ದೇಶ

ಸರ್ದಾರ್ ಪಟೇಲ್ ಕಾಶ್ಮೀರವನ್ನು ಪಾಕ್'ಗೆ ನೀಡಲು ಮುಂದಾಗಿದ್ದರು: ಕಾಂಗ್ರೆಸ್ ನಾಯಕ ಸೈಫುದ್ದೀನ್ ಸೊಜ್

ಭಾರತದ ಸ್ವಾತಂತ್ರ್ಯ ಹೋರಾಟದ ನಾಯಕರಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲರು ಹೈದರಾಬಾದ್ ಬದಲಿಗೆ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಲು ಮುಂದಾಗಿದ್ದರು ಎಂದು ಕಾಂಗ್ರೆಸ್ ಹಿರಿಯ ನಾಯಕ ಸೈಫುದ್ದೀನ್ ಸೊಜ್ ಅವರು...

ಸರ್ದಾರ್ ಪಟೇಲ್ ಕಾಶ್ಮೀರವನ್ನು ಪಾಕ್'ಗೆ ನೀಡಲು ಮುಂದಾಗಿದ್ದರು: ಕಾಂಗ್ರೆಸ್ ನಾಯಕ ಸೈಫುದ್ದೀನ್ ಸೊಜ್
ಕಾಂಗ್ರೆಸ್ ಹಿರಿಯ ನಾಯಕ ಸೈಫುದ್ದೀನ್ ಸೊಜ್
Published On :
ನವದೆಹಲಿ: ಭಾರತದ ಸ್ವಾತಂತ್ರ್ಯ ಹೋರಾಟದ ನಾಯಕರಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲರು ಹೈದರಾಬಾದ್ ಬದಲಿಗೆ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಲು ಮುಂದಾಗಿದ್ದರು ಎಂದು ಕಾಂಗ್ರೆಸ್ ಹಿರಿಯ ನಾಯಕ ಸೈಫುದ್ದೀನ್ ಸೊಜ್ ಅವರು ಹೇಳಿದ್ದಾರೆ. 
ಕಾಶ್ಮೀರ ಗ್ಲಿಂಪ್ಸಸ್ ಆಫ್ ಹಿಸ್ಟರಿ ಹಾಗೂ ಸ್ಟೋರಿ ಆಫ್ ಸ್ಟ್ರಗಲ್ ಎಂಬ ಪುಸ್ತಕವನ್ನು ಸೈಫುದ್ದೀನ್ ಸೊಜಿಯವರು ಬರೆದಿದ್ದು, ಇಂದು ಪುಸ್ತಕ ಬಿಡುಗಡೆ ಸಮಾರಂಭ ನಡೆದಿದೆ. ಸಮಾರಂಭದಲ್ಲಿ ಮಾತನಾಡಿರುವ ಅವರು, ಸರ್ದಾರ್ ಪಟೇಲರು ವಾಸ್ತವಿಕವಾದಿಯಾಗಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದ ನಾಯಕರಾಗಿದ್ದ ಪಟೇಲರು ಅಂದಿನ ಪಾಕಿಸ್ತಾನ ಪ್ರಧಾನಮಂತ್ರಿ ಲಿಖತ್ ಅಲಿ ಖಾನ್ ಅವರಿಗೆ, ಹೈದರಾಬಾದ್ ಬದಲಿಗೆ ಕಾಶ್ಮೀರ ನೀಡುವುದಾಗಿ ತಿಳಿಸಿದ್ದರು ಎಂದು ಹೇಳಿದ್ದಾರೆ. 
ಲಿಖಿತ್ ಖಾನ್ ಯುದ್ಧಕ್ಕೆ ಸಿದ್ಧರಾಗುತ್ತಿದ್ದ ಸಂದರ್ಭದಲ್ಲಿ ಸರ್ದಾರ್ ಪಟೇಲರು ಯುದ್ಧವನ್ನು ಬಯಸಿರಲಿಲ್ಲ. ಯುದ್ಧ ಬಯಸದ ಪಟೇಲರು ಕಾಶ್ಮೀರವನ್ನು ತೆಗೆದುಕೊಳ್ಳಿ, ಹೈದಾಬಾದ್ ಬಗ್ಗೆ ಮಾತನಾಡಿ ಎಂದು ಲಿಖತ್ ಅಲಿ ಖಾನ್ ಅವರಿಗೆ ತಿಳಿಸಿದ್ದರು ಎಂದು ಸೊಜಿ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಸೈಫುದ್ದೀನ್ ಸೊಜಿ ಮುಷರಫ್ ಹೇಳಿಕೆಗೆ ಬೆಂಬಲ ನೀಡಿದ್ದರು. "ಪರ್ವೇಜ್ ಮುಷರಫ್ ಕಾಶ್ಮೀರ ವಿಷಯದಲ್ಲಿ ಸರಿಯಾಗಿ ಹೇಳಿದ್ದರು. ಕಾಶ್ಮೀರಿಗಳಿಗೆ ಅವಕಾಶ ನೀಡಿದರೆ ಅವರು ಸ್ವತಂತ್ರರಾಗಿರುವುದಕ್ಕೆ ಬಯಸುತ್ತಾರೆ ಎಂದು ಮುಷರಫ್ ಹೇಳಿದ್ದು ಸರಿಯಾಗಿತ್ತು ಎಂದು ಹೇಳಿದ್ದರು. ಈ ಹೇಳಿಕೆ ಭಾರಿ ವಿರೋಧ ಹಾಗೂ ಟೀಕೆಗಳಿಗೆ ಗುರಿಯಾಗಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.