ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ನಿಷೇಧ: ರೆಸ್ಟೋರೆಂಟ್ ನಿಂದ ಸ್ಟೀಲ್ ಲಂಚ್ ಬಾಕ್ಸ್ ನಲ್ಲಿ ಆಹಾರ ಪಾರ್ಸೆಲ್!
ಮಹಾರಾಷ್ಟ್ರ ಸರ್ಕಾರ ರಾಜ್ಯದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಿದ ಹಿನ್ನೆಲೆಯಲ್ಲಿ...

Published On :
ಪುಣೆ: ಮಹಾರಾಷ್ಟ್ರ ಸರ್ಕಾರ ರಾಜ್ಯದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಿದ ಹಿನ್ನೆಲೆಯಲ್ಲಿ ಪುಣೆಯ ರೆಸ್ಟೋರೆಂಟ್ ವೊಂದು ತನ್ನ ಗ್ರಾಹಕರಿಗೆ ಸ್ಟೀಲ್ ಲಂಚ್ ಬಾಕ್ಸ್ ನಲ್ಲಿ ಆಹಾರವನ್ನು ಪಾರ್ಸೆಲ್ ನೀಡುವ ವ್ಯವಸ್ಥೆ ಜಾರಿಗೆ ತಂದಿದೆ.
ಸ್ಟೀಲ್ ಲಂಚ್ ಬಾಕ್ಸ್ ಗಳನ್ನು ಹೊಟೇಲ್ ನವರೇ ಗ್ರಾಹಕರಿಗೆ ನೀಡ್ತಿದ್ದಾರೆ. ಗ್ರಾಹಕರ ಟೇಕ್ ಅವೇ ಆರ್ಡರ್ ಗಳನ್ನ ಕ್ಯಾರಿಯರ್ ಗಳಲ್ಲಿಯೇ ಕಳುಹಿಸುತ್ತಿದ್ದಾರೆ. ಆಹಾರ ಸೇವಿಸಿದ ಬಳಿಕ ಆ ಕ್ಯಾರಿಯರ್ ಗಳನ್ನ ಮತ್ತೆ ರೆಸ್ಟೋರೆಂಟ್ ಗೆ ತಂದುಕೊಡುವಂತೆ ಗ್ರಾಹಕರಿಗೆ ಹೇಳ್ತಿದ್ದಾರೆ.
ಲಂಚ್ ಬ್ಯಾಕ್ಸ್ ಗಾಗಿ ರೆಸ್ಟೋರಂಟ್ ಸಿಬ್ಬಂದಿ 200 ರುಪಾಯಿ ಠೇವಣಿ ತೆಗೆದುಕೊಳ್ತಿದ್ದಾರೆ. ಕ್ಯಾರಿಯರ್ ಮರಳಿ ತಲುಪಿದ ಬಳಿಕ ಆ 200 ರುಪಾಯಿಯನ್ನ ಗ್ರಾಹಕರಿಗೆ ವಾಪಸ್ ನೀಡಲಾಗುತ್ತಿದೆ.
ರೆಸ್ಟೋರೆಂಟ್ ಸಿಬ್ಬಂದಿಯ ಈ ಸಾಮಾಜಿಕ ಕಳಕಳಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.
ರಾಜ್ಯ ಸರ್ಕಾರದ ನಿರ್ಧಾವನ್ನು ನಾವು ಸ್ವಾಗತಿಸುತ್ತೇವೆ. ಸರ್ಕಾರದ ನಿರ್ಧಾರ ಪರಿಸರ ಸ್ನೇಹಿಯಾಗಿದೆ ಎಂದು ರೆಸ್ಟೋರೆಂಟ್ ಮಾಲೀಕ ಗಣೇಶ್ ಶೆಟ್ಟಿ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Maharashtrarestaurantರೆಸ್ಟೋರೆಂಟ್Plastic Banಮಹಾರಾಷ್ಟ್ರ ಪ್ಲಾಸ್ಟಿಕ್ ನಿಷೇಧsteel lunch boxesಸ್ಟೀಲ್ ಲಂಚ್ ಬಾಕ್ಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


