'ಪತ್ರಕರ್ತರೇ ಎಚ್ಚರ.. ವರದಿ ಶೈಲಿ ಬದಲಾಗದಿದ್ದರೆ ಶುಜಾತ್ ಬುಖಾರಿಗಾದ ಗತಿಯೇ ನಿಮಗೂ ಬರುತ್ತದೆ'
ವರದಿ ಶೈಲಿ ಬದಲಾಗದಿದ್ದರೆ ಶುಜಾತ್ ಬುಖಾರಿಗಾದ ಗತಿಯೇ ನಿಮಗೂ ಬರುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡ ಶಾಸಕ ಚೌಧರಿ ಲಾಲ್ ಸಿಂಗ್ ಪತ್ರಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ.

Published On :
ಕಥುವಾ: ಪತ್ರಕರ್ತರೇ ಎಚ್ಚರ.. ವರದಿ ಶೈಲಿ ಬದಲಾಗದಿದ್ದರೆ ಶುಜಾತ್ ಬುಖಾರಿಗಾದ ಗತಿಯೇ ನಿಮಗೂ ಬರುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡ ಶಾಸಕ ಚೌಧರಿ ಲಾಲ್ ಸಿಂಗ್ ಪತ್ರಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ.
ಜಮ್ಮುವಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಚೌಧರಿ ಲಾಲ್ ಮಾತನಾಡಿದ ಸಿಂಗ್, ಕಥುವಾ ಅತ್ಯಾಚಾರ ಪ್ರಕರಣದ ವರದಿಯ ದಾಟಿಯನ್ನು ಬದಲಿಸಿಕೊಳ್ಳದಿದ್ದರೆ ಇತ್ತೀಚೆಗೆ ಹತ್ಯೆಯಾದ ಪತ್ರಕರ್ತ ಶುಜಾತ್ ಬುಖಾರಿ ಗತಿಯೇ ನಿಮಗೂ ಬರುತ್ತದೆ. ನೀವು ಬದಕುವ ಮತ್ತು ಬರೆಯುವ ನಡುವೆ ಸ್ಪಷ್ಟವಾದ ಗೆರೆ ಎಳೆದುಕೊಳ್ಳಿ. ಬರವಣಿಗೆಯ ಶೈಲಿ ಬದಲಿಸಿಕೊಳ್ಳಿ. ಇಲ್ಲದಿದ್ದರೆ ಬದುಕು ದುರ್ಬರವಾಗುತ್ತದೆ. ಶುಜಾತ್ ಬುಖಾರಿ ಸ್ಥಿತಿ ತಂದುಕೊಳ್ಳಬೇಡಿ ಎಂದು ಬಹಿರಂಗವಾಗಿಯೇ ಬೆದರಿಕೆ ಹಾಕಿದ್ದಾನೆ.
ಜಮ್ಮು ಮತ್ತು ಕಾಶ್ಮೀರದ ಕಠುವಾದಲ್ಲಿ ಎಂಟು ವರ್ಷದ ಮುಸ್ಲಿಂ ಕುರಿಗಾಹಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಅಮಾನುಷವಾಗಿ ಹತ್ಯೆ ಮಾಡಲಾಗಿತ್ತು. ಕಥುವಾ ಅತ್ಯಾಚಾರ ಪ್ರಕರಣದ ಆರೋಪಿಗಳ ಪರ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಪಿಡಿಪಿ–ಬಿಜೆಪಿ ಸರ್ಕಾರದ ಅರಣ್ಯ ಸಚಿವರಾಗಿದ್ದ ಚೌಧರಿ ಲಾಲ್ ಸಿಂಗ್ ಅವರನ್ನುಇತ್ತೀಚೆಗಷ್ಟೇ ಸಂಪುಟದಿಂದ ಕೈಬಿಡಲಾಗಿತ್ತು.
ಈ ಹಿಂದೆ ಇದೇ ಚೌಧರಿ ಲಾಲ್ ಸಿಂಗ್, ದೇಶ ವಿಭಜನೆಯ ಸಂದರ್ಭದಲ್ಲಿ ಕಾಶ್ಮೀರದಲ್ಲಿ ನಡೆದ ಮುಸ್ಲಿಮರ ನರಮೇಧ ಮರುಕಳಿಸುತ್ತದೆ ಎಂದು ಕಾಶ್ಮೀರದ ಗುಜ್ಜರ್ ಸಮುದಾಯಕ್ಕೆ ಸೇರಿದ ಬೆದರಿಕೆ ಒಡ್ಡಿ ಸುದ್ದಿಯಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
bjpಶ್ರೀನಗರSrinagarಜಮ್ಮು ಮತ್ತು ಕಾಶ್ಮೀರJammu and KashmirJournalistಪತ್ರಕರ್ತರುShujaat Bukhari MurderChoudary Lal Singhಶೌಜಾತ್ ಬುಖಾರಿ ಕೊಲೆಚೌದರಿ ಲಾಲ್ ಸಿಂಗ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


