ಬಿಜೆಪಿಯ ಸುವರ್ಣ ಯುಗ ಇನ್ನೂ ಆರಂಭವಾಗಿಲ್ಲ: ಅಮಿತ್ ಶಾ
ಬಿಜೆಪಿಯ ಸುವರ್ಣ ಯುಗ ಇನ್ನೂ ಬಂದಿಲ್ಲ. ಬರಬೇಕಾಗಿದೆ. ಕೇವಲ ಈಶಾನ್ಯ ರಾಜ್ಯಗಳ ಗೆಲುವಿನಿಂದ ....

Published On :
ನವದೆಹಲಿ: ಬಿಜೆಪಿಯ ಸುವರ್ಣ ಯುಗ ಇನ್ನೂ ಬಂದಿಲ್ಲ. ಬರಬೇಕಾಗಿದೆ. ಕೇವಲ ಈಶಾನ್ಯ ರಾಜ್ಯಗಳ ಗೆಲುವಿನಿಂದ ಸಂತೃಪ್ತರಾಗಬೇಡಿ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಸೋಮವಾರ ಪಕ್ಷದ ಮುಖಂಡರಿಗೆ ಕರೆ ನೀಡಿದ್ದಾರೆ.
ಪಶ್ಚಿಮ ಬಂಗಾಳ, ಕೇರಳ, ಒಡಿಶಾ ಮತ್ತು ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ನಂತರವೇ ಬಿಜೆಪಿಯ ಸುವರ್ಣ ಯುಗ ಆರಂಭವಾಗಲಿದೆ. ಹೀಗಾಗಿ ಪ್ರತಿ ಮತಗಟ್ಟೆಯಲ್ಲೂ ನಮ್ಮ ಕಾರ್ಯಕರ್ತರನ್ನು ಮತ್ತು ಪ್ರತಿ ಪಂಚಾಯ್ತಿಯಲ್ಲೂ ನಮ್ಮ ಪಕ್ಷ ಪ್ರತಿನಿಧಿಯನ್ನು ಸ್ಥಾಪಿಸುವ ಗುರಿ ಹೊಂದಿ ಎಂದು ನಾಯಕರಿಗೆ ಅಮಿತ್ ಶಾ ಸೂಚಿಸಿದ್ದಾರೆ.
ಕೆಲವು ಕಾರ್ಯಕರ್ತರು ಬಿಜೆಪಿಯ ಸುವರ್ಣ ಯುಗ ಆರಂಭವಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ನಾನು ಸ್ಪಷ್ಟಪಡಿಸುತ್ತಿದ್ದೇನೆ, ಬಿಜೆಪಿಯ ಸುವರ್ಣ ಯುಗ ಇನ್ನೂ ಆರಂಭವಾಗಿಲ್ಲ. ಏಕೆಂದರೆ ಪಶ್ಚಿಮ ಬಂಗಾಳ, ಕರ್ನಾಟಕ, ಕೇರಳ ಮತ್ತು ಒಡಿಶಾದಲ್ಲಿ ನಾವು ಅಧಿಕಾರದಲ್ಲಿಲ್ಲ ಎಂದು ಅಮಿತ್ ಶಾ ಅವರು ಕೇಂದ್ರ ಸಚಿವ ವಿಜಯ್ ಗೋಯಲ್ ಅವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ನಾವು ಅಧಿಕಾರದಲ್ಲಿಲ್ಲದ ಈ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರುವವರೆಗೆ ವಿಶ್ರಾಂತಿ ಪಡೆಯದಂತೆ ಪಕ್ಷದ ಕಾರ್ಯಕರ್ತರಿಗೆ ಬಿಜೆಪಿ ಅಧ್ಯಕ್ಷ ಕರೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


