'ಭಾರತೀಯ ಸೇನೆಯ ಮಾನವೀಯತೆ ಬಗ್ಗೆ ಇಡೀ ದೇಶಕ್ಕೇ ಗೊತ್ತು, ವಿಶ್ವಸಂಸ್ಥೆ ವರದಿಗೆ ಪ್ರಾಮುಖ್ಯತೆ ಬೇಕಿಲ್ಲ'
ಭಾರತೀಯ ಸೇನೆಯ ಮಾನವೀಯತೆ ಬಗ್ಗೆ ಇಡೀ ದೇಶಕ್ಕೇ ತಿಳಿದಿದ್ದು, ವಿಶ್ವಸಂಸ್ಥೆ ವರದಿಗೆ ಪ್ರಾಮುಖ್ಯತೆ ನೀಡುವ ಅವಶ್ಯಕತೆ ಇಲ್ಲ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

Published On :
ನವದೆಹಲಿ: ಭಾರತೀಯ ಸೇನೆಯ ಮಾನವೀಯತೆ ಬಗ್ಗೆ ಇಡೀ ದೇಶಕ್ಕೇ ತಿಳಿದಿದ್ದು, ವಿಶ್ವಸಂಸ್ಥೆ ವರದಿಗೆ ಪ್ರಾಮುಖ್ಯತೆ ನೀಡುವ ಅವಶ್ಯಕತೆ ಇಲ್ಲ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ಮಾಡುತ್ತಿದ್ದ ಆರೋಪಗಳಿಗೆ ಸಂಬಂಧಿಸಿದಂತೆ ವರದಿ ನೀಡಿದ್ದ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದ ವರದಿ ಪ್ರೇರೇಪಿತ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಅಂತೆಯೇ ಇಂತಹ ಪ್ರೇರೇಪಿತ ವರದಿಗಳಿಗೆ ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ. ಅಂತೆಯೇ ಇದಕ್ಕೆ ತಮ್ಮ ಪ್ರತಿಕ್ರಿಯೆ ಅನಗತ್ಯ ಎಂದು ಹೇಳಿದ್ದಾರೆ.
'ವಿಶ್ವಸಂಸ್ಥೆಯ ಮಾನವಹಕ್ಕು ಆಯೋಗದ ವರದಿ ಪ್ರೇರೇಪಿತವಾಗಿದ್ದು, ಪಾಕಿಸ್ತಾನದ ಆರೋಪಗಳ ಮೇರೆಗೆ ವರದಿ ತಯಾರಿಸಲಾಗಿದೆ. ಅದರೆ ವಸ್ತುಸ್ಥಿತಿ ಬೇರೆಯದ್ದಾಗಿದ್ದು, ಭಾರತೀಯ ಸೇನೆಯ ಮಾನವೀಯತೆ ಬಗ್ಗೆ ಇಡೀ ದೇಶಕ್ಕೇ ತಿಳಿದಿದೆ. ಹೀಗಾಗಿ ಇಂತಹ ಪ್ರೇರೇಪಿತ ಮತ್ತು ಅನಗತ್ಯ ವರದಿಗಳಿಗೆ ಪ್ರಾಮುಖ್ಯತೆ ನೀಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಇಲಾಖೆ ಕೂಡ ವಿಶ್ವಸಂಸ್ಥೆಯ ವಿರುದ್ಧ ತನ್ನ ಅಸಮಾಧಾನ ವ್ಯಕ್ತಪಡಿಸಿತ್ತು. ವರದಿಯಲ್ಲಿನ ಅಂಶಗಳು ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘನೆ ಮಾಡುತ್ತದೆ. ಇಂತಹ ವರದಿಗಳು ಕುಚೇಷ್ಟೆಯ ಮತ್ತು ತಪ್ಪುದಾರಿಗೆಳೆಯುವ ಪ್ರಯತ್ನವಾಗಿದೆ ಎಂದು ಪರೋಕ್ಷವಾಗಿ ಪಾಕ್ ವಿರುದ್ಧ ಕಿಡಿಕಾರಿತ್ತು. ಅಲ್ಲದೆ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಪಾಕಿಸ್ತಾನ ಕಾಶ್ಮೀರದ ಕೆಲಭಾಗಗಳನ್ನು ತನ್ನ ಆಕ್ರಮಣಕಾರಿ ಮನೋಭಾವದಿಂದಾಗಿ ಆಕ್ರಮಿಸಿದೆ. ನಾವು ದಶಕಗಳಿಂದಲೂ ಆಕ್ರಮಿತ ಪ್ರದೇಶಗಳನ್ನು ತೆರವುಗೊಳಿಸುವಂತೆ ಪಾಕ್ ಮನವಿ ಮಾಡುತ್ತಿದ್ದು, ಇಂತಹ ಹೊತ್ತಿನಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗ ಪ್ರೇರೇಪಿತ ವರದಿ ತಪ್ಪುದಾರಿಗೆಳೆಯು ಪ್ರಯತ್ನವಾಗಿದೆ ಎಂದು ಭಾರತ ತನ್ನ ಆಕ್ರೋಶ ವ್ಯಕ್ತಪಡಿಸಿತ್ತು.
ಇನ್ನು ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಆರೋಪಗಳ ಅಧಾರದ ಮೇರೆಗೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದ ಆಯುಕ್ತ ಝೈದ್ ರಾದ್ ಅಲ್ ಹುಸೈನ್ ವರದಿ ನೀಡಿದ್ದರು. ಸುಮಾರು 42 ಪುಟಗಳ ಈ ವರದಿಗೆ ವಿಶ್ವಸಂಸ್ಥೆಯ ಯಾವುದೇ ಸದಸ್ಯ ರಾಷ್ಟ್ರವೂ ಬೆಂಬಲ ನೀಡದೇ ಪಾಕಿಸ್ತಾನ ತೀವ್ರ ಮುಖಭಂಗ ಅನುಭವಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew DelhiindiaಭಾರತPakistanಪಾಕಿಸ್ತಾನKashmir issueವಿಶ್ವಸಂಸ್ಥೆUNಕಾಶ್ಮೀರ ವಿಚಾರBipin Rawatಬಿಪಿನ್ ರಾವತ್Zeid Raad Al Husseinಝೀದ್ ರಾದ್ ಅಲ್ ಹುಸೇನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


