ದೇಶ

ಆನೆ ದಾಳಿಯಿಂದ ಕರ್ನಾಟಕ ಅರಣ್ಯಾಧಿಕಾರಿ ಸಾವು, ಪ್ರಧಾನಿ ಸಂತಾಪ

ಕರ್ನಾಟಕ ಅರಣ್ಯದಲ್ಲಿ ಆನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದ ಹಿರಿಯ ಅರಣ್ಯಾಧಿಕಾರಿ ಎಸ್ ಮಣಿಕಂಠನ್ (45) ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಆನೆ ದಾಳಿಯಿಂದ ಕರ್ನಾಟಕ ಅರಣ್ಯಾಧಿಕಾರಿ ಸಾವು, ಪ್ರಧಾನಿ ಸಂತಾಪ
ಆನೆ ದಾಳಿಯಿಂದ ಕರ್ನಾಟಕ ಅರಣ್ಯಾಧಿಕಾರಿ ಸಾವು, ಪ್ರಧಾನಿ ಸಂತಾಪ
Published On :
ನವದೆಹಲಿ: ಕರ್ನಾಟಕ ಅರಣ್ಯದಲ್ಲಿ ಆನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದ ಹಿರಿಯ ಅರಣ್ಯಾಧಿಕಾರಿ ಎಸ್ ಮಣಿಕಂಠನ್ (45) ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.
ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಣೆ ಸಂಬಂಧ ಅವರ ಶ್ರೀಮಂತ ಸೇವೆ ಹಾಗೂ ಉತ್ಸಾಹಕ್ಕಾಗಿ ಣಾವು ಅವರನ್ನು ಸ್ಮರಿಸಿಕೊಳ್ಳಬೇಕು ಎಂದು ಮೋದಿ ಟ್ವೀಟ್ಟರ್ ನಲ್ಲಿ ಹೇಳಿದ್ದಾರೆ.
’ನಾಗರಹೊಳೆ ಟೈಗರ್ ರಿಸರ್ವ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಆನೆ ದಾಳಿಯಿಂದ ಹತರಾದ ಅರಣ್ಯಾಧಿಕಾರಿ ಮಣಿಕಂಠನ್ ಅವರ ಕುಟುಂಬ, ಸ್ನೇಹಿತರು, ಸಹೋದ್ಯೋಗಿಗಳಿಗೆ ನನ್ನ ಬೆಂಬಲವಿದೆ. ವನ್ಯಜೀವಿ ಮತ್ತು ಅರಣ್ಯ ಸಂರಕ್ಷಣೆ ವಿಚಾರದಲ್ಲಿ ಅವರು ನೀಡಿದ್ದ ಅಮೂಲ್ಯ ಸೇವೆ, ತೋರಿದ ಉತ್ಸಾಹಕ್ಕಾಗಿ ದೇಶ ಅವರನ್ನು ಸ್ಮರಿಸಲಿದೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಅಗ್ನಿ ಅವಗಢ ಸಂಭವಿಸಿದ್ದರ ಬಗ್ಗೆ ತಪಾಸಣೆ ನಡೆಸುತ್ತಿದ್ದ ಹಿರಿಯ ಅರಣ್ಯಾಧಿಕಾರಿ  ಮಾ. 3ರಂದು ಆನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದರು. ಇವರು ನಾಗರಹೊಳೆಯಲ್ಲಿ ಟೈಗರ್ ರಿಸರ್ವ ವಿಭಾಗದ ನಿರ್ದೇಶಕರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.