ರಾಷ್ಟ್ರಪತಿ ದಂಪತಿಗಳ ಸಮ್ಮುಖದಲ್ಲಿ ಸೇವಕರ 'ದುರ್ವರ್ತನೆ' ಪುರಿ ಜಗನ್ನಾಥ ದೇವಸ್ಥಾನಕ್ಕೆ 'ಸುಪ್ರೀಂ' ತರಾಟೆ
ಪುರಿ ಜಗನ್ನಾಥ ದೇವಾಲಯಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಅವರ ಪತ್ನಿ ಸವಿತಾ ಕೋವಿಂದ್ ಅವರ ಸಮ್ಮುಖದಲ್ಲಿ ಸೇವಕರ ದುರ್ವತನೆ ...

Published On :
ಭುವನೇಶ್ವರ್: ಪುರಿ ಜಗನ್ನಾಥ ದೇವಾಲಯಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಅವರ ಪತ್ನಿ ಸವಿತಾ ಕೋವಿಂದ್ ಅವರ ಸಮ್ಮುಖದಲ್ಲಿ ಸೇವಕರ ದುರ್ವತನೆ ಸಂಬಂಧ ಸುಪ್ರೀಂ ಕೋರ್ಟ್ ದೇವಾಸ್ಥಾನದ ಆಡಳಿತ ಮಂಡಳಿಯನ್ನ ತರಾಟೆಗೆ ತೆಗೆದು ಕೊಂಡಿದೆ.
ಮಾರ್ಚ್ 18 ರಂದು ರಾಷ್ಟ್ರಪತಿ ದಂಪತಿ ಪುರಿಯ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಂದು ದೇವಾಸ್ಥಾನದ ಸಿಬ್ಬಂದಿ ದುರ್ವರ್ತನೆ ತೋರಿದ ಸಂಬಂಧ ರಾಷ್ಟ್ರಪತಿ ಭವನ ಪುರಿ ಜಗನ್ನಾಥ ದೇವಾಲಯ ಆಡಳಿತ ಮಂಡಳಿ ವಿರುದ್ದ ಅಸಮಾಧಾನ ವ್ಯಕ್ತ ಪಡಿಸಿತ್ತು. ದೇಶದ ಮೊದಲ ಮಹಿಳೆ ಜೊತೆ ತೋರಿದ ದುರ್ವರ್ತನೆಯನ್ನು ಖಂಡಿಸಿತ್ತು.
ಈ ಸಂಬಂಧ ಜಗನ್ನಾಥ ದೇವಾಲಯ ಆಡಳಿತ ಮಂಡಳಿ ತನಿಖೆಗೆ ಆದೇಶಿಸಿತ್ತು. ಇತ್ತೀಚೆಗೆ ಆಡಳಿತ ಮಂಡಳಿ ಸಭೆ ಸೇರಿದಾಗ ಅದರ ಬಗ್ಗೆ ಚರ್ಚಿಸಲಾಗಿತ್ತು.
ಅನೇಕ ಸಂಖ್ಯೆಯಲ್ಲಿ ಗಣ್ಯರು ದೇವಾಲಯಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ದೇವರ ದರ್ಶನ ಸರಿಯಾಗಿ ಆಗುತ್ತಿರಲಿಲ್ಲ, ರಾಷ್ಟ್ರಪತಿ ಮತ್ತು ಅವರ ಪತ್ನಿ ದೇವಾಲಯದ ರತ್ನ ಸಿಂಹಾಸನ ಬಳಿ ಆಗಮಿಸಿದಾಗ ಕೆಲವು ಸೇವಕರು ಅಲ್ಲಿ ಅವರಿಗೆ ಸರಿಯಾದ ಜಾಗ ಕೊಡಲಿಲ್ಲ, ಈ ವೇಳೆ ರಾಷ್ಟ್ರಪತಿ ಮತ್ತು ಅವರ ಪತ್ನಿಯನ್ನು ತಳ್ಳಿದ್ದಾರೆ ಎಂದು ಹೇಳಿದ್ದಾರೆ,
ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಸೇವಕರ ವಿರುದ್ಧ ತನಿಖೆಗೆ ಆದೇಶಿಸಿರುವ ದೇವಾಲಯ ಆಡಳಿತ ಮಂಡಳಿ ಅವರಿಗೆ ಶೋಕಾಸ್ ನೋಟೀಸ್ ಜಾರಿ ಮಾಡಬಹುದು, ದೇವಾಲಯ ಆಡಳಿತ ಮಂಡಳಿ ಮುಖ್ಯ ಆಜಡಳಿತಾಧಿಕಾರಿ ಪ್ರದೀಪ್ತಾ ಮಹಾಪತ್ರ, ಇದು ಶಿಷ್ಟಾಚಾರ ಉಲ್ಲಂಘನೆಯಾಗಿದೆ, ಜಿಲ್ಲಾಧಿಕಾರಿ ಮತ್ತು ಎಸ್ ಪಿ ಜಂಟಿ ತನಿಖೆ ನಡೆಸಿ ವರದಿ ಸಲ್ಲಿಸುತ್ತಾರೆ ಎಂದು ಹೇಳಿದ್ದಾರೆ.
ರಾಷ್ಟ್ರಪತಿ ಮತ್ತು ಅವರ ಪತ್ನಿ ಜೊತೆ ಯಾರು ದುರ್ವರ್ತನೆ ತೋರಿಲ್ಲ, ರಾಷ್ಟ್ರಪತಿ ದಂಪತಿ ದೇವಾಲಯಕ್ಕೆ ಬಂದ ಸಮಯದಲ್ಲಿ ಬೇರೆ ಭಕ್ತಾದಿಗಳು ಆಗಮಿಸುತ್ತಿದ್ದರು. ಅವರನ್ನು ಬರದಂತೆ ತಡೆಯಲು ಒಬ್ಬ ಸೇವಕ ರಾಷ್ಟ್ರಪತಿಗಳ ತೀರಾ ಸಮೀಪಕ್ಕ ಬಂದಿದ್ದಾರೆ ಎಂದು ಸ್ಪಷ್ಟ ಪಡಿಸಿದ್ದಾರೆ .
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಪುರಿ ಜಗನ್ನಾಥ ದೇವಾಲಯPuri Jagannath templeದುರ್ವರ್ತನೆರಾಮನಾಥ್ ಕೋವಿಂದ್Ram Nath KovindSavitha kovind‘misbehavedಸವಿತಾ ಕೋವಿಂದ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


