ಪತ್ನಿಯನ್ನು ಕೊಂದು ಸಹೋದರರ ಜೊತೆ ಸೇರಿ ದೇಹವನ್ನು ತುಂಡು ತುಂಡು ಮಾಡಿದ ಪತಿರಾಯ!
ತುಂಡು ತುಂಡಾಗಿ ಕತ್ತರಿಸ್ಪಟ್ಟಿದ್ದ ಮಹಿಳೆಯ ಮೃತದೇಹ ಒಂದು ವಾರದ ನಂತರ ದೆಹಲಿಲಯ ಓಕ್ಲಾ ಟ್ಯಾಂಕ್ ಬಳಿ ಪತ್ತೆಯಾಗಿದ್ದು ಈ ಸಂಬಂಧ ಪತಿ ಹಾಗೂ ಆತನ ಇಬ್ಬರು ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ...

Published On :
ನವದೆಹಲಿ: ತುಂಡು ತುಂಡಾಗಿ ಕತ್ತರಿಸ್ಪಟ್ಟಿದ್ದ ಮಹಿಳೆಯ ಮೃತದೇಹ ಒಂದು ವಾರದ ನಂತರ ದೆಹಲಿಲಯ ಓಕ್ಲಾ ಟ್ಯಾಂಕ್ ಬಳಿ ಪತ್ತೆಯಾಗಿದ್ದು ಈ ಸಂಬಂಧ ಪತಿ ಹಾಗೂ ಆತನ ಇಬ್ಬರು ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ.
ನಿರುದ್ಯೋಗಿಯಾಗಿದ್ದ 26 ವರ್ಷದ ಸಾಜೀದ್ ಅಲಿ ಅನ್ವರ್ 26 ವರ್ಷದ ಜುಹಿ ಜತೆ ವಿವಾಹವಾಗಿದ್ದ. ಗಂಡ ಹೆಂಡತಿ ನಡುವೆ ಜಗಳ ಸಾಮಾನ್ಯವಾಗಿತ್ತು. ಆದರೆ ಕಳೆದ ವಾರ ಜಗಳ ವಿಕೋಪಕ್ಕೆ ತಿರುಗಿದ್ದು ಚಾಕುವಿನಿಂದ ಪತ್ನಿಯ ಕತ್ತು ಸೀಳಿದ ನಂತರ ಸಾಜೀದ್ ತನ್ನ ಸಹೋದರರಾದ ಇಶತಿಯಕ್ ಹಾಗೂ ಹಸ್ಮತ್ ಜತೆ ಸೇರಿ ದೇಹವನ್ನು 7 ತುಂಡುಗಳಾಗಿ ಕತ್ತರಿಸಿದ್ದಾನೆ.
ಬಿಹಾರ ಮೂಲದ ಮೃತ ಮಹಿಳೆ ಜುಹಿ ಓದುತ್ತಿದ್ದಾಗ ಅನ್ಸಾರಿಯನ್ನು ಪ್ರೀತಿಸಿದ್ದು ಪೋಷಕರ ವಿರೋಧದ ನಡುವೆಯೂ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಮೃತ ಮಹಿಳೆಯ ಅಂಗಾಂಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಲೆಯಾಗಿ ವಾರವಾಗಿದ್ದರಿಂದ ಮಹಿಳೆಯ ಮುಖ ಸಂಪೂರ್ಣವಾಗಿ ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿತ್ತು. ಈ ಪ್ರಕರಣ ಪೊಲೀಸರಿಗೆ ಒಂದು ಚಾಲೆಂಜ್ ಆಗಿತ್ತು. ಮೊದಲಿಗೆ ಮಹಿಳೆಯ ಅಂಗಾಂಗಗಳು ಹಾಗೂ ಆಕೆ ಧರಿಸಿದ್ದ ವಸ್ತ್ರಗಳನ್ನು ಸಂಗ್ರಹಿಸಿ ತನಿಖೆ ಆರಂಭಿಸಿದಾಗ ಆರೋಪಿಗಳ ಗುರುತು ಪತ್ತೆಯಾಗಿದೆ ಎಂದು ವಿಶೇಷ ಪೊಲೀಸ್ ಆಯುಕ್ತ ಆರ್ ಪಿ ಉಪಾಧ್ಯಾಯ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


