ರಾಷ್ಟ್ರಪತಿ ಕೋವಿಂದ್ ದಂಪತಿ ಜೊತೆ ದುರ್ವರ್ತನೆ ತೋರಿಲ್ಲ: ಜಗನ್ನಾಥ ದೇವಾಲಯದ ಅರ್ಚಕ
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಅವರ ಪತ್ನಿ ಸವಿತಾ ಕೋವಿಂದ್ ಅವರಿಗೆ ಪುರಿಯ ಜಗನ್ನಾಥ ದೇವಾಲಯದಲ್ಲಿ ಯಾವುದೇ ರೀತಿಯ ದುರ್ವರ್ತನೆ ತೋರಿಲ್ಲ ...

Published On :
ಪುರಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಅವರ ಪತ್ನಿ ಸವಿತಾ ಕೋವಿಂದ್ ಅವರಿಗೆ ಪುರಿಯ ಜಗನ್ನಾಥ ದೇವಾಲಯದಲ್ಲಿ ಯಾವುದೇ ರೀತಿಯ ದುರ್ವರ್ತನೆ ತೋರಿಲ್ಲ ಎಂದು ದೇವಾಲಯದ ಅರ್ಚಕರು ತಿಳಿಸಿದ್ದಾರೆ.
ರಾಷ್ಟ್ರಪತಿ ದಂಪತಿ ಭೇಟಿ ನೀಡಿದಾಗ ಯಾರು ಅವರ ಜೊತೆ ದುರ್ವರ್ತನೆ ತೋರಿಲ್ಲ ಎಂದು ಅರ್ಚಕ ದಾಮೋದರ್ ಮಹಾಸೌರ್ ತಿಳಿಸಿದ್ದಾರೆ. ರಾಷ್ಟ್ರಪತಿ ದಂಪತಿ ದೇವಾಲಯಕ್ಕೆ ಭೇಟಿ ನೀಡಿದ್ದ ವೇಳೆ ಅಂದರೆ ಮಾರ್ಚ್ 22 ರಂದು ನಾನು ಕೂಡ ಜೊತೆಯಲ್ಲಿಯೇ ಇದ್ದೆ,. ಯಾರು ಅವರ ಜೊತೆ ಅನುಚಿತಕವಾಗಿ ವರ್ತಿಸಿಲ್ಲ ಎಂದು ಸ್ಪಷ್ಚ ಪಡಿಸಿದ್ದಾರೆ.
ಕೋವಿಂದ್ ದಂಪತಿ ಜೊತೆ ಅನುಚಿತವಾಗಿ ವರ್ತಿಸಿದ ಸಂಬಂಧ ಮೂರು ತಿಂಗಳ ನಂತರ ರಾಷ್ಚ್ರಪತಿ ಭವನದಿಂದ ಜಿಲ್ಲಾಡಳಿತಕ್ಕೆ ದೂರು ಬಂದಿತ್ತು. ಆದರೆ ಈ ಆರೋಪ ಆಧಾರ ರಹಿತ, ಹೀಗಾಗಿ ನಾವು ಪುರಿ ಜಿಲ್ಲಾ ಮ್ಯಾಜಿಸ್ಚ್ರೇಟ್ ಪ್ರದೀಪ್ ಜನ ವಿರುದ್ದ ಎಫ್ ಐ ಆರ್ ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Jagannath TempleRam Nath Kovindಜಗನ್ನಾಥ ದೇವಾಲಯmisbehavedದುರ್ವರ್ತನೆರಾಮನಾಥ್ ಕೋವಿಂದ್Damodar MahasuarSavitaದಾಮೋದರ್ ಮಹಾಸೌರ್ಸವಿತಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


