ಹವಾನಿಯಂತ್ರಕದ ತಾಪಮಾನ 24 ಡಿಗ್ರಿ ನಿಗದಿಗೆ ಇಂಧನ ಸಚಿವಾಲಯದ ಸಲಹೆ
ಹವಾನಿಯಂತ್ರಕದ ತಾಪಮಾನವನ್ನು 24 ಡಿಗ್ರಿಗೆ ನಿಗದಿಪಡಿಸಲು ಇಂಧನ ಸಚಿವಾಲಯ ಉತ್ಪಾದಕ ಸಂಸ್ಥೆಗಳಿಗೆ ಸಲಹೆ ನೀಡಿದೆ.

Published On :
ನವದೆಹಲಿ: ಹವಾನಿಯಂತ್ರಕದ ತಾಪಮಾನವನ್ನು 24 ಡಿಗ್ರಿಗೆ ನಿಗದಿಪಡಿಸಲು ಇಂಧನ ಸಚಿವಾಲಯ ಉತ್ಪಾದಕ ಸಂಸ್ಥೆಗಳಿಗೆ ಸಲಹೆ ನೀಡಿದೆ.
ಮುಂದಿನ ದಶಕಗಳಲ್ಲಿ ಇಂಧನ ಪೂರೈಕೆಗೆ ಹೆಚ್ಚು ಬೇಡಿಕೆ ಉಂಟಾಗಲಿದ್ದು, ಇಂಧನ ಕ್ಷಮತೆಯನ್ನು ಉತ್ತೇಜಿಸಲು ಹಾಗೂ ಗ್ರೀನ್ ಹೌಸ್ ಗ್ಯಾಸ್ ಎಮಿಷನ್ ನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲು ಇಂಧನ ಸಚಿವಾಲಯ ಮುಂದಾಗಿದೆ.
ಡೀಫಾಲ್ಟ್ ತಾಪಮಾನವನ್ನು 24 ಡಿಗ್ರಿ ಸೆಲ್ಸಿಯಸ್ ಗೆ ಇಳಿಸುವುದು ಕಡ್ಡಾಯವಾಗುವ ಸಾಧ್ಯತೆಗಳೂ ಇದೆ ಎಂದು ಇಂಧನ ಸಚಿವಾಲಯದ ಹೇಳಿಕೆ ಮೂಲಕ ತಿಳಿದುಬಂದಿದೆ.
ಇಂಧನ ಸಚಿವ ಆರ್ ಕೆ ಸಿಂಗ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹವಾನಿಯಂತ್ರಕ ಉತ್ಪಾದಕರಿಗೆ ಈ ಅಂಶವನ್ನು ಸ್ಪಷ್ಟಪಡಿಸಲಾಗಿದ್ದು, 24 ಡಿಗ್ರಿ ತಾಪಮಾನ ನಿಗದಿಪಡಿಸುವುದಕ್ಕೆ ಸಂಬಂಧಿಸಿದಂತೆ ಸಲಹಾಪತ್ರವನ್ನು ಕಳಿಸುವುದಕ್ಕೂ ನಿರ್ಧರಿಸಲಾಗಿದೆ. ಎಸಿಯಲ್ಲಿನ ಡೀಫಾಲ್ಟ್ ಟೆಂಪರೇಚರ್ ನ್ನು ಪ್ರತಿ ಬಾರಿ ಒಂದು ಡಿಗ್ರಿ ತಾಪಮಾನ ಏರಿಕೆ ಮಾಡಿದಾಗಲೂ ಒಟ್ಟಾರೆ ವಿದ್ಯುತ್ ಬಳಕೆಯಲ್ಲಿನ ಶೇ.6 ರಷ್ಟನ್ನು ಉಳಿತಾಯ ಮಾಡಬಹುದು ಎಂದು ಸಿಂಗ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


