ದೇಶ

ವಿದ್ಯುತ್ ಬಿಲ್ ಪಾವತಿಸದ ಕಂಪನಿಗಳ ಹೆಸರು ಬಹಿರಂಗಪಡಿಸಬೇಕಾಗುತ್ತೆ: ಕಿರಣ್ ಬೇಡಿ ಎಚ್ಚರಿಕೆ

120 ಕೋಟಿ ರೂ ಮೊತ್ತದ ವಿದ್ಯುತ್ ಬಿಲ್ ಪಾವತಿ ಬಾಕಿ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪಾಂಡಿಚೆರಿ ರಾಜ್ಯಪಾಲರಾದ ಕಿರಣ್ ಬೇಡಿ ವಿದ್ಯುತ್ ಬಿಲ್ ಪಾವತಿ ಮಾಡದವರ ಹೆಸರನ್ನು ಬಹಿರಂಗಪಡಿಸಿ

ವಿದ್ಯುತ್ ಬಿಲ್ ಪಾವತಿಸದ ಕಂಪನಿಗಳ ಹೆಸರು ಬಹಿರಂಗಪಡಿಸಬೇಕಾಗುತ್ತೆ: ಕಿರಣ್ ಬೇಡಿ ಎಚ್ಚರಿಕೆ
ಕಿರಣ್ ಬೇಡಿ
Published On :
ಪಾಂಡಿಚರಿ: 120 ಕೋಟಿ ರೂ ಮೊತ್ತದ ವಿದ್ಯುತ್ ಬಿಲ್ ಪಾವತಿ ಬಾಕಿ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪಾಂಡಿಚೆರಿ ರಾಜ್ಯಪಾಲರಾದ ಕಿರಣ್ ಬೇಡಿ ವಿದ್ಯುತ್ ಬಿಲ್ ಪಾವತಿ ಮಾಡದವರ ಹೆಸರನ್ನು ಬಹಿರಂಗಪಡಿಸಿ ಅವಮಾನ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. 
ವಿದ್ಯುತ್ ಬಿಲ್ ಪಾವತಿ ಮಾಡದೇ ಇರುವವರ ಹೆಸರುಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ ಎಫ್ಎಂ ರೇಡಿಯೋ ಚಾನಲ್ ಗಳಲ್ಲಿಯೂ ಪ್ರಸಾರ ಮಾಡಲಾಗುವುದು ಎಂದು ಕಿರಣ್ ಬೇಡಿ ಎಚ್ಚರಿಕೆ ನೀಡಿದ್ದಾರೆ. ವಿವಿಧ ವರ್ಗದ ವಿದ್ಯುತ್ ಬಳಕೆದಾರರು ತಿಂಗಳುಗಳಿಂದ ಪಾವತಿ ಮಾಡದೇ ಉಳಿಸಿಕೊಂಡಿರುವ ವಿದ್ಯುತ್ ಬಿಲ್ 120 ಕೋಟಿ ರೂಪಾಯಿಯಷ್ಟಾಗಿದೆ. 
ವಾಣಿಜ್ಯ ಕೈಗಾರಿಕಾ ಹಾಗೂ ಗೃಹ ವಿಭಾಗಗಳ ವಿದ್ಯುತ್ ಬಳಕೆದಾರರು ವಿದ್ಯುತ್ ಬಿಲ್ ಪಾವತಿಸುವವರ ಪಟ್ಟಿಯಲ್ಲಿದ್ದು ಬಾಕಿ ಮೊತ್ತವನ್ನು ಪಡೆಯುವುದಕ್ಕೆ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಕಿರಣ್ ಬೇಡಿ ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.