ದೇಶ

ಜಿಎಸ್ ಟಿಯಿಂದ ಭಾರತದ ಆರ್ಥಿಕತೆಯಲ್ಲಿ ಸಕಾರಾತ್ಮಕ ಬದಲಾವಣೆ - ಪ್ರಧಾನಿ ಮೋದಿ

ಭಾರತದ ಆರ್ಥಿಕತೆಯಲ್ಲಿ ಸರಕು ಮತ್ತು ಸೇವಾ ತೆರಿಗೆ - ಜಿಎಸ್ ಟಿ ಸಕಾರಾತ್ಮಕ ಬದಲಾವಣೆ ತಂದಿದೆ ಎಂದು ಪ್ರಧಾನಿ ನರೇಂದ್ರಮೋದಿ ಪುನರ್ ಉಚ್ಚರಿಸಿದ್ದಾರೆ.

ಜಿಎಸ್ ಟಿಯಿಂದ  ಭಾರತದ ಆರ್ಥಿಕತೆಯಲ್ಲಿ  ಸಕಾರಾತ್ಮಕ ಬದಲಾವಣೆ - ಪ್ರಧಾನಿ ಮೋದಿ
ನರೇಂದ್ರಮೋದಿ
Published On :

ನವದೆಹಲಿ: ಭಾರತದ ಆರ್ಥಿಕತೆಯಲ್ಲಿ ಸರಕು ಮತ್ತು ಸೇವಾ ತೆರಿಗೆ - ಜಿಎಸ್ ಟಿ ಸಕಾರಾತ್ಮಕ ಬದಲಾವಣೆ ತಂದಿದೆ ಎಂದು ಪ್ರಧಾನಿ ನರೇಂದ್ರಮೋದಿ ಪುನರ್ ಉಚ್ಚರಿಸಿದ್ದಾರೆ.

ದೆಹಲಿಯ ಇಂಡಿಯ ಗೇಟ್ ಬಳಿ  ಸ್ಥಾಪಿಸಲಾಗುತ್ತಿರುವ  ವಾಣಿಜ್ಯ ಇಲಾಖೆಯ ನೂತನ ಕಚೇರಿ ಸಂಕೀರ್ಣ ಕಟ್ಟಡ ವಾಣಿಜ್ಯ ಭವನಕ್ಕೆ  ಇಂದು ಶಂಕುಸ್ಥಾಪನೆ  ನೆರವೇರಿಸಿ ಮಾತನಾಡಿದ ಅವರು, ಮುಂದಿನ ವರ್ಷದ ಡಿಸೆಂಬರ್ ಗೂ ಮುಂಚಿತವಾಗಿ ಈ ಕಟ್ಟಡ ಪೂರ್ಣಗೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಪ್ರಸ್ತುತ ತಂತ್ರಜ್ಞಾನದ ಮೂಲಕ ಸುಲಭ ರೀತಿಯಲ್ಲಿ ವ್ಯವಹರಿಸಬಹುದಾಗಿದೆ. ಮುಂದಿನ ದಿನಗಳಲ್ಲೂ ಇದು ಮತ್ತಷ್ಟು ಅಭಿವೃದ್ದಿಯಾಗಲಿದ್ದು, ಜಿಎಸ್ ಟಿ ಆರ್ಥಿಕತೆಯಲ್ಲಿ ಸಕಾರಾತ್ಮಕ ಪರಿಣಾ ತಂದಿದೆ. ಹಣಕಾಸು ಚಟುವಟಿಕೆಗಳು ಕ್ಷಿಪ್ರವಾಗಿ ದೊರೆಯುವಂತಾಗಿವೆ ಎಂದರು.

ಸುಮಾರು 226 ಕೋಟಿ ರೂಪಾಯಿಗಳ ವೆಚ್ಚದಲ್ಲಿ  4.33 ಎಕರೆ ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದ್ದು,  ಒಂದು ಸಾವಿರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯನಿರ್ವಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ.

ಕಟ್ಟಡದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಚಾಲಿತ  ಸೌಲಭ್ಯಗಳನ್ನು  ಒದಗಿಸಲಾಗುತ್ತಿದ್ದು, ಕಾಗದ ರಹಿತ ನೆಟ್ ವರ್ಕಿಂಗ್ ವ್ಯವಸ್ಥೆ ಇರಲಿದೆ.  ಈ ಹೊಸ ಕಟ್ಟಡ ಭಾರತದ ಆರ್ಥಿಕತೆಯ ಬೆಳವಣೆಗೆ ಮಾತ್ರವಲ್ಲದೇ, ಆಡಳಿತದಲ್ಲಿ ತಂತ್ರಜ್ಞಾನ  ಅಳವಡಿಕೆಯನ್ನು ಪ್ರತಿಬಿಂಬಿಸಲಿದೆ ಎನ್ನಲಾಗಿದೆ.



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.