ದೇಶ

ಸೈನಿಕನ ಪತ್ನಿ ಹತ್ಯೆಯಲ್ಲಿ ಭಾಗಿ ಆರೋಪ, ಸೇನೆಯ ಮೇಜರ್ ಬಂಧನ

ಪಶ್ಚಿಮ ದೆಹಲಿಯಲ್ಲಿ ಮತ್ತೊಬ್ಬ ಸೇನಾ ಮೇಜರ್ ಪತ್ನಿಯ ಹತ್ಯೆಯಲ್ಲಿ ಭಾಗಿಯಾದ ಆರೋಪದ ಮೇರೆಗೆ ಭಾರತೀಯ ಸೇನೆಯ ಮೇಜರ್ ಒಬ್ಬರನ್ನು ಉತ್ತರ ಪ್ರದೇಶದ ಮೀರತ್ ನಲ್ಲಿ ಬಂಧಿಸಲಾಗಿದೆ.

ಸೈನಿಕನ ಪತ್ನಿ ಹತ್ಯೆಯಲ್ಲಿ ಭಾಗಿ ಆರೋಪ, ಸೇನೆಯ ಮೇಜರ್ ಬಂಧನ
The victim Shailja Dwivedi the accused Nikhil Handa
Published On :
ನವದೆಹಲಿ:  ಪಶ್ಚಿಮ ದೆಹಲಿಯಲ್ಲಿ ಮತ್ತೊಬ್ಬ ಸೇನಾ ಮೇಜರ್ ಪತ್ನಿಯ ಹತ್ಯೆಯಲ್ಲಿ ಭಾಗಿಯಾದ ಆರೋಪದ ಮೇರೆಗೆ  ಭಾರತೀಯ ಸೇನೆಯ ಮೇಜರ್  ಒಬ್ಬರನ್ನು  ಉತ್ತರ ಪ್ರದೇಶದ ಮೀರತ್ ನಲ್ಲಿ ಬಂಧಿಸಲಾಗಿದೆ.
ದೆಹಲಿಯ ಕಾಂಟೋನ್ಮೆಂಟ್  ಬಳಿಯ ಬ್ರಾರ್ ಬಳಿ  ಕತ್ತು ಸೀಳಿದ ರೀತಿಯಲ್ಲಿ ಆ ಮಹಿಳೆಯ ಮೃತ ದೇಹ ಕಂಡುಬಂದಿತ್ತು.
ಮೃತ ಮಹಿಳೆಯನ್ನು ಶೈಲಾಜ ದ್ವಿವೇದಿ ಎಂದು ಗುರುತಿಸಿದ ಪೊಲೀಸರು ಅಪಘಾತದಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ಮಾಹಿತಿ ನೀಡಿದ್ದರು.
ಶೈಲಾಜ ದ್ವಿವೇದಿ ಹಾಗೂ ಆಕೆಯ ಪತಿ ಅಮಿತ್ ದ್ವಿವೇದಿ ಪಶ್ಚಿಮ ದೆಹಲಿ ನಾರೈನಾ ಪ್ರದೇಶಲ್ಲಿ  ಆರು ವರ್ಷದ ಮಗನೊಂದಿಗೆ ಸೇನಾ ವಸತಿ ಸಂಕೀರ್ಣದಲ್ಲಿ ವಾಸಿಸುತ್ತಿದ್ದರು. ದೀಮಾಪುರ ಹಾಗೂ ನಾಗಲ್ಯಾಂಡ್ ನಲ್ಲಿ ಅವರು  ಕೆಲಸದಲ್ಲಿದ್ದರಿಂದ  ಇತ್ತೀಚಿಗೆ ಅವರು ತರಬೇತಿಗಾಗಿ ದೆಹಲಿಯಲ್ಲಿ ವಾಸಿಸುತ್ತಿದ್ದರು ಎಂಬ ಮಾಹಿತಿ ತಿಳಿದುಬಂದಿದೆ.
ಮೃತ ದೇಹ ಪರಿಶೀಲನೆ ಬಳಿಕ  ಕತ್ತು ಸೀಳಿ ಕೊಲೆ ಮಾಡಿರುವುದು ಕಂಡುಬಂದಿದೆ. ನಂತರ ಆರೋಪಿ ಆಕೆಯ ಮುಖದ ಮೇಲೆ ಕಾರು ಚಲಾಯಿಸಿ ಅಪಘಾತ ಎಂದು ಬಿಂಬಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಮಹಿಳೆಯ ಪತಿ ಕೆಲಸ ಮಾಡುತ್ತಿದ್ದ ಕಚೇರಿಯ ಡ್ರೈವರ್ ನಿನ್ನೆ ದಿನ ಆಕೆಯನ್ನು ಸೇನಾ ಆಸ್ಪತ್ರೆ ಬಳಿಗೆ ಡ್ರಾಪ್ ಮಾಡಿದ್ದರು. ಆದರೆ, ನಂತರ ಆಕೆಯನ್ನು ಪಿಕ್ ಅಪ್ ಮಾಡಲು ಮತ್ತೆ ಬಂದಾಗ ಆಕೆ ಬರಲೇ ಇಲ್ಲ. ಆಕೆ ಫಿಜಿಯೋಥೆರಪಿಗೂ ಹಾಜರಾಗಿಲ್ಲ ಎಂಬುದು ತಿಳಿದುಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.