಪಿಗೆ ಏನೂ ಸಿಕ್ಕಿಲ್ಲ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಬಿಜೆಪಿಗೆ ಬೆಂಬಲ ನೀಡಿದ್ದರಿಂದ ನಮ್ಮಲ್ಲೇನೂ ವ್ಯತ್ಯಾಸವಾಗಿಲ್ಲ: ಚಂದ್ರಬಾಬು ನಾಯ್ಡು
ಚಂದ್ರಬಾಬು ನಾಯ್ಡು
Published On :
ಅಮರಾವತಿ(ಆಂಧ್ರ ಪ್ರದೇಶ): 2014ರ ಚುನಾವಣೆಯಲ್ಲಿ ಬಿಜೆಪಿಯೊಡನೆ ಕೈಜೋಡಿಸಿದ್ದರಿಂದ ಟಿಡಿಪಿಗೆ ಏನೂ ಸಿಕ್ಕಿಲ್ಲ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನಿಡುವದಕ್ಕೆ ನಿರಾಕರಿಸಿದ ಕೇಂದ್ರದ ನಿಲುವನ್ನು ಖಂಡಿಸಿ ನಿನ್ನೆ ಮೋದಿ ಸಂಪುಟದಲ್ಲಿನ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಟಿಡಿಪಿ ಮುಖಂಡರು ರಜೀನಾಮೆ ಸಲ್ಲಿಸಿದ್ದರು. ಇದಾದ ಬಳಿಕ ನಾಯ್ಡು ತಮ್ಮ ಪಕ್ಷದ ಮುಖಂಡರೊಡನೆ ಸಭೆ ನಡೆಸಿದ್ದಾರೆ. ಜತೆಗೆ ದೆಹಲಿಯಲ್ಲಿರುವ ಪಕ್ಷದ ಸಂಸದರೊಡನೆ ಸತತ ದೂರವಾಣಿ ಸಂಪರ್ಕದಲ್ಲಿದ್ದಾರೆ.
2014ರಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷವು  ಸ್ವತಂತ್ರವಾಗಿ ಸ್ಪರ್ಧಿಸಿದ್ದು ಉತ್ತಮ ಸಾಧನೆ ಮಾಡಿತ್ತು ಎಂದು ನಾಯ್ಡು ಹೇಳಿದ್ದಾರೆ. ಹಾಗೆಯೇ ಕೆಲವೇ ತಿಂಗಳ ಬಳಿಕ ನಡೆದ ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿಯೊಡನೆ ಮೈತ್ರಿ ಮಾಡಿಕೊಂಡು ಸ್ಪರ್ಧೆ ನಡೆಸಿದಾಗಲೂ ಪಕ್ಷ ಜನರಲ್ಲಿ ಅದೇ ವಿಶ್ವಾಸ ಉಳಿಸಿಕೊಂಡಿತ್ತು, ಅವರು ಹೇಳಿದರು.
ಟಿಡಿಪಿ ಸಂಸದರು ಸಂಪುಟಕ್ಕೆ ರಾಜೀನಾಮೆ ನಿಡಿದ ತೀರ್ಮಾನವನ್ನು ಲೋಕಸಭೆಯ ಅನೇಕ ಸಂಸದರು, ಪಕ್ಷಗಳು ಬೆಂಬಲಿಸಿದೆ. ಟಿಡಿಪಿ ಸಂಸದರು ಸಮಕ್ಕೆ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ. ರಾಜ್ಯದ ಶೇ.98ರಷ್ಟು ಜನರು ಸಹ ಇದನ್ನು ಒಪ್ಪಿಕೊಂಡಿದ್ದಾರೆ ಎಂದು ನಾಯ್ಡು ಹೇಳಿದರು.
ಇದೇ ವೇಳೆ ಕೇಂದ್ರ ಸಚಿವರಾದ ಅಶೋಕ್ ಗಜಪತಿ ರಾಜು ಹಾಗೂ ವೈ.ಎಸ್. ಚೌಧರಿ ರಾಜೀನಾಮೆಗಳನ್ನು ಶುಕ್ರವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಂಗೀಕರಿಸಿದ್ದಾರೆ.
ಇದೀಗ ರಾಷ್ಟ್ರ ರಾಜಕೀಯದ ಬೆಳವಣಿಗೆಗಳನ್ನು ಗಮನಿಸುವ ಸಲುವಾಗಿ ಪಕ್ಷದ ಹಿರಿಯ ನಾಯಕರನ್ನೊಳಗೊಂಡ ತಂಡವೊಂದನ್ನು ನಾಯ್ಡು ರಚಿಸಿದ್ದಾರೆ. ಆಂಧ್ರಪ್ರದೇಶದ ಹಣಕಾಸು ಸಚಿವ ವೈ. ರಾಮಕೃಷ್ಣುಡು, ಕಲಾ ವೆಂಕಟ ರಾವ್, ಎಸ್.ಚಂದ್ರಮೋಹನ್ ರೆಡ್ಡಿ, ಮತ್ತಿತರರು ತಂಡದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.