ದೇಶ

ಮೇಘಾಲಯದಲ್ಲಿ 'ಅವಕಾಶವಾದಿ ಮೈತ್ರಿ' ಮಾಡಿಕೊಳ್ಳಲು ಬಿಜೆಪಿಯಿಂದ 'ಭಾರೀ ಹಣ' ಬಳಕೆ: ರಾಹುಲ್ ಗಾಂಧಿ

ಭಾರತೀಯ ಜನತಾ ಪಕ್ಷ ಪ್ರಜಾಪ್ರಭುತ್ವವನ್ನು ತನ್ನಲ್ಲಿನ ದೊಡ್ಡ ಮೊತ್ತದ ಹಣದಿಂದ ಖರೀದಿ ಮಾಡುತ್ತಿದೆ. ಅವಕಾಶವಾದಿ ಮೈತ್ರಿಯನ್ನು ಸಾಧಿಸಿಕೊಳ್ಳುವ ಸಲುವಾಗಿ ಬಿಜೆಪಿ ಭಾರೀ ಹಣವನ್ನು.......

ಮೇಘಾಲಯದಲ್ಲಿ 'ಅವಕಾಶವಾದಿ ಮೈತ್ರಿ' ಮಾಡಿಕೊಳ್ಳಲು ಬಿಜೆಪಿಯಿಂದ 'ಭಾರೀ ಹಣ' ಬಳಕೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Published On :
ನವದೆಹಲಿ: ಭಾರತೀಯ ಜನತಾ ಪಕ್ಷ ಪ್ರಜಾಪ್ರಭುತ್ವವನ್ನು ತನ್ನಲ್ಲಿನ ದೊಡ್ಡ ಮೊತ್ತದ ಹಣದಿಂದ  ಖರೀದಿ ಮಾಡುತ್ತಿದೆ. ಅವಕಾಶವಾದಿ ಮೈತ್ರಿಯನ್ನು ಸಾಧಿಸಿಕೊಳ್ಳುವ ಸಲುವಾಗಿ ಬಿಜೆಪಿ ಭಾರೀ ಹಣವನ್ನು ಬಳಸಿಕೊಂಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. 
ಮೇಘಾಲಯದಲ್ಲಿ ಈ ಅವಕಾಶವಾದಿ ಮೈತ್ರಿಯಿಂಡ ಬಲಾತ್ಕಾರವಾಗಿ ಬಿಜೆಪಿ ಅಧಿಕಾರಕ್ಕೇರುತ್ತಿದೆ. ಈ ಮೂಲಕ ಬಿಜೆಪಿ ಜನಾದೇಶಕ್ಕೆ ಬೆಲೆ ಕೊಡದೆ ಸರ್ಕಾರ ರಚನೆ ಮಾಡುತ್ತಿದೆ.ಎಂದು ರಾಹುಲ್ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.
ಕೇವಲ 2 ಸ್ಥಾನ ಗಳಿಸಿದ ಬಿಜೆಪಿ ಮೇಘಾಲಯದಲ್ಲಿ ಅಧಿಕಾರಕ್ಕೆ ಏರುತ್ತಿದೆ. ಈ ಹಿಂದೆ ಮಣಿಪುರ ಮತ್ತು ಗೋವಾದಲ್ಲಿ, ಜನಾದೇಶವನ್ನು ಸಂಪೂರ್ಣ ನಿರ್ಲಕ್ಷ ಮಾಡಿದ್ದ ಪಕ್ಷ ಇದೀಗ ಮೇಘಾಲಯದಲ್ಲಿ ಭಾರೀ ಹಣ 'ಬಳಸಿ ಅವಕಾಶವಾದಿ ಮೈತ್ರಿ ಸಾಧಿಸಿಕೊಂಡಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. 
ಇದೇ ವೇಳೆ ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತು ಟ್ವೀಟ್ ಮಾಡಿರುವ ರಾಹುಲ್ ಜನಾದೇಶವನ್ನು ಒಪ್ಪಿಕೊಂಡಿದ್ದಾಗಿ ಹೇಳಿದ್ದಾರೆ. ನಾವು ಸರ್ಕಾರ ರಚನೆಗೆ ವಿಫಲವಾಗಿದ್ದೇವೆ, ಈಶಾನ್ಯ ರಾಜ್ಯಗಳ ಜನಾದೇಶಕ್ಕೆ ಣಾವು ತಲೆಬಾಗುತ್ತೇವೆ. ಪ್ರದೇಶ ಮಟ್ಟದಲ್ಲಿ ಪಕ್ಷವನ್ನು ಬ;ಲಪಡಿಸಲು ಶ್ರಮಿಸುತ್ತೇವೆ ಕಳೆದುಕೊಂಡ ಜನರ ವಿಶ್ವಾಸವನ್ನು ಮರಳಿ ಗಳಿಸಲು ಪ್ರಯತ್ನಿಸುತ್ತೇವೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.