ಪ್ರೀತಿಸಿ ಮದುವೆಯಾಗಿದ್ದಕ್ಕೆ ದಂಪತಿಗೆ ಅಮಾನವೀಯ ಶಿಕ್ಷೆ ನೀಡಿದ ಬಿಹಾರ ಪಂಚಾಯ್ತಿ
ಪಂಚಾಯ್ತಿಯೊಂದು ಪ್ರೀತಿಸಿ ಮದುವೆಯಾಗಿದ್ದಕ್ಕೆ ದಂಪತಿಗೆ ಸಾರ್ವಜನಿಕವಾಗಿ ಶಿಕ್ಷೆ ನೀಡಿ ಅವಮಾನಿಸಿದ....

Published On :
ಪಾಟ್ನಾ: ಪಂಚಾಯ್ತಿಯೊಂದು ಪ್ರೀತಿಸಿ ಮದುವೆಯಾಗಿದ್ದಕ್ಕೆ ದಂಪತಿಗೆ ಸಾರ್ವಜನಿಕವಾಗಿ ಶಿಕ್ಷೆ ನೀಡಿ ಅವಮಾನಿಸಿದ ಆಘಾತಕಾರಿ ಘಟನೆ ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ನಡೆದಿದೆ.
ಪ್ರೀತಿಸಿ ಮದುವೆಯಾದ 22 ವರ್ಷದ ರಂಜೀತ್ ಕುಮಾರ್ 19 ವರ್ಷದ ಜೂಲಿ ಕುಮಾರಿ ಪಂಚಾಯ್ತಿ ಕಿವಿ ಹಿಡಿದು ಬಸ್ಕಿ ಹೊಡೆಸಿದ್ದಲ್ಲದೆ ಮೈದಾನದಲ್ಲಿ ಅವರದ್ದೇ ಉಗುಳು ನೆಕ್ಕುವಂತ ಅಮಾನವೀಯ ಶೀಕ್ಷೆ ನೀಡಲಾಗಿದೆ.
ಪ್ರೀತಿಸಿ ಮದುವೆಯಾಗುವುದು ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿದ್ದು, ಇದು ಅತ್ಯಂತ ಭ್ರಷ್ಟ ಸಂಪ್ರದಾಯ ಎಂದು ಪಂಚಾಯ್ತಿ ಹೇಳಿದೆ. ಅಲ್ಲದೆ ಪ್ರೀತಿಸಿ ಮದುವೆಯಾದ ಯುವ ಜೋಡಿಗೆ 11 ಸಾವಿರ ರುಪಾಯಿ ದಂಡ ವಿಧಿಸಿದೆ.
ಕಳೆದ ಮಾರ್ಚ್ 1ರಂದು ಮರವೂನಾ ಪೊಲೀಸ್ ಠಾಣಾ ವ್ಯಾಪ್ತಿಯ ಬರ್ಹಾರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದಂಪತಿಗೆ ಶಿಕ್ಷೆ ನೀಡುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ರಂಜೀತ್ ಮತ್ತು ಜೂಲಿ ಇಬ್ಬರು ಬರ್ಹಾರ ಗ್ರಾಮದ ನಿವಾಸಿಗಳಾಗಿದ್ದು, ಇಬ್ಬರ ಕುಟುಂಬದ ವಿರೋಧದ ನಡುವೆಯೂ ಕಳೆದ ಫೆಬ್ರವರಿ 16ರಂದು ಮದುವೆಯಾಗಿದ್ದರು. ಫೆಬ್ರವರಿ 26ರಂದು ಮದುವೆ ನೋಂದಣಿ ಮಾಡಿಸಿದ್ದರು.
ನಾವು ಇಬ್ಬರೂ ಬಹಳ ದಿನಗಳಿಂದ ಪ್ರೀತಿಸುತ್ತಿದ್ದು, ಮನೆಯಿಂದ ಓಡಿಹೋಗಿ ಮದುವೆಯಾಗಿದ್ದೇವೆ. ಮದುವೆಯಾದ ನಂತರ ನಮ್ಮ ಪೋಷಕರು ನಮ್ಮನ್ನು ಒಪ್ಪಿಕೊಂಡಿದ್ದಾರೆ. ಆದರೆ ಪಂಚಾಯ್ತಿ ಮಾತ್ರ ಶಿಕ್ಷೆ ವಿಧಿಸಿದೆ ಎಂದು ರಂಜೀತ್ ಹೇಳಿದ್ದಾರೆ.
ದಂಪತಿಯ ಕುಟುಂಬ ಈ ಕುರಿತು ಇನ್ನು ಪೊಲೀಸರಿಗೆ ದೂರು ನೀಡಿಲ್ಲ. ಆದರೆ ಸುಪೌಲ್ ಪೊಲೀಸ್ ಅಧೀಕ್ಷಕ ಘಟನೆಯ ಕುರಿತು ವರದಿ ಕೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


