ಭೂಗತ ಪಾತಕಿ ದಾವೂದ್ ಬಲಗೈ ಭಂಟ ಫಾರೂಕ್ ಟಕ್ಲಾ ಬಂಧನ!
ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನ ಬಲಗೈ ಭಂಟ ಫರೂಕ್ ಟಕ್ಲಾ ನನ್ನು ಸಿಬಿಐ ಅಧಿಕಾರಿಗಳು ಬಂಧಿಸಿ ಮುಂಬೈಗೆ ಕರೆತಂದಿದ್ದಾರೆ.

Published On :
ಮುಂಬೈ: ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನ ಬಲೈಗ ಭಂಟ ಫರೂಕ್ ಟಕ್ಲಾ ನನ್ನು ಸಿಬಿಐ ಅಧಿಕಾರಿಗಳು ಬಂಧಿಸಿ ಮುಂಬೈಗೆ ಕರೆತಂದಿದ್ದಾರೆ.
1993ರ ಮುಂಬೈ ಸರಣಿ ಸ್ಫೋಟದ ರೂವಾರಿಯಾಗಿರುವ ಫರೂಕ್ ಟಕ್ಲಾ ನನ್ನ ದುಬೈನಿಂದ ಗಡಿಪಾರು ಮಾಡಲಾಗಿದ್ದು, ಇದೀಗ ಟಕ್ಲಾನನ್ನು ಬಂಧಿಸಿರುವ ಸಿಬಿಐ ಅಧಿಕಾರಿಗಳು ಮುಂಬೈ ಕರೆತಂದಿದ್ದಾರೆ.
ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿಯಾಗಿದ್ದ ಟಕ್ಲಾ ಬಂಧನಕ್ಕೆ ಭಾರತ ಸರ್ಕಾರ ಅವಿರತ ಪ್ರಯತ್ನ ಮಾಡುತ್ತಿತ್ತಾದರೂ, ತಲೆಮರೆಸಿಕೊಂಡು ದುಬೈನಲ್ಲಿ ತಲಮರೆಸಿಕೊಂಡಿದ್ದ ಟಕ್ಲಾಗಾಗಿ 1995ರಲ್ಲಿ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು.
ಇದೀಗ ದುಬೈನಿಂದ ಆತನನ್ನು ಗಡಿಪಾರು ಮಾಡಲಾಗಿದ್ದು, ಇದೀಗ ಟಕ್ಲಾನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಟಕ್ಲಾ ವಿರುದ್ಧ ಟಾಡಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿರುವ ಸಿಬಿಐ ಅಧಿಕಾರಿಗಳು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MumbaiಮುಂಬೈMaharashtraCBIಸಿಬಿಐDawood Ibrahimದಾವೂದ್ ಇಬ್ರಾಹಿಂ1993 ಸರಣಿ ಸ್ಫೋಟ1993 Serial BlastFarooq Taklaಫಾರೂಕ್ ಅಬ್ಗುಲ್ಲಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


