ಛತ್ತೀಸ್ ಗಢ; ನಕ್ಸಲರಿಗೆ ಗಾಯಾಳು, ಮೃತದೇಹ ಸಾಗಿಸುವ ತರಬೇತಿ: ವಿಡಿಯೋ ವೈರಲ್
ನಿಷೇಧಿತ ಸಿಪಿ-ಐ(ಮಾವೋವಾದಿ) ಪೊಲೀಸರೊಂದಿಗಿನ ಗುಂಡಿನ ದಾಳಿಯ ವೇಳೆ ಗಾಯಗೊಂಡ ಮತ್ತು ಮೃತಪಟ್ಟ....

Published On :
ರಾಯಪುರ್: ನಿಷೇಧಿತ ಸಿಪಿ-ಐ(ಮಾವೋವಾದಿ) ಪೊಲೀಸರೊಂದಿಗಿನ ಗುಂಡಿನ ದಾಳಿಯ ವೇಳೆ ಗಾಯಗೊಂಡ ಮತ್ತು ಮೃತಪಟ್ಟ ಕಾಮ್ರೆಡ್ ಗಳನ್ನು ಸಾಗಿಸುವ ಕುರಿತು ಯುವ ನಕ್ಸಲರಿಗೆ ತರಬೇತಿ ನೀಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.
ವಿಡಿಯೋದಲ್ಲಿ ಆಲಿವ್ ಹಸಿರು ಬಣ್ಣದ ಸಮವಸ್ತ್ರ ಧರಿಸಿರುವ ಯುವಕರಿಗೆ ನಕ್ಸಲರು ತರಬೇತಿ ನೀಡುತ್ತಿರುವುದು ದಾಖಲಾಗಿದೆ. ಎನ್ ಕೌಂಟರ್ ವೇಳೆ ಗಾಯಗೊಂಡ ಅಥವಾ ಮೃತ ನಕ್ಸಲರನ್ನು ಸ್ಥಳದಿಂದ ಹೇಗೆ ಸಾಗಿಸಬೇಕು ಎಂಬುದರ ಕುರಿತು ಯುವ ಕಾಮ್ರೆಡ್ ಗಳಿಗೆ ಮಾಹಿತಿ ನೀಡಲಾಗಿದೆ.
ನಕ್ಸಲರು ತರಬೇತಿ ನೀಡುತ್ತಿರುವ ಸ್ಥಳದ ಬಗ್ಗೆ ವಿಡಿಯೋದಲ್ಲಿ ಯಾವುದೇ ಮಾಹಿತಿ ಇಲ್ಲ. ಆದರೆ ದಕ್ಷಿಣ ಛತ್ತೀಸ್ ಗಢದ ಬಸ್ತಾರ್ ನ ದಟ್ಟ ಅರಣ್ಯದ ಮಧ್ಯ ಈ ತರಬೇತಿ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


