ಆಂಧ್ರ ಪ್ರದೇಶಕ್ಕೆ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಲು ಬದ್ಧ: ಜೇಟ್ಲಿ
ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದಿದ್ದರೆ ಎನ್ ಡಿಎ ತೊರೆಯುವುದಾಗಿ ತೆಲುಗು ದೇಶಂ ಪಕ್ಷ ಬೆದರಿಕೆ ಹಾಕುತ್ತಿದ್ದು, ...

Published On :
ನವದೆಹಲಿ: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದಿದ್ದರೆ ಎನ್ ಡಿಎ ತೊರೆಯುವುದಾಗಿ ತೆಲುಗು ದೇಶಂ ಪಕ್ಷ ಬೆದರಿಕೆ ಹಾಕುತ್ತಿದ್ದು, ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ವಿಶೇಷ ಸ್ಥಾನಮಾನದ ರಾಜ್ಯಗಳಿಗೆ ಸರಿಸಮಾನಾದ ಆರ್ಥಿಕ ನೆರವು ನೀಡುವುದಾಗಿ ಬುಧವಾರ ಭರವಸೆ ನೀಡಿದೆ.
ಆಂಧ್ರಪ್ರದೇಶ ಇಬ್ಭಾಗವಾದ ನಂತರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ವಿಭಜನೆ ವೇಳೆ ಕೇಂದ್ರ ಸರ್ಕಾರ ಆಂಧ್ರಕ್ಕೆ ನೀಡಿದ್ಧ ಎಲ್ಲಾ ಭರವಸೆಗಳನ್ನು ಈಡೇರಿಸಲು ನಾಾವು ಬಧ್ಧರಾಗಿದ್ದಾವೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹೇಳಿದ್ದಾರೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ತಮ್ಮ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ 2014ರಲ್ಲಿ ರಾಜ್ಯ ವಿಭಜನೆಯಾದ ನಂತರ ಆ ಸ್ಥಾನಮಾನ ಕಳೆದುಕೊಂಡಿದೆ ಮತ್ತು 14ನೇ ಹಣಕಾಸು ಆಯೋಗದ ಶಿಫಾರಸಿನಂತೆ ವಿಶೇಷ ಸ್ಥಾನಮಾನವನ್ನು ಕೇವಲ ಈಶಾನ್ಯ ರಾಜ್ಯಗಳಿಗೆ ಸೀಮಿತಗೊಳಿಸಲಾಗಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.
ವಿಶೇಷ ಸ್ಥಾನಮಾನದ ರಾಜ್ಯಗಳಿಗೆ ನೀಡುವಂತೆ ಆಂಧ್ರ ಪ್ರದೇಶಕ್ಕೂ ಕೇಂದ್ರದ ಯೋಜನೆಗಳಿಗೆ ಶೇ.90ರಷ್ಟು ಅನುದಾನ ನೀಡಲಾಗುವುದು ಎಂದು ಜೇಟ್ಲಿ ತಿಳಿಸಿದ್ದಾರೆ.
ವಿಶೇಷ ಸ್ಥಾನಮಾನ ಹೊಂದಿರುವ ರಾಜ್ಯಗಳಿಗೆ ಕೇಂದ್ರದ ಯೋಜನೆಗಳಿಗೆ ಶೇ.90ರಷ್ಟು ಅನುದಾನ ಒದಗಿಸಲಾಗುತ್ತದೆ. ಇತರೆ ರಾಜ್ಯಗಳಿಗೆ ಶೇ.60ರಷ್ಟು ಅನುದಾನ ಒದಗಿಸಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


