ತಮಿಳುನಾಡಿಗೆ ನಾಯಕನ ಅಗತ್ಯವಿದೆ, ಆ ಕೊರತೆಯನ್ನು ನಾನು ತುಂಬುವೆ: ರಜನಿ
ರಾಜಕೀಯ ಪ್ರವೇಶಿಸುವುದಾಗಿ ಘೋಷಣೆ ಮಾಡಿದ ಬಳಿಕ ಮೊದಲ ಬಾರಿಗೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಸೂಪರ್ ಸ್ಟಾರ್ ರಜಿನಿಕಾಂತ್ ತಮಿಳುನಾಡಿಗೆ ನಾಯಕನ ಅಗತ್ಯವಿದ್ದು, ಆ ಕೊರತೆಯನ್ನು

Published On :
ಚೆನ್ನೈ: ರಾಜಕೀಯ ಪ್ರವೇಶಿಸುವುದಾಗಿ ಘೋಷಣೆ ಮಾಡಿದ ಬಳಿಕ ಮೊದಲ ಬಾರಿಗೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಸೂಪರ್ ಸ್ಟಾರ್ ರಜಿನಿಕಾಂತ್ ತಮಿಳುನಾಡಿಗೆ ನಾಯಕನ ಅಗತ್ಯವಿದ್ದು, ಆ ಕೊರತೆಯನ್ನು ನಾನು ತುಂಬುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಡಾ.ಎಂಜಿಆರ್ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ತಮಿಳುನಾಡಿನ ಮಾಜಿ ಸಿಎಂ ಎಂಜಿ ರಾಮಚಂದ್ರನ್ ಅವರ ಪುತ್ಥಳಿಯನ್ನು ಉದ್ಘಾಟಿಸಿದ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ರಜಿನಿಕಾಂತ್, ನಿಮ್ಮ ಮನಸ್ಸು ಶುದ್ಧವಾಗಿದ್ದರೆ ಮಾತ್ರ ನೀವು ಒಳ್ಳೆಯ ಜನರನ್ನು ಹುಡುಕುವುದಕ್ಕೆ ಸಾಧ್ಯವಾಗುತ್ತದೆ, ಸ್ನೇಹಿತರನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.
ಇದೇ ವೇಳೆ ತಮಿಳುನಾಡಿಗೆ ನಾಯಕತ್ವದ ಬಗ್ಗೆ ಮಾತನಾಡಿರುವ ಅವರು ಈಗ ಜಯಲಲಿತಾ ಇಲ್ಲ. ಕರುಣಾನಿಧಿಗೆ ಅನಾರೋಗ್ಯ ಕಾಡುತ್ತಿದೆ, ಆದ್ದರಿಂದ ರಾಜ್ಯಕ್ಕೆ ನಾಯಕನ ಅಗತ್ಯವಿದ್ದು, ಆ ಕೊರತೆಯನ್ನು ತುಂಬುವುದಾಗಿ ರಜನಿಕಾಂತ್ ಹೇಳಿದ್ದು, ರಾಜಕೀಯವನ್ನು ಅರ್ಥಮಾಡಿಕೊಳ್ಳಿ ಆದರೆ ಶಿಕ್ಷಣದತ್ತ ಹೆಚ್ಚು ಗಮನ ಹರಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ನಟ ಎಂಜಿಆರ್ ಬಗ್ಗೆಯೂ ಮಾತನಾಡಿರುವ ರಜನಿಕಾಂತ್, ತಮಿಳುನಾಡಿನ ರಾಜಕಾರಣದಲ್ಲಿ ಎಂಜಿಆರ್ ಗೆ ಸರಿಸಮನಾದ ನಾಯಕ ಬರುವುದಕ್ಕೆ ಆಗುವುದಿಲ್ಲ, "ಯಾರೂ ಸಹ ಮತ್ತೋರ್ವ ಎಂಜಿಆರ್ ಆಗಲಾರರು, ಮತ್ತೋರ್ವ ಎಂಜಿಆರ್ ಆಗುವುದರ ಬಗ್ಗೆ ಯೋಚನೆ ಮಾಡುವುದು ಮೂರ್ಖತನವಾಗುತ್ತದೆ ಎಂದು ರಜನಿಕಾಂತ್ ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


