ದೇಶ

ತನಿಖೆಗೆ ಕಾರ್ತಿ ಚಿದಂಬರಂ ಸಹಕರಿಸುತ್ತಿಲ್ಲ, ಇನ್ನೂ 9 ದಿನ ವಶಕ್ಕೆ ಬೇಕು: ಕೋರ್ಟ್ ಗೆ ಸಿಬಿಐ

ಐಎಎನ್ ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಕಾರ್ತಿ ಚಿದಂಬರಂ ಅವರ ಬಂಧನ ಅವಧಿ ವಿಸ್ತರಣೆ ಮಾಡುವಂತೆ ಸಿಬಿಐ ಅಧಿಕಾರಿಗಳು ನ್ಯಾಯಾಲಯದಲ್ಲಿ ಮನವಿ ಸಲ್ಲಿಕೆ ಮಾಡಿದ್ದಾರೆ.

ತನಿಖೆಗೆ ಕಾರ್ತಿ ಚಿದಂಬರಂ ಸಹಕರಿಸುತ್ತಿಲ್ಲ, ಇನ್ನೂ 9 ದಿನ ವಶಕ್ಕೆ ಬೇಕು: ಕೋರ್ಟ್ ಗೆ ಸಿಬಿಐ
ಸಂಗ್ರಹ ಚಿತ್ರ
Published On :
ನವದೆಹಲಿ: ಐಎಎನ್ ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಕಾರ್ತಿ ಚಿದಂಬರಂ ಅವರ ಬಂಧನ ಅವಧಿ ವಿಸ್ತರಣೆ ಮಾಡುವಂತೆ ಸಿಬಿಐ ಅಧಿಕಾರಿಗಳು ನ್ಯಾಯಾಲಯದಲ್ಲಿ ಮನವಿ ಸಲ್ಲಿಕೆ ಮಾಡಿದ್ದಾರೆ.
ಇಂದಿಗೆ ಕಾರ್ತಿ ಚಿದಂಬರಂ ಅವರ ಬಂಧನದ ಅವಧಿ ಮುಕ್ತಾಯವಾದ ಹಿನ್ನಲೆಯಲ್ಲಿ ಅವರನ್ನು ದೆಹಲಿ ಕೋರ್ಟ್ ಮುಂದೆ ಹಾಜರು ಪಡಿಸಲಾಯಿತು. ಈ ವೇಳೆ ದೆಹಲಿ ಕೋರ್ಟ್ ನ ವಿಶೇಷ ನ್ಯಾಯಾಧೀಶರಾದ ಸುನಿಲ್ ರಾಣಾ ಅವರಿಗೆ ಮನವಿ ಸಲ್ಲಿಕೆ ಮಾಡಿದ ಸಿಬಿಐ ಪರ ವಕೀಲರು, ಇನ್ನೂ 9 ದಿನಗಳ ಕಾಲ ಕಾರ್ತಿ ಚಿದಂಬರಂರನ್ನು ಸಿಬಿಐ ಅಧಿಕಾರಿಗಳ ವಶಕ್ಕೆ ನೀಡಬೇಕು ಎಂದು ಹೇಳಿದರು.
ಇದೇ ವೇಳೆ ನ್ಯಾಯಾಲಯಕ್ಕೆ ಕೆಲ ಪ್ರಮುಖ ದಾಖಲೆಗಳನ್ನು ಸಲ್ಲಿಕೆ ಮಾಡಿದ ಸಿಬಿಐ ಅಧಿಕಾರಿಗಳು, ಹಾಲಿ ತನಿಖೆ ವೇಳೆ ದೊಡ್ಡ ಮಟ್ಟದ ಹಗರಣ ಶಂಕೆ ಮೂಡುತ್ತಿದ್ದು, ಇದನ್ನು ಬಯಲಿಗೆಳೆಯಲು ತಮಗೆ ಮತ್ತಷ್ಟು ಕಾಲಾವಕಾಶಬೇಕು. ಅಂತೆಯೇ ಕಾರ್ತಿ ಚಿದಂಬರಂರನ್ನು ಮತ್ತಷ್ಟು ವಿಚಾರಣೆಗೊಳಪಡಿಸಬೇಕು ಎಂದು  ಸಿಬಿಐ ಅಧಿಕಾರಿಗಳು ಮನವಿ ಮಾಡಿದ್ದರು.
ದೊಡ್ಡ ಮಟ್ಟದ ಹಗರಣದ ಪಿತೂರಿಯೊಂದನ್ನು ಬಯಲಿಗೆಳೆಯಬೇಕಿದ್ದು, ಈ ಸಂಬಂಧ ಪ್ರಸ್ತುತ ಬಂಧನಕ್ಕೀಡಾಗಿರುವ ಕಾರ್ತಿ ಚಿದಂಬರಂ ವಿಚಾರಣೆ ಅತ್ಯಗತ್ಯ. ಈ ಹಿಂದೆ ಕಾರ್ತಿ ಐದು ದಿನಗಳ ಕಾಲ ವಶದಲ್ಲಿದ್ದರಾದರೂ ವಿತಾರಣೆ ವೇಳೆ ಅವರು ಸೂಕ್ತ ರೀತಿಯಲ್ಲಿ ಸಹಕರಿಸಿಲ್ಲ. ಹೀಗಾಗಿ ಮತ್ತೆ ಕಾರ್ತಿ ಚಿದಂಬರಂ ಅವರನ್ನು ಒಂಭತ್ತು ದಿನಗಳ ಕಾಲ ವಶಕ್ಕೆ ನೀಡಬೇಕು ಎಂದು ಸಿಬಿಐ ಮನವಿ ಮಾಡಿದೆ.
 ಇನ್ನು ಈ ಹಿಂದಿನ ವಿಚಾರಣೆಯಲ್ಲಿ ಅಡಿಷನಲ್ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಗೈರಾಗಿದ್ದ ಹಿನ್ನಲೆಯಲ್ಲಿ ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿತ್ತು. ವಿಚಾರಣೆ ವೇಳೆ ನ್ಯಾಯಾಧೀಶರು ಕಾರ್ತಿ ಚಿದಂಬರಂ ತಮ್ಮ ತಂದೆ ಚಿದಂಬರಂ ಹಾಗೂ ತಾಯಿ ನಳಿನಿ ಚಿದಂಬರಂರನ್ನು 10 ನಿಮಿಷಗಳ ಕಾಲ ಭೇಟಿ ಮಾಡಲು ಅವಕಾಶ ನೀಡಿದರು. 
ಈ ಹಿಂದೆ ಐದು ದಿನಗಳ ಕಾಲ ಸಿಬಿಐ ವಶದಲ್ಲಿದ್ದ ಕಾರ್ತಿ ಚಿದಂಬರಂ ಅವರನ್ನು ಈ ಹಿಂದೆ ಮುಂಬೈನ ಬೈಕುಲಾ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಗಿತ್ತು. ಬೈಕುಲ ಜೈಲಿನಲ್ಲಿರುವ ಇಂದ್ರಾಣಿ ಮುಖರ್ಜಿ ಹಾಗೂ ಪೀಟರ್ ಮುಖರ್ಜಿ ಅವರೊಂದಿಗೆ ವಿಚಾರಣೆ ನಡೆಸಲಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.