ಬುಖಾರಿ ಹತ್ಯೆ: ವಿವರಣೆ ಕೋರಿ ಜಮ್ಮು ಕಾಶ್ಮೀರ ಸರ್ಕಾರಕ್ಕೆ ಎನ್ಎಚ್ಆರ್ಸಿ ನೋಟೀಸ್
ಶುಜಾತ್ ಬುಖಾರಿ ಹತ್ಯೆ ಸಂಬಂಧ ವಿವರವಾದ ವರದಿ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಜಮ್ಮು ಕಾಶ್ಮೀರದ ಪ್ರಧಾನ ಕಾರ್ಯದರ್ಶಿ ಮತ್ತು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕರಿಗೆ...

Published On :
ನವದೆಹಲಿ: ಶುಜಾತ್ ಬುಖಾರಿ ಹತ್ಯೆ ಸಂಬಂಧ ವಿವರವಾದ ವರದಿ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಜಮ್ಮು ಕಾಶ್ಮೀರದ ಪ್ರಧಾನ ಕಾರ್ಯದರ್ಶಿ ಮತ್ತು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕರಿಗೆ ನೋಟೀಸ್ ನೀಡಿದೆ.
ಜೂನ್ 14 ರಂದು ಹಿರಿಯ ಪತ್ರಕರ್ತ ಮತ್ತು 'ರೈಸಿಂಗ್ ಕಾಶ್ಮೀರ' ಸಂಪಾದಕ ಬುಖಾರಿ ಶ್ರೀನಗರ ಪ್ರೆಸ್ ಕಾಲೋನಿ ಪ್ರದೇಶದಲ್ಲಿ ಭಯೋತ್ಪಾದಕರ ಗುಂಡೇಟಿಗೆ ಬಲಿಯಾಗಿದ್ದರು.
ಬುಖಾರಿ ಹತ್ಯೆ ಸಂಬಂಧ ತ್ವರಿತ ತನಿಖೆ ಅಗತ್ಯವೆಂದು ಕಂಡುಬಂದ ಹಿನ್ನೆಲೆಯಲ್ಲಿ ಆಯೋಗವು ಕಾಶ್ಮೀರದಲ್ಲಿ ಕಳೆದೆರಡು ವರ್ಷಗಳಲ್ಲಿ ಮಾದ್ಯಮದವರ ಮೇಲೆ ನಡೆದ ದಾಳಿಯ ವಿವರಗಳನ್ನು ಒದಗಿಸಲು ರಾಜ್ಯ ಸರ್ಕಾರವನ್ನು ಕೇಳಿದೆ.
ಅಲ್ಲದೆ ಸಾವನ್ನಪ್ಪಿದ ಪತ್ರಕರ್ತರು, ಮಾದ್ಯಮ ವೃತ್ತಿನಿರತರ ಕುಟುಂಬಗಳಿಗೆ ಒದಗಿಸಿದ ಪರಿಹಾರ ಅಥವಾ ಪುನರ್ವಸತಿ ವಿವರಗಳನ್ನು ಸಹ ನೀಡುವಂತೆ ಆಯೋಗ ತಿಳಿಸಿದೆ. .
ಬುಖಾರಿ ಪೋಲೀಸ್ ರಕ್ಷಣೆಯಲ್ಲಿದ್ದರೂ ಸಹ ಗುಂಡೇಟಿಗೆ ಬಲಿಯಾಗಿದ್ದಾರೆ. ಕಣಿವೆಯಲ್ಲಿ ಪತ್ರಕರ್ತರ ಜೀವ ಸುರಕ್ಷಿತವಾಗಿಲ್ಲ ಎಂದು ಈ ಘಟನೆಯಿಂದ ಸಾಬೀತಾಗಿದೆ.
"ಇದು ಮಾನವ ಹಕ್ಕುಗಳ ಉಲ್ಲಂಘನೆ, ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ, ಪತ್ರಿಕಾ ಸ್ವಾತಂತ್ರಕ್ಕೆ ಬೆದರಿಕೆ ಇದೆ" ಆಯೋಗದ ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Shujaat Bukhari MurderNHRC noticeJammu Kashmir governmentಎನ್ಎಚ್ಆರ್ಸಿ ನೋಟಿಸ್ ಜಾಮ್ಮು ಮತ್ತು ಕಾಶ್ಮೀರ ಸರ್ಕಾರಶುಜಾತ್ ಬುಖಾರಿ ಕೊಲೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


