ಜಮ್ಮು-ಕಾಶ್ಮೀರ: ನಾಪತ್ತೆಯಾಗಿರುವ ಪೊಲೀಸ್ ಅಧಿಕಾರಿ ಉಗ್ರ ಸಂಘಟನೆಗೆ ಸೇರ್ಪಡೆ; ಹಿಜ್ಬುಲ್
ಎಕೆ 47 ಬಂದೂಕು ಸಮೇತ ನಾಪತ್ತೆಯಾಗಿದ್ದ ಜಮ್ಮು ಮತ್ತು ಕಾಶ್ಮೀರದ ವಿಶೇಷ ಪೊಲೀಸ್ ಅಧಿಕಾರಿ ಪಾಕಿಸ್ತಾನ ಬೆಂಬಲಿತ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರ್ಪಡೆಗೊಂಡಿದ್ದಾನೆಂದು...

Published On :
ಶ್ರೀನಗರ; ಎಕೆ 47 ಬಂದೂಕು ಸಮೇತ ನಾಪತ್ತೆಯಾಗಿದ್ದ ಜಮ್ಮು ಮತ್ತು ಕಾಶ್ಮೀರದ ವಿಶೇಷ ಪೊಲೀಸ್ ಅಧಿಕಾರಿ ಪಾಕಿಸ್ತಾನ ಬೆಂಬಲಿತ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರ್ಪಡೆಗೊಂಡಿದ್ದಾನೆಂದು ಉಗ್ರ ಸಂಘಟನೆಗಳು ಬುಧವಾರ ಹೇಳಿಕೊಂಡಿವೆ.
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ವಕ್ತಾರ ಬುರ್ಹಾನ್-ಉ-ದಿನ್ ಈ ಕುರಿತು ಸ್ಥಳೀಯ ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿಕೆ ನೀಡಿದ್ದು, ನಾಪತ್ತೆಯಾಗಿರುವ ಪೊಲೀಸ್ ಅಧಿಕಾರಿ ಇರ್ಫಾನ್ ಅಹಮದ್ ದಾರ್ ಅವರು ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿದ್ದಾನೆಂದು ಹೇಳಿದ್ದಾನೆ.
ವಿಶೇಷ ಪೊಲೀಸ್ ಅಧಿಕಾರಿಯಾಗಿದ್ದ ಇರ್ಫಾನ್ ಅಹಮದ್ ದಾರ್ ಪುಲ್ವಾಮ ಜಿಲ್ಲೆಯ ನೆಹಾಮಾ ಕಕಪೊರ ನಿವಾಸಿಯಾಗಿದ್ದರು. ಪುಲ್ವಾಮ ಪಾಂಪೋರಾದಲ್ಲಿ ಮಂಗಳವಾರ ಎಕೆ 47 ಜೊತೆಗೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು.
ಉಗ್ರರ ವಿರುದ್ಧದ ಹೋರಾಟಕ್ಕೆ ಅಹಮದ್ ದಾರ್ ಅವರನ್ನು ತಿಂಗಳುಗಳ ಪ್ಯಾಕೇಜ್ ಆಧಾರದ ಮೇಲೆ ವಿಶೇಷ ಪೊಲೀಸ್ ಅಧಿಕಾರಿಯಾಗಿ ನೇಮಕ ಮಾಡಲಾಗಿತ್ತು ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಜಮ್ಮು ಮತ್ತು ಕಾಶ್ಮೀರJammu and Kashmirಉಗ್ರ ಸಂಘಟನೆHizbul Mujahideenಹಿಜ್ಬುಲ್ ಮುಜಾಹಿದ್ದೀನ್Special Police Officerವಿಶೇಷ ಪೊಲೀಸ್ ಅಧಿಕಾರಿTerrorists group
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


