ದೇಶ

ಶಾಲೆಯ ವಿರುದ್ಧ ಸೇಡಿಗಾಗಿ ಕಿರಿಯ ವಿದ್ಯಾರ್ಥಿ ಕೊಲೆ, 10 ನೇ ತರಗತಿ ಬಾಲಕ ಪೊಲೀಸ್ ವಶ

ವಡೋದರ ಶಾಲೆಯ 9 ನೇ ತರಗತಿಯ ವಿದ್ಯಾರ್ಥಿ ದೇವ್ ತಾದ್ವಿಯನ್ನು , ತಾನೇ ಕೊಲೆ ಮಾಡಿರುವುದಾಗಿ ಶಂಕಿತ ಶ್ರೀ ಭಾರತಿ ವಿದ್ಯಾಲಯದ 10 ನೇ ತರಗತಿ ವಿದ್ಯಾರ್ಥಿ ತಪ್ಪೊಪ್ಪಿಕೊಂಡಿದ್ದಾನೆ.

ಶಾಲೆಯ ವಿರುದ್ಧ ಸೇಡಿಗಾಗಿ ಕಿರಿಯ ವಿದ್ಯಾರ್ಥಿ ಕೊಲೆ,  10 ನೇ ತರಗತಿ ಬಾಲಕ  ಪೊಲೀಸ್ ವಶ
ಶಾಲೆಯ ಚಿತ್ರ
Published On :
 ವಡೋದರ: ವಡೋದರದ ಶಾಲೆಯೊಂದರಲ್ಲಿ ಶುಕ್ರವಾರ ನಡೆದಿದ್ದ 9 ನೇ ತರಗತಿ ವಿದ್ಯಾರ್ಥಿ ಕೊಲೆ ಪ್ರಕರಣ, ಕಳೆದ ವರ್ಷ ಹರಿಯಾಣದ ಗುರುಗ್ರಾಮ್ ನಲ್ಲಿ ನಡೆದಿದ್ದ ಏಳು ವರ್ಷದ ಬಾಲಕನ ಕೊಲೆ ಪ್ರಕರಣದಂತೆ ಕಂಡುಬಂದಿದೆ.
ಎರಡು ಪ್ರಕರಣದಲ್ಲಿಯೂ ಶೌಚಗೃಹದಲ್ಲಿಯೇ ಕೊಲೆಯಾಗಿದೆ. ಎರಡೂ ಪ್ರಕರಣಗಳಲ್ಲೂ ಹಿಂದಿನ  ವರ್ತನೆಯ ಸಮಸ್ಯೆಗಳನ್ನು ಪ್ರದರ್ಶಿಸಿವೆ.
ವಡೋದರ ಶಾಲೆಯ   9 ನೇ ತರಗತಿಯ ವಿದ್ಯಾರ್ಥಿ ದೇವ್  ತಾದ್ವಿಯನ್ನು , ತಾನೇ  ಕೊಲೆ ಮಾಡಿರುವುದಾಗಿ  ಶಂಕಿತ  ಶ್ರೀ ಭಾರತಿ ವಿದ್ಯಾಲಯದ 10 ನೇ ತರಗತಿ ವಿದ್ಯಾರ್ಥಿ  ತಪ್ಪೊಪ್ಪಿಕೊಂಡಿದ್ದಾನೆ.ಉಪಾದ್ಯಾಯರು ಬೈದಿದ್ದರಿಂದ  ಶಾಲೆ ಮುಚ್ಚಿಸುವ ಸೇಡಿಗಾಗಿ  ಕೊಲೆ ಮಾಡಿದ್ದಾಗಿ  ಆರೋಪಿತ ವಿದ್ಯಾರ್ಥಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೊಸದಾಗಿ ದಾಖಲಾಗಿದ್ದ 9 ನೇ ತರಗತಿ ವಿದ್ಯಾರ್ಥಿ ತಾದ್ವಿಗೆ ಹಲವು ಬಾರಿ ಚಾಕುವಿನಿಂದ ಇರಿದು ಗಾಯಗೊಳಿಸಲಾಗಿತ್ತು.ಆತನ ಮೃತದೇಹದ ಪಕ್ಕದಲ್ಲಿಯೇ  12 ಇಂಚು ಉದ್ದದ ಚಾಕು ದೊರೆತಿತ್ತು.
ಶಾಲೆಗೆ ಹೊಂದಿಕೊಂಡಿರುವ ದೇವಾಲಯದ ಮೇಲ್ಛಾವಣೆಯಲ್ಲಿದ್ದ ಸ್ಯಾಟ್ ಚೆಲ್ ನ್ನು ವಶಪಡಿಸಿಕೊಂಡು  ನೋಡಿದ್ದಾಗ ಅದರಲ್ಲಿ ತೀಕ್ಷ್ಮವಾದ ಸಾಧನಗಳು, ಮೆಣಸಿನಕಾಯಿ ಪುಡಿ, ರಕ್ತಲೇಪಿತ ಶರ್ಟ್  ಕಂಡುಬಂದಿತ್ತು. ತರಗತಿಕೊಠಡಿಯಿಂದ ಆರೋಪಿ ಬ್ಯಾಗ್ ನ್ನು ಅಲ್ಲಿಗೆ ಎಸೆದಿರುವ ಸಾಧ್ಯತೆ ಇದೆ  ಎಂದು  ಪೊಲೀಸರು ಹೇಳಿದ್ದಾರೆ.
 ಆರೋಪಿ ಮೃತಪಟ್ಟ ತಾದ್ವಿ ಜೊತೆ ಯಾವುದೇ ದ್ವೇಷ ಹೊಂದಿರಲಿಲ್ಲ. ತಾದ್ವಿ 10 ದಿನಗಳ ಹಿಂದೆ ದಾಖಲಾದ ಬಗ್ಗೆ ಆತನಿಗೂ ಗೊತಿತ್ತು. ಈ ಹಿಂದೆ ಕೂಡಾ ಆರೋಪಿ ವಿದ್ಯಾರ್ಥಿ ಅನುಚಿತವಾಗಿ ವರ್ತಿಸಿ ಶಿಕ್ಷಕರಿಂದ ಬೈಯಿಸಿಕೊಂಡಿದ್ದ ಎಂದು ವಡೋದಾರ ಪೊಲೀಸ್ ಆಯುಕ್ತ ಮನೋಜ್ ಶಶಿಧರ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.