ದೇಶ

ಪಂಜಾಬ್ : ಹೋಳಿ ಆಚರಣೆ ವೇಳೆ ಗದ್ದಲ ಪ್ರಶ್ನಿಸಿದ ಯುವಕನ ಕೊಲೆ

ಹೋಳಿ ಹಬ್ಬ ಸಂಭ್ರಮಾಚರಣೆ ವೇಳೆಯಲ್ಲಿನ ಗದ್ದಲ ಪ್ರಶ್ನಿಸಿದ್ದಕ್ಕೆ ಯುವಕನೋರ್ವ ಕೊಲೆಯಾಗಿರುವ ಘಟನೆ ಪಂಜಾಬ್ ನ ಫಾರಿದಾಕೋಟ್ ನಲ್ಲಿ ನಡೆದಿದೆ

ಪಂಜಾಬ್ : ಹೋಳಿ ಆಚರಣೆ ವೇಳೆ ಗದ್ದಲ ಪ್ರಶ್ನಿಸಿದ ಯುವಕನ ಕೊಲೆ
ಸಾಂದರ್ಭಿಕ ಚಿತ್ರ
Published On :

ಫಾರಿದಾಕೋಟ್ : ಹೋಳಿ ಹಬ್ಬ ಸಂಭ್ರಮಾಚರಣೆ ವೇಳೆಯಲ್ಲಿನ ಗದ್ದಲ ಪ್ರಶ್ನಿಸಿದ್ದಕ್ಕೆ ಯುವಕನೋರ್ವ ಕೊಲೆಯಾಗಿರುವ ಘಟನೆ ಪಂಜಾಬ್ ನ ಫಾರಿದಾಕೋಟ್ ನಲ್ಲಿ ನಡೆದಿದೆ.

ಮೃತ ಯುವಕನನ್ನು ರಾಕೇಶ್ ಎಂದು ಗುರುತಿಸಲಾಗಿದೆ.ಪಿರ್ ಖಾನ್ ಬಸ್ತಿ ಬಳಿ 12 ಮಂದಿ ಯುವಕರ ತಂಡವೊಂದು ಹೋಳಿ ಹಬ್ಬ ಆಚರಿಸುತಿತ್ತು. ಈ ವೇಳೆ ರಾಕೇಶ್ ಹಾಗೂ ಆ ಯುವಕರ ಮಧ್ಯೆ ಜಗಳ ನಡೆದಿದೆ

ಉದ್ರಿಕ್ತ ಗುಂಪು ಬೇಸ್ ಬಾಲ್ ಬ್ಯಾಟ್ ಹಾಗೂ ಕಟ್ಟಿಗೆಗಳಿಂದ ರಾಕೇಶ್  ಮೇಲೆ ಹಲ್ಲೆ ನಡೆಸಿ ಕೊಲೆ  ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಲೆಗೆ ತೀವ್ರ ತರದ ಪೆಟ್ಟು ಬಿದ್ದು ನರಳುತ್ತಿದ್ದ ರಾಕೇಶ್ ನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ  ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

 ಈ ಸಂಬಂಧ  ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.