ದೇಶ

ಸುಷ್ಮಾ ಸ್ವರಾಜ್ ಕನಸಿನ ಪಾಸ್ಪೋರ್ಟ್ ಸೇವಾ ಮೊಬೈಲ್ ಆಪ್ ಗೆ ಭಾರಿ ಜನ ಬೆಂಬಲ: 2 ದಿನಗಳಲ್ಲಿ 1 ಮಿಲಿಯನ್ ಡೌನ್ಲೋಡ್

ವಿದೇಶಾಂಗ ಇಲಾಖೆಯ ಸಚಿವೆ ಸುಷ್ಮಾ ಸ್ವರಾಜ್ ಕನಸಿನ ಪಾಸ್ಪೋರ್ಟ್ ಸೇವಾ ಮೊಬೈಲ್ ಆಪ್ ಗೆ ಭಾರಿ ಜನಬೆಂಬಲ ವ್ಯಕ್ತವಾಗಿದ್ದು ಕೇವಲ 2 ದಿನಗಳಲ್ಲಿ 1 ಮಿಲಿಯನ್ ಜನರು ಡೌನ್ಲೋಡ್ ಮಾಡಿದ್ದಾರೆ.

ಸುಷ್ಮಾ ಸ್ವರಾಜ್ ಕನಸಿನ ಪಾಸ್ಪೋರ್ಟ್ ಸೇವಾ ಮೊಬೈಲ್ ಆಪ್ ಗೆ ಭಾರಿ ಜನ ಬೆಂಬಲ: 2 ದಿನಗಳಲ್ಲಿ 1 ಮಿಲಿಯನ್ ಡೌನ್ಲೋಡ್
ಸುಷ್ಮಾ ಸ್ವರಾಜ್
Published On :
ನವದೆಹಲಿ: ವಿದೇಶಾಂಗ ಇಲಾಖೆಯ ಸಚಿವೆ ಸುಷ್ಮಾ ಸ್ವರಾಜ್ ಕನಸಿನ ಪಾಸ್ಪೋರ್ಟ್ ಸೇವಾ ಮೊಬೈಲ್ ಆಪ್ ಗೆ ಭಾರಿ ಜನಬೆಂಬಲ ವ್ಯಕ್ತವಾಗಿದ್ದು ಕೇವಲ 2 ದಿನಗಳಲ್ಲಿ 1 ಮಿಲಿಯನ್ ಜನರು ಡೌನ್ಲೋಡ್ ಮಾಡಿದ್ದಾರೆ. 
ಈ ಅಂಶವನ್ನು ಸ್ವತಃ ಸುಷ್ಮಾ ಸ್ವರಾಜ್ ಟ್ವಿಟರ್ ನಲ್ಲಿ ಬಹಿರಂಗಪಡಿಸಿದ್ದಾರೆ.  ದೇಶದ ಯಾವುದೇ ಮೂಲೆಯಿಂದಲೂ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಲು ನೆರವಾಗುವುದಕ್ಕೆ ಈ ಆಪ್ ನ್ನು ತಯಾರಿಸಲಾಗಿತ್ತು. ಜೂ.27 ರಂದು 6 ನೇ ಪಾಸ್ಪೋರ್ಟ್ ಸೇವಾ ದಿವಸ್ ಕಾರ್ಯಕ್ರಮದ ಅಂಗವಾಗಿ ಈ ಆಪ್ ನ್ನು ಲೋಕಾರ್ಪಣೆಗೊಳಿಸಲಾಗಿತ್ತು. 
ಆಂಡ್ರಾಯ್ಡ್ ಹಾಗೂ ಐಒಎಸ್ ಗಳಲ್ಲಿ ಆಪ್ ಲಭ್ಯವಿದ್ದು, ಪಾಸ್ಪೋರ್ಟ್ ಗಾಗಿ ಅರ್ಜಿ ಸಲ್ಲಿಸುವುದು, ಹಣ ಪಾವತಿಸುವುದು ಹಾಗೂ ಪಾಸ್ಪೋರ್ಟ್ ಪಡೆಯಲು ಸಮಯ ನಿಗದಿಪಡಿಸುವುದಕ್ಕೂ ಆಪ್ ಮೂಲಕವೇ ಮಾಡಬಹುದಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.